ತಮಿಳುನಾಡು : ರೈಲು ಅಪಘಾತ ಇಬ್ಬರ ಸಾವು

Express
ತಮಿಳುನಾಡು, ಏ.10 : ಬೆಂಗಳೂರಿಗೆ ಆಗಮಿಸುತ್ತಿದ್ದ ಮುಜಾಫುರ್-ಯಶವಂತಪುರ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಅರಕೋಣಂ ಬಳಿ ಹಳಿ ತಪ್ಪಿದೆ. ದುರಂತದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಸುಮಾರು 5.45ರ ಸುಮಾರಿಗೆ ಅರಕೋಣಂ ರೈಲ್ವೆ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲೇ ಹಳಿತಪ್ಪಿ ದುರಂತ ಸಂಭವಿಸಿದೆ. 11 ಬೋಗಿಗಳು ಹಳಿತಪ್ಪಿ ಉರುಳಿ ಬಿದ್ದಿವೆ. ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಜಾಫುರ್ ನಿಂದ ರೈಲು ಯಶವಂತಪುರಕ್ಕೆ ಆಗಮಿಸುತ್ತಿತ್ತು. ಇದುವರೆಗೂ ಉರುಳಿ ಬಿದ್ದ ಬೋಗಿಯಿಂದ 29 ಮಂದಿಯನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ 8 ಅಗ್ನಿ ಶಾಮಕದಗಳು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿತರವಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸಂಚಾರ ರದ್ದು : ರೈಲು ಅಪಘಾತದ ಹಿನ್ನೆಲೆಯಲ್ಲಿ ಚೆನ್ನೈನಿಂದ ತೆರಳುವ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿಗೆ ತೆರಳಬೇಕಾಗಿದ್ದ ಬೃಂದಾವನ ಎಕ್ಸ್ ಪ್ರೆಸ್, ಚೆನ್ನೈ ಕೊಯಮತ್ತೂರು ತುರುಂತೊ ಎಕ್ಸ್ ಪ್ರೆಸ್, ಲಾಲಾ ಬಾಗ್ ಎಕ್ಸ್ ಪ್ರೆಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+