Q-4: ಇನ್ಫೋಸಿಸ್ ಮತ್ತೆ ನಿರಾಶೆಯ ಮಡುವಿಗೆ

infosys-q4-2013-results-disappoints
ಮುಂಬೈ, ಏ.12: ದೇಶದ ಎರಡನೆಯ ಐಟಿ ದಿಗ್ಗಜ ಕಂಪನಿಯಾದ ಬೆಂಗಳೂರಿನ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿ ಮತ್ತೆ ನಿರಾಶೆಯ ಮಡುವಿಗೆ ತಳ್ಳಲ್ಪಟ್ಟಿದೆ. 2013 ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕವು ನಿರೀಕ್ಷಿತ ಫಲಿತಾಂಶ ಸಾಧಿಸದೆ ಕಳಪೆಯಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿ, ಮಾರುಕಟ್ಟೆಯಲ್ಲಿ ಜೀವಂತಿಕೆ ಮೆರೆದಿದ್ದ ಕಂಪನಿ ಮತ್ತೆ ಹಿಂದಿನ ಫಲಿತಾಮಶಗಳನ್ನೇ ಮುಂದುವರಿಸಿದ್ದು ನಿರಾಶೆ ಮೂಡಿಸಿದೆ. ಕಂಪನಿಯ ಒಟ್ಟು ಆದಾಯ ಅದರಲ್ಲೂ ಡಾಲರ್ ರೂಪದ ಆದಾಯ ಸಪ್ಪೆಯಾಗಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ಇನ್ಫಿ ಷೇರು ಮೌಲ್ಯ ಇಂದು ಬೆಳಗ್ಗೆ ಧಡಾರನೆ ಕುಸಿದುಬಿದ್ದಿದೆ.

ಆದಾಗ್ಯೂ, 2013 ಹಣಕಾಸು ವರ್ಷದ 4ನೆಯ ತ್ರೈಮಾಸಿಕದಲ್ಲಿ ಇನ್ಫಿ, 2394 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದರೆ ಈ ಆದಾಯ ಕಂಪನಿಯ ಇತರೆ ಮೂಲಗಳಿಂದ ಬಂದಿದ್ದಾಗಿದೆ. ಹಾಲಿ ಫಲಿತಾಂಶದ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ.

ಡಾಲರ್ ರೂಪದಲ್ಲಿ ಕಂಪನಿಯು 1938 ದಶಲಕ್ಷ ಡಾಲರ್ ಆದಾಯ ಗಳಿಸಿದೆ. ಆದರೆ ಮಾರುಕಟ್ಟೆ ವಿಶ್ಲೇಷಕರು 1987 ದಶಲಕ್ಷ ಡಾಲರ್ ಆದಾಯ ಅಂದಾಜಿಸಿದ್ದರು. ಕಂಪನಿಯ ಆದಾಯ ಶೇ. 6-10ರಷ್ಟು ಏರಿಕೆ ಕಂಡಿದೆ. ಆದರೆ ನಾಸ್ಕಾಮ್ ಪ್ರಕಾರ ಐಟಿ ಕ್ಷೇತ್ರ ಶೇ. 12-14ರಷ್ಟು ಪ್ರಗತಿಯನ್ನು ಸಾಧಿಸಬೇಕಿದೆ.

ಐಟಿ ಕ್ಷೇತ್ರಕ್ಕೆ ಜಾಗತಿಕ ಆರ್ಥಿಕ ಅಸ್ಥಿರತೆ ಇನ್ನೂ ಬಲವಾಗಿ ಕಾಡುತ್ತಿದೆ. ಆದಾಗ್ಯೂ ಕಂಪನಿ ಸದೃಢವಗಾಗಿ ಬೆಳೆಯುತ್ತಿದೆ. ನಮ್ಮಕಂಪನಿಯ ಗ್ರಾಹಕರಿಗೇ ಇದೇ ಬೇಕಾಗಿರುವುದು ಎಂದು ಇನ್ಫಿ ಸಿಇಒ ಎಸ್ ಡಿ ಶಿಬುಲಾಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+