ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ರಿಟೈರ್ಡ್ ಹರ್ಟ್

ನಿರೀಕ್ಷೆಯಂತೆ ಆಡಳಿತಾರೂಢ ಬಿಜೆಪಿ ಪಕ್ಷ ನಿನ್ನೆ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೃಷ್ಣಯ್ಯ ಶೆಟ್ಟಿ ಅವರ ಹೆಸರು ಇರಲಿಲ್ಲ. ಇದರಿಂದ ಬೇಸರಗೊಂಡ ಕೃಷ್ಣಯ್ಯ ಶೆಟ್ಟಿ ಅವರು ಇಂದು ಶನಿವಾರ ರಾಜಕೀಯ ನಿವೃತ್ತಿ ಪ್ರಕಟಿಸಿದ್ದಾರೆ.
ಸಮಾಜಸೇವೆ ತಮ್ಮ ಮೂಲವಾಗಿದ್ದು, ಇನ್ನು ಮುಂದೆ ಅದರಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಎಸ್ಎನ್ ಕೃಷ್ಣಯ್ಯ ಶೆಟ್ಟಿ ಅವರು ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೇಲೆ ಕಳೆದ ಚುನಾವಣೆಯಲ್ಲಿ ಗೆದ್ದುಬಂದಿದ್ದರು.
'ನಾನು ಪ್ಯೂರ್ ಲೀ ಬಿಜೆಪಿ' ಎಂದು ಸಮಯ ಸಿಕ್ಕಿದಾಗಲೆಲ್ಲಾ ಆ ಪಕ್ಷದೆಡೆಗಿನ ತಮ್ಮ ಅಖಂಡ ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದ ಕೃಷ್ಣಯ್ಯ ಶೆಟ್ರಿಗೆ ಈ ಬಾರಿ ಟಿಕೆಟ್ ಸಿಗುವುದು ಡೌಟು ಎಂಬುದು ಮಾಲೂರಿನ ಮತದಾರನಿಗೆ ಖಚಿತವಾಗಿತ್ತು.
'ನಾನು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತನಾಗುವುದಿಲ್ಲ. ನನ್ನದು ತಿರುಪತಿ ತಿಮ್ಮಪ್ಪನ ಪಕ್ಷ' ಎಂದು ಹೇಳುತ್ತಲೇ ತಾವು ತಮ್ಮ ರಾಜಕೀಯ ಗಾಡ್ ಫಾದರ್ ಯಡಿಯೂರಪ್ಪನವರಿಂದ ಇತ್ತೀಚೆಗೆ ದೂರವುಳಿದಿದ್ದರು.
ಕಟ್ಟಾ, ಶೆಟ್ಟಿ, ಸಂಪಂಗಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ. ಈ ಮೂರೂ ನಾಯಕರು ಜೈಲು ಸಹವಾಸ ಮಾಡಿರುವದೇ ಟಿಕೆಟ್ ನೀಡದಿರಲು ಸಕಾರಣವಾಗಿದೆ ಎನ್ನಲಾಗಿದೆ. (ಕಟ್ಟಾ, ಶೆಟ್ಟಿ, ಸಂಪಂಗಿಗೆ ತಿರುಪತಿ ನಾಮ)












Click it and Unblock the Notifications