ಬೌದ್ಧ ಸನ್ಯಾಸಿಗಳಿಂದ ಅಪ್ರಾಪ್ತೆಯ ಅತ್ಯಾಚಾರ

ಆರೋಪಿ ಬೌದ್ಧ ಸನ್ಯಾಸಿಗಳನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲ ಕಲಿಂಪಾಂಗ್ ಪಟ್ಟಣದ 11ನೇ ಮೈಲುಗಲ್ಲು ಬಳಿಯಿರುವ ಬೌದ್ಧರ ವಿರಕ್ತಧಾಮಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರೇಪ್ ನಡೆದಿದ್ದು ಯಾವಾಗ:
ಮಂಗಳವಾರ ರಾತ್ರಿ 7.30ರಲ್ಲಿ ಒಟ್ಟು ನಾಲ್ವರು ಸನ್ಯಾಸಿಗಳು ಮನೆಗೆ ಮರಳುತ್ತಿದ್ದ ಬಾಲಕಿಯ ಮೇಲೆ ಮುಗಿಬಿದ್ದಿದ್ದಾರೆ. ಮನೆಗೆ ವಾಪಸಾಗುತ್ತಿದ್ದ ಬಾಲಕಿಯನ್ನು ಮನೆಯವರೆಗೂ ಬಿಡುವುದಾಗಿ ವ್ಯಾನಿನಲ್ಲಿ ಸಂಚರಿಸುತ್ತಿದ್ದ ಸನ್ಯಾಸಿಗಳು ಪುಸಲಾಯಿಸಿದ್ದಾರೆ. ಬಾಲಕಿ ಇದಕ್ಕೆ ಮೊದಲು ಹಿಂದೇಟು ಹಾಕಿದ್ದಾಳಾದರೂ ನಂತರ ಸನ್ಯಾಸಿಗಳು ಹೆಚ್ಚು ಒತ್ತಡ ಹಾಕಿದ್ದರಿಂದ ಒಪ್ಪಿಕೊಂಡಿದ್ದಾಳೆ. ಜತೆಗೆ ಕತ್ತಲೆಯೂ ಆವರಿಸಿದ್ದರಿಂದ ಬಾಲಕಿ ವ್ಯಾನ್ ಹತ್ತಿದ್ದಾಳೆ.
ಇದಕ್ಕೇ ಕಾಯುತ್ತಿದ್ದ ಸನ್ಯಾಸಿಗಳು ವ್ಯಾನನನ್ನು ಸೀದಾ ಸಮೀಪದ ಅರಣ್ಯ ಪ್ರದೇಶದೊಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಆರೋಪಿಗಳು ತಾವು ಎಸಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications