ಮತ್ತೆ 15 ವಿಮಾನಗಳನ್ನು ಕಳೆದುಕೊಂಡ ಮಲ್ಯ

ಮಂಗಳವಾರ (ಮಾ.26) ಸುದ್ದಿ ಹೊರಬೀಳುತ್ತಿದ್ದಂತೆ ಬಿಎಸ್ ಇನಲ್ಲಿ ಮಾರುಕಟ್ಟೆ ಮುಕ್ತಾಯವಾದಾಗ ಕಿಂಗ್ ಫಿಷರ್ ಸಂಸ್ಥೆಗಳು ಶೇ 2.91ರಷ್ಟು ಕುಸಿತ ಕಂಡು 8.34 ರು ಗೆ ಇಳಿದಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ ಷೇರುಗಳು 8.35 ರು ನಂತೆ ಶೇ 2.90ರಷ್ಟು ಇಳಿಕೆ ಕಂಡಿತ್ತು.
ಅಬುದಾಬಿ ವಿಮಾನಯಾನ ಕಂಪನಿಯ ಸಹಾಯ ಹಸ್ತ ಪಡೆದು ಸಂಭ್ರಮಿಸಿದ್ದ ಮಲ್ಯರಿಗೆ ಮತ್ತೆ ಹೊಡೆತ ಬಿದ್ದಿದೆ. ತೆರಿಗೆ ವಿಳಂಬವಾದ ಕಾರಣಕ್ಕೆ ವಿಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅನಿವಾರ್ಯ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ಹೇಳಿದ್ದಾರೆ.
ಇತ್ತೀಚೆಗೆ ಕಿಂಗ್ ಫಿಷರ್ ಉದ್ಯೋಗಿಗಳು ಸಂಬಳ ನೀಡದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳಿಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿದ್ದರು. ಈಗ ಬಾಕಿ ಮೊತ್ತ ಪಾವತಿಸುವ ತನಕ ಕಿಂಗ್ ಫಿಷರ್ ವಿಮಾನಗಳು ಮೇಲಕ್ಕೇರುವಂತಿಲ್ಲ.
ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಹಲವಾರು ತಿಂಗಳಿನಿಂದ ಸೇವಾ ತೆರಿಗೆ ಪಾವತಿಸಿಲ್ಲ ಹೀಗಾಗಿ ಸಂಸ್ಥೆಗೆ ಸೇರಿದ 7 ವಿಮಾನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಎಂಐಎಎಲ್) ಪ್ರಕಟಿಸಿತ್ತು.
7000 ಕೋಟಿ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು 200 ಕೋಟಿ ವಿಮಾನ ನಿಲ್ದಾಣಗಳ ನಿರ್ವಹಣೆ ಹೊತ್ತಿರುವ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಪಾವತಿಸಬೇಕಿದೆ.
Etihad Airways ಮೊದಲ ಕಂತಿನಲ್ಲಿ ಬರೋಬ್ಬರಿ 3000 ಕೋಟಿ ರೂ.ಗಳನ್ನು KFAನಲ್ಲಿ ಹೂಡಿಕೆ ಮಾಡಲಿದೆ. ಎರಡನೆಯ ಕಂತಿನಲ್ಲಿ ಮತ್ತೂ 1,800 ಕೋಟಿ ರೂ. ತೊಡಗಿಸಲಿದೆ. ಅರ್ಥಾತ್ ಶೇ. 48ರಷ್ಟು ಪಾಲು ಅಂದರೆ 4,8000 ಕೋಟಿ ರೂ.ಗೆ KFA ಭಾಗಶಃ ಮಾರಾಟವಾದಂತಾಗಿದೆ.
ಈ ನಡುವೆ ಕಿಂಗ್ ಫಿಷರ್ ಮೇಲೆ Etihad Airways ಹಿಡಿತ ಹೊಂದುವ ಮೊದಲು ತೆರಿಗೆ ಬಾಕಿ, ಸಾಲ ಬಾಕಿ ಹಿಂಪಡೆಯಲು ಸಾಲ ಕೊಟ್ಟ ಸಂಸ್ಥೆಗಳು ಯೋಜಿಸಿದೆ. ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ.
17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ. ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ.
ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.












Click it and Unblock the Notifications