ಚಿನ್ನ ಇನ್ನೂ ಕುಸೀತಿದೆ, 29000 ರೂ.ಗಿಂತ ಕಡಿಮೆ!

Mumbai: Gold extends losses hit lowest level in 10 months global cues
ಮುಂಬೈ, ಏ.4: ಚಿನ್ನ ಕಳೆದ 10 ತಿಂಗಳಲ್ಲಿ ದಾಖಲೆಯ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರುಪೇರಾಗಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ ಇನ್ನೇನು ಮದುವೆ ಕಾಲ ಮರುಕಳಿಸಲಿದ್ದು, ಸಣ್ಣಪುಟ್ಟ ಖರೀದಿದಾರರಿಗೆ ಇದು ಹಿತಕರವಾಗಿದೆ.

ಹಾಗೆ ನೋಡಿದರೆ ಚಿನ್ನದ ದರ ಇತ್ತೀಚೆಗೆ ಒಂದೇ ಸಮನೆ ಕುಸಿಯುತ್ತಲೇ ಇದೆ. 10 ಗ್ರಾಂ.ಗೆ 32,000 ರೂ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರ, ಸಾವಕಾಶವಾಗಿ ಕುಸಿಯುತ್ತಾ ಬಂದಿದ್ದು ನಿನ್ನೆ 10 ಗ್ರಾಂ. ಗೆ 29,000 ರೂ. ಆಗಿದೆ. ಕಳೆದ ಜೂನ್ 1 ರಂದು 10 ಗ್ರಾಂ ಚಿನ್ನದ ಬೆಲೆ 29,375 ರೂ. ನಷ್ಟಿತ್ತು. ಗುರುವಾರದ ಬೆಲೆ 29,000 ರೂ. ಗಿಂತ ಕಡಿಮೆಯಾಗಿದೆ.

ಬೆಳ್ಳಿಯ ಬೆಲೆಯೂ ಕುಸಿಯುತ್ತಿದ್ದು, 1 ಕೆಜಿ ಬೆಳ್ಳಿಯ ಬೆಲೆ 51,000 ರೂ. ನಷ್ಟಿತ್ತು.

ಅಮೆರಿಕದ ಆರ್ಥಿಕ ಚೇತರಿಕೆ ಆಶಾದಾಯಕವಾಗಿದ್ದು, ಹೂಡಿಕೆದಾರರು ಇತರೆ ಉತ್ತಮ ಅವಕಾಶಗಳತ್ತ ಸಾಗಿದ್ದಾರೆ. ಇದರಿಂದ ಮಾರುಜಟ್ಟೆಯಲ್ಲಿ ಚಿನ್ನದ ದಾಸ್ತಾನು ಹೆಚ್ಚುತ್ತಿದೆ. ಮುಂದಿನ ವಾರದಲ್ಲಿ ಬೆಲೆ ಕುಸಿತದಿಂದ ಚಿನ್ನದ ಖರೀದಿ ಹೆಚ್ಚಾಗಲಿದ್ದು, ಏರಿಕೆಯ ದಾಸ್ತಾನು ಪ್ರಮಾಣ ಸಮಹಂತಕ್ಕೆ ಬರುವ ಲಕ್ಷಣಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಖರೀದಿ ದೇಶವಾಗಿದೆ. ಆದರೆ ದೇಶದ ಆರ್ಥಿಕ ಕೊರತೆ ಸರಿದೂಗಿಸಲು ಚಿನ್ನದ ಆಮದು ಮೇಲೆ ಕಡಿವಾಣ ಹಾಕಲಾಗಿದೆ. ಚಿನ್ನದ ಮೇಲೆ ಹೂಡಿಕೆ ಡೆಡ್ ಇನ್ವೆಸ್ಟ್ ಮೆಂಟ್ ಎಂದಿರುವ ಭಾರತ ಸರಕಾರ ಮೊನ್ನೆ ಜನವರಿಯಲ್ಲಿ ಆಮದು ಸುಂಕವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+