ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ: ಕಟ್ಟಾ, ಸಂಪಂಗಿ, ಶೆಟ್ಟಿಗೆ ತಿರುಪತಿ ನಾಮ

By Srinath
|
Google Oneindia Kannada News

Karnataka polls no BJP tickets for Katta- Shetty- Sampangi
ಬೆಂಗಳೂರು, ಮಾ 22: ಆಡಳಿತಾರೂಢ ಬಿಜೆಪಿ ಪಕ್ಷವು ಹಾಲಿ ಶಾಸಕರಾದ ಕಟ್ಟಾ ಸುಬ್ರಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ ಮತ್ತು ವೈ ಸಂಪಂಗಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್‌ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಆದರೆ ಯಾರೇ ಟಿಕೆಟ್ ಕೊಡಲಿ/ಬಿಡಲಿ ಈ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಕೃಷ್ಣಯ್ಯ ಶೆಟ್ಟಿ ಇದ್ದಾರಲ್ಲಾ, ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದು 'ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ' ಎಂದು ಹೆಬ್ಬಾಳ ಮತ್ತು ಮಾಲೂರು ಮತದಾರರು ತಿರುಪತಿ ತಿಮ್ಮಪ್ಪನ ಮೇಲೆ ಅಣೆ-ಪ್ರಮಾಣ ಮಾಡುತ್ತಿದ್ದಾರೆ.

ಯಾಕೆಂದರೆ ಅವರು ತಮ್ಮ ಬೇಸ್ ಅನ್ನು ಹಾಗೆ ಭದ್ರಪಡಿಸಿಟ್ಟುಕೊಂಡಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಅಪ್ಪಟ ಬಿಜೆಪಿ ಕಾರ್ಯಕರ್ತರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ಧಾರಾಳವಾಗಿ ದುಡ್ಡು ಚೆಲ್ಲಿದ್ದಾರೆ.

ಅದು ಸ್ವಾಮಿ ವಿವೇಕಾನಂದ ದಿನಾಚರಣೆಯೋ, ಮತ್ತೊಂದು ಅಂತೂ ಮತದಾರರನ್ನು ಭದ್ರವಾಗಿ ತಮ್ಮ ಕಬ್ಜಾಗೆ ತೆಗೆದುಕೊಂಡಿದ್ದಾರೆ. ಮಾಲೂರಿನ ಶೆಟ್ಟಿಯಂತೂ ಅನಾದಿಕಾಲದಿಂದಲೂ ಮತದಾರನನ್ನು ಕಾಯಂ ಆಗಿ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದಾರೆ.

ಆದರೆ ಇಲ್ಲಿ ವಿಷಯ ಅದಲ್ಲ. ಏನಪಾ ಅಂದರೆ ಬಿಜೆಪಿ ಕಟ್ಟಾಳುಗಳಿಗೆ ಟಿಕೆಟ್ ಯಾಕೆ ಸಿಗೋಲ್ಲ ಎಂಬುದು. ಗಮನಾರ್ಹವೆಂದರೆ ಈ ತ್ರಿಮೂರ್ತಿ ಶಾಸಕರು ಅಪ್ಪಿತಪ್ಪಿಯೂ ಬೇರೆ ಪಕ್ಷದ ಸಹವಾಸ ಮಾಡುತ್ತೇವೆ ಎಂದು ನಿದ್ದೆಯಲ್ಲೂ ಕನವರಿಸಿದವರಲ್ಲ. ಹಾಗಿರುವಾಗ ಈ ಶಿಕ್ಷೆ ಯಾಕೆ? ಹೌದು, ಜೈಲು ಶಿಕ್ಷೆಗಿಂತಲೂ ಕಠಿಣವಾದ ಈ ಶಿಕ್ಷೆ ಏಕೆ ಎಂದು ಕಾರ್ಯಕರ್ತರು ಆಗಲೇ ಕೇಳತೊಡಗಿದ್ದಾರೆ.

ಈ ಮೂರೂ ನಾಯಕರು ಜೈಲು ಸಹವಾಸ ಮಾಡಿರುವದೇ ಟಿಕೆಟ್ ನೀಡದಿರಲು ಸಕಾರಣವಾಗಿದೆ ಎನ್ನಲಾಗಿದೆ. ಹಾಗಾದರೆ, ಬೇರೆ ಯಾರೂ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿಲ್ಲವಾ? ಮುಖ್ಯಮಂತ್ರಿಗಳಾದಿಯಾಗಿ ಬಹುತೇಕ ಎಲ್ಲರ ವಿರುದ್ಧವೂ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಹಾಗಿರುವಾಗ ನಮ್ಮ ಶಾಸಕರಷ್ಟೇ ಮಹಾಪರಾಧಿಗಳಾ? ಎಂದು ಕ್ಷೇತ್ರದ ಜನ ಕೇಳತೊಡಗಿದ್ದಾರೆ.

ಆದರೆ ಇದು ನಮ್ಮ ನಿರ್ಧಾರವಲ್ಲ. ಮೇಲಿಂದ ಇಂತಹ ಸಂಕೇತಗಳು ರವಾನೆಯಾಗಿವೆ ಎಂದು ಲಾಲ ಕೃಷ್ಣ ಆಡ್ವಾಣಿಯತ್ತ ಬೊಟ್ಟು ಮಾಡಿ ತೋರಿಸುತ್ತಾರೆ ರಾಜ್ಯ ಬಿಜೆಪಿ ಮಂದಿ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಅನುಸರಿಸಿದ ಮಾನದಂಡವನ್ನೇ ಈ ಮೂವರಿಗೂ ಅನುಸರಿಸಬೇಕು. ಅವರೂ ಈಗ ಪಕ್ಷದಲ್ಲಿ ಇದ್ದಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ. ಯಡಿಯೂರಪ್ಪ ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ ಎಂದರೆ ಹೇಗೆ ಎಂಬುದು ಆಡ್ವಾಣಿ ತರ್ಕವಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹಾಗಾದರೆ ಎಲ್ಲ ಜೆಡಿಎಸ್‌ ಪಾಲು:
ಈ ಬೆಳವಣಿಗೆಗಳಿಂದ ರೋಸಿರುವ ಮೂರೂ ಬಿಜೆಪಿ ಶಾಸಕರು, ಅದರಲ್ಲೂ ಕಟ್ಟಾ ಸುಬ್ರಮಣ್ಯನಾಯ್ಡು ಜೆಡಿಎಸ್‌ ಪಕ್ಷದತ್ತ ದಾಪುಗಾಲು ಹಾಕಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್‌ ನಾಯಕರು ಕಟ್ಟಾ ಅವರನ್ನು ಸಂಪರ್ಕಿಸಿ ಅಂಥದೊಂದು ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಭ್ರಷ್ಟರು ಎಂದು ಬಿಜೆಪಿ ಹೊರಹಾಕಿದ ಮಂದಿಗೆ ಜೆಡಿಎಸ್ ಮಣೆ ಹಾಕಿದರೆ ಅದಕ್ಕೆ ಕಳಂಕ ತಟ್ಟುವುದಿಲ್ಲವೇ?

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka Assembly Election- According to sources No tickets for BJP MLAs Katta Subramanya Naidu, SN Krishnaiah Shetty, Y Sampangi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X