ಡಿಸಿ ಮಂಜುಳಾ ಎತ್ತಂಗಡಿ; ಚಿಂತಾಮಣಿ ಅತಿ ಸೂಕ್ಷ್ಮ

Chickballapur DC transferred Chintamani very sensitive
ಚಿಂತಾಮಣಿ, ಏ.4: ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಎನ್ ಮಂಜುಳಾ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಮಂಜುಳಾ ಅವರಿಗೆ ಇನ್ನೂ ಯಾವುದೇ ಸ್ಥಾನವನ್ನು ತೋರಿಸಿಲ್ಲ.

ಚಿಂತಾಮಣಿ ಸೂಕ್ಷ್ಮ: ಈ ಮಧ್ಯೆ, ಚುನಾವಣೆ ಮುನ್ನೆಲೆಯಲ್ಲಿ ಚಿಂತಾಮಣಿ ತಾಲೂಕನ್ನು ಜಿಲ್ಲೆಯಲ್ಲೇ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ವ್ಯಕ್ತಿಗಳ ಬಗ್ಗೆ ಈಗಾಗಲೇ ನಿಗಾ ವಹಿಸಲಾಗಿದೆ. ಅಂತಹವರ ವಿರುದ್ಧ ಗುಂಡಾ ಕಾಯ್ದೆಯಡಿ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಎನ್ ಶಿವಪ್ರಸಾದ್ ಎಚ್ಚರಿಸಿದ್ದಾರೆ.

ಚಿಂತಾಮಣಿಯ ಪೊಲೀಸ್ ಉಪಅಧೀಕ್ಷಕರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 'ಮೇ 5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲೆಯಾದ್ಯಂತ ಡಿವೈಎಸ್‌ಪಿ- 2, ಇನ್ಸ್‌ಪೆಕ್ಟರ್- 7, ಸಬ್‌ಇನ್ಸ್‌ಪೆಕ್ಟರ್- 24, ಎಸೈ- 56, ಮುಖ್ಯಪೇದೆ- 166, 437 ಪೊಲೀಸ್ ಪೇದೆಗಳನ್ನು ನಿಯುಕ್ತಿ ಮಾಡಲಾಗಿದೆ.

ತಾಲೂಕಿನಾದ್ಯಂತ 244 ಮತ ಕೇಂದ್ರಗಳಿದ್ದು, 73- ಅತಿ ಸೂಕ್ಷ್ಮ, 87- ಸೂಕ್ಷ್ಮ, 84- ಸಾಮಾನ್ಯ ಎಂದು ಗುರುತಿಸಲಾಗಿದೆ. ಪ್ರತಿ ಮತ ಕೇಂದ್ರಕ್ಕೊಬ್ಬರಂತೆ ಅರೆಸೇನಾ ಪಡೆಯನ್ನು ನಿಯೋಜಿಸುವುದಾಗಿ ವಿವರಿಸಿದರು.

ತಾಲೂಕನ್ನು ಜಿಲ್ಲೆಯಲ್ಲೇ ಅತಿ ಸೂಕ್ಷ್ಮ ಪ್ರದೇಶವೆಂದು ಗುರ್ತಿಸಿದ್ದು, ಸೂಕ್ತ ಬಿಗಿ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಅರೆಸೇನಾ ಪಡೆಯ 300 ಸಿಬ್ಬಂದಿ ಹಾಗೂ ಪ್ಲೈನ್ಸ್ ಸ್ಕ್ವಾಡ್‌ನ 4 ತಂಡ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಎಎಸ್‌ಪಿ. ರಮೇಶ್‌ ಬಾನೊತ್, ನಗರ ಠಾಣೆ ಇನ್ಸ್‌ ಪೆಕ್ಟರ್ ನಂಜಪ್ಪ, ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ ಪೆಕ್ಟರ್ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜತೆಗೆ ಅರೆಸೇನೆ, ಸಶಸ್ತ್ರ ಮೀಸಲು ಪಡೆ, ಕೆಎಸ್ಸಾರ್ಪಿ ಜಿಲ್ಲಾ ಮೀಸಲು ಪಡೆ, ಹೋಮ್ ಗಾರ್ಡ್ಸ್ ಅನ್ನು ಸಹ ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು. ನಕಲಿ ಮತದಾನ ಸೇರಿದಂತೆ, ಮದ್ಯ ಹಂಚಿಕೆ, ಮತ್ತಿತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಗಡಿಭಾಗಗಳ 15 ಕಡೆ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.

ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಸದಾ ಸಿದ್ಧರಿರುವುದಲ್ಲದೆ, 17 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳು, ಗುಂಡಾಗಳು, ಶಾಂತಿ, ಸುವ್ಯವಸ್ಥೆ ಕದಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳು ದಿನಕ್ಕೆ ಮೂರು ಗ್ರಾಮಗಳಂತೆ ಸುತ್ತು ಹಾಕುತ್ತಿದ್ದು, ಅಕ್ರಮ ಚಟುವಟಿಕೆ ನಡೆಸುವವರನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆಯೆಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+