ಕುಮಾರಸ್ವಾಮಿಯನ್ನು ಸೋಲಿಸೋರೇ ಇಲ್ಲ- ಅನಿತಾ

No one can defeat JDS Leader HD Kumaraswamy in elections says Anitha Kumaraswamy in Ramnagar
ರಾಮನಗರ, ಏ.8: ಅದೇನೂ ಗಂಡನ ಮೇಲಿನ ಪ್ರೀತಿಯಿಂದಾಗಿ ಹೇಳಿದರೋ ಅಥವಾ ಮುಗ್ಧರಾಗಿ ಹೇಳಿದರೋ ಅಂತೂ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ರಾಜಕೀಯ ಅಪ್ರಬುದ್ಧ ಹೇಳಿಕೆಯೊಂದನ್ನು ನೀಡಿದ್ದಾರೆ.

ಏನಪಾ ಅಂದರೆ ಈ ಕರ್ನಾಟಕ ರಾಜ್ಯದಲ್ಲಿ ತಮ್ಮ ಪತಿ ಯಾನೆ ಜೆಡಿಎಸ್ ಅಧಿನೇತಾ ಎಚ್ ಡಿ ಕುಮಾರಸ್ವಾಮಿ ಅವರನ್ನು ಸೋಲಿಸುವ ಅಭ್ಯರ್ಥಿಯೇ ಇಲ್ಲ ಕರ್ನಾಟಕದಲ್ಲಿಲ್ಲ ಎಂದು ಚನ್ನಪಟ್ಟಣ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಯಾರಾದರೂ ನಾಮ್ ಕೆ ವಾಸ್ತೆ ಸ್ಪರ್ಧಿಸಬೇಕೆ ಹೊರತು ಅವರ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಅಂತ ಅಂದುಕೊಂಡು ಕಣಕ್ಕಿಳಿಯಲು ಸಾಧ್ಯವಿಲ್ಲ. ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದೂ ಅವರು ಭವಿಷ್ಯ ನುಡಿದರು.

ಈ ಮಧ್ಯೆ, ರಾಮನಗರದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಕೆ ರಾಜು ಅವರು ಸಹ ಭವಿಷ್ಯ ನುಡಿದಿದ್ದಾರೆ.

ಅನಿತಾ ಭವಿಷ್ಯವಾಣಿ: ಕುಮಾರಸ್ವಾಮಿಯವರಿಗೆ ಜನಮನ್ನಣೆ ಇದೆ. ಇವರ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿ ರಾಜ್ಯದಲ್ಲಿ ಯಾರೂ ಇಲ್ಲ ಎಂದು ಅನಿತಾ ತಮ್ಮ ಪತಿಯ ಬಗ್ಗೆ ಹೇಳಿದ್ದಾರೆ.

ಕುಮಾರಸ್ವಾಮಿಯವರ 20 ತಿಂಗಳ ಆಡಳಿತ ರಾಜ್ಯದ ಜನತೆಯಲ್ಲಿ ಇನ್ನೂ ಹಸಿರಾಗಿಯೇ ಇದೆ. ಅವರ ಅಭಿವೃದ್ಧಿ ಯೋಜನೆಗಳಿಗೆ ಜನಮನ್ನಣೆ ದೊರೆತಿದೆ. ಈ ಹಿಂದೆ, ರಾಮನಗರ ಶಾಸಕರಾಗಿ ಅವರು ಮಾಡಿರುವ ಅಭಿವೃದ್ಧಿ ಯೋಜನೆಗಳು ಕಣ್ಣ ಮುಂದಿವೆ. ಇನ್ನು ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು ನೆರೆವೇರಬೇಕಾದರೆ ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯ ಎಂದೂ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+