ಮೋದಿ ಬೆಂಬಲಿಸಿ ಬೀದಿಗಿಳಿದ ಎನ್ನಾರೈಗಳು
ವಾಷಿಂಗ್ಟನ್, ಮಾ.25: ಮುಂದಿನ ಪ್ರಧಾನಿ ಹುದ್ದೆಗೆ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಿದ್ದ ಆಹ್ವಾನ ಹಿಂತೆಗೆದುಕೊಂಡ ವಾರ್ಟನ್ ಇಂಡಿಯಾ ಎಕನಾಮಿಕ್ ಫೋರಂ ನಿರ್ಧಾರದ ವಿರುದ್ಧ ಅಮೆರಿಕ ಭಾರತೀಯರ ಆಕ್ರೋಶ ಮುಗಿಲು ಮುಟ್ಟಿದೆ. ಫೋರಂನ ನಿರ್ಧಾರ ವಿರೋಧಿಸಿ ಬೀದಿಗಿಳಿದ ಇಲ್ಲಿನ ಭಾರತೀಯ ಸಂಜಾತ ಅಮೆರಿಕ ಪ್ರಜೆಗಳು ಪ್ರತಿಭಟನೆ ನಡೆಸಿದರು.
ಅಮೆರಿಕನ್ಸ್ ಫಾರ್ ಫ್ರೀ ಸ್ಪೀಚ್ ಬ್ಯಾನರಿನಡಿ ಭಾರತೀಯ ಸಂಜಾತ ಅಮೆರಿಕನ್ ಪ್ರಜೆಗಳು ವೀ ವಾಂಟ್ ಮೋದಿ' ಇತ್ಯಾದಿ ಘೋಷಣೆಗಳನ್ನು ಕೂಗಿದರಲ್ಲದೆ ಭಿತ್ತಿಪತ್ರ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಬಹುತೇಕ ಪ್ರತಿಭಟನಾಕಾರರು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಿಂದ ಬಂದವರಾಗಿದ್ದು , ಹಲವಾರು ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ ಫೋರಂ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಫೋರಂನಲ್ಲಿ ಇಂದು ದಿನವಿಡೀ ಭಾರತದ ಆರ್ಥಿಕ ಬೆಳವಣಿಗೆ ಕುರಿತ ಸಮ್ಮೇಳನ ನಡೆಸುತ್ತಿದ್ದ ಸಂದರ್ಭದಲ್ಲೇ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಯಾರಿಸನ್ ಆಡಿಟೋರಿಯಂನ ಹೊರ ಭಾಗದಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಲವಾರು ಧುರೀಣರು ಭಾಷಣ ಮಾಡಿದರು. ಸಮಾವೇಶಕ್ಕೆ ಹಾಜರಾಗಲು ಬಂದ ಮಾಧ್ಯಮ ಪ್ರತಿನಿಧಿಗಳನ್ನು ಪ್ರತಿಭಟನಾಕಾರರು ತಡೆ ಹಿಡಿದರು.ಪ್ರತಿಭಟನೆಯಲ್ಲಿ ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರ ಚಿತ್ರಗಳನ್ನು ನೋಡಿ

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಉತ್ತಮ ಆಡಳಿತ, ಪಾರದರ್ಶಕತೆ, ದಾಖಲೀಕರಣಕ್ಕೆ ತಂತ್ರಜ್ಞಾನ ಬಳಕೆ ಅತ್ಯಗತ್ಯ. ತಂತ್ರಜ್ಞಾನ ಬಳಸದೆ ಬರೀ ರಾಜಕೀಯ ಜ್ಞಾನವಿದ್ದರೆ ದೇಶದ ಉದ್ಧಾರ ಸಾಧ್ಯವಿಲ್ಲ ಎಂದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಗೂಗಲ್ ಆಯೋಜನೆಯ ಕಾರ್ಯಕ್ರಮದಲ್ಲಿ ಹೇಳಿದ್ದರು.

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
3D ಹಾಲೋಗ್ರಾಫಿಕ್ ಪ್ರೊಜೆಕ್ಷನ್ ಮೂಲಕ ಒಂದೇ ಬಾರಿಗೆ ವಿವಿಧ ಕಡೆ ಭಾಷಣ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ಮೋದಿ ಅವರು ಗೂಗಲ್ ಸಭೆಯಲ್ಲಿ ಮಾತನಾಡಿದ ಪ್ರಪ್ರಥಮ ಭಾರತದ ಚುನಾಯಿತ ಪ್ರತಿನಿಧಿಯಾಗಿದ್ದಾರೆ.

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಗುಜರಾತಿನಲ್ಲಿ Information and Communication Technology (ICT) ಮೂಲಕ ಜನರಿಗೆ ಹತ್ತಿರವಾಗಿದ್ದೇವೆ. ಅಮೆರಿಕದಿಂದ ಸಾರ್ವಜನಿಕ ಸೇವೆ ಪ್ರಶಸ್ತಿ ಸಿಕ್ಕಿರುವುದು ಜನರ ಜ್ಞಾನದ ಮಟ್ಟದ ಅಭಿವೃದ್ಧಿ, ಆಡಳಿತಗಾರರೊಡನೆ ಸಂಪರ್ಕ ಸಾಧ್ಯವಾಗಿದ್ದರಿಂದ ಮಾತ್ರ ಎಂದು ಮೋದಿ ಹೇಳಿದ್ದಾರೆ.

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಿಂದ ಬಂದ ಪ್ರತಿಭಟನೆಕಾರರು ವೀ ವಾಂಟ್ ಮೋದಿ ಎಂದು ಘೋಷಣೆ ಕೂಗಿದರು

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಮೋದಿ ಅವರಿಗೆ ನೀಡಿದ್ದ ಆಹ್ವಾನ ಹಿಂತೆಗೆದುಕೊಂಡ ವಾರ್ಟನ್ ಇಂಡಿಯಾ ಎಕನಾಮಿಕ್ ಫೋರಂ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆ, ಪ್ರತಿಭಟನೆಗಳು ನಡೆದಿದೆ

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಇದು ಅಮೆರಿಕ ಎಂಬುದು ನಿಜವೇ? ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೇ ಅಲ್ ಖೈದಾ ಮಾದರಿ ನಿಯಮ ಜಾರಿಯಲ್ಲಿದೆ ಏಕೆ ಎಂಬ ಪ್ರಶ್ನೆಗಳು ಎದ್ದು ಕಾಣುತ್ತಿತ್ತು

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಗುಜರಾತ್ ಮುಖ್ಯಮಂತ್ರಿ ಮೋದಿ ಬೆಂಬಲಿಸಿದ ನ್ಯೂಯಾರ್ಕ್ ಮಂದಿ

ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರು
ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರ ಪ್ರತಿಭಟನಾ ಮೆರವಣಿಗೆ ಚಿತ್ರಗಳು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರ ಪ್ರತಿಭಟನಾ ಮೆರವಣಿಗೆ ಚಿತ್ರಗಳು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಮೋದಿ ಬೆಂಬಲಿಸಿದ ಅನಿವಾಸಿ ಭಾರತೀಯರ ಪ್ರತಿಭಟನಾ ಮೆರವಣಿಗೆ ಚಿತ್ರಗಳು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ನ್ಯೂಜೆರ್ಸಿ ಎಡಿಸನ್ ನಲ್ಲಿರುವ ಟಿವಿ ಏಷ್ಯಾ ಅಡೀಟೋರಿಯಂ ಮತ್ತು ಇಲಿನಾಯ್ಸ್ ನ ರೋಲಿಂಗ್ ಮೆಡೋಸ್ 3405 ಅಲ್ಗೊನ್ ಖಿನ್ ರಸ್ತೆ ಹಾಲಿಡೇ ಇನ್ ನಲ್ಲಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಭಾಷಣ ಮೋಡಿ ಮಾಡಿದೆ.

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಸೆಕ್ಯುಲರಿಸಂ ಎಂದರೆ ನನಗೆ "India First" ಎಂದು ಘೋಷಿಸಿದರು. ಎಲ್ಲಾ ನಾಗರೀಕರಿಗೂ ನಾನು ಇದೇ ಸಂದೇಶ ನೀಡುತ್ತೇನೆ.
ನಾವು ಮಾಡುವ ಕಾರ್ಯ, ಯೋಜನೆಗಳು ದೇಶ ಮೊದಲು ನಂತರ ನಮ್ಮ ರಾಜ್ಯ, ಪಂಗಡವಾಗಿರಬೇಕು. ಭಾರತದ ಏಳಿಗೆಯೇ ನಮ್ಮ ಸರ್ವಸ್ವವಾದಾಗ ಜಾತ್ಯಾತೀಯತೆ ಎಲ್ಲವೂ ಗೌಣವಾಗುತ್ತದೆ. ಅಸಮಾನತೆ ಶಬ್ದ ಅರ್ಥ ಕಳೆದುಕೊಳ್ಳುತ್ತದೆ ಎಂದಿದ್ದರು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಸೆಕ್ಯುಲರಿಸಂ ಎಂದರೆ ನನಗೆ "India First" ಎಂದು ಘೋಷಿಸಿದರು. ಎಲ್ಲಾ ನಾಗರೀಕರಿಗೂ ನಾನು ಇದೇ ಸಂದೇಶ ನೀಡುತ್ತೇನೆ.
ನಾವು ಮಾಡುವ ಕಾರ್ಯ, ಯೋಜನೆಗಳು ದೇಶ ಮೊದಲು ನಂತರ ನಮ್ಮ ರಾಜ್ಯ, ಪಂಗಡವಾಗಿರಬೇಕು. ಭಾರತದ ಏಳಿಗೆಯೇ ನಮ್ಮ ಸರ್ವಸ್ವವಾದಾಗ ಜಾತ್ಯಾತೀಯತೆ ಎಲ್ಲವೂ ಗೌಣವಾಗುತ್ತದೆ. ಅಸಮಾನತೆ ಶಬ್ದ ಅರ್ಥ ಕಳೆದುಕೊಳ್ಳುತ್ತದೆ ಎಂದಿದ್ದರು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ದೇಶದ ಶೇ 65 ರಷ್ಟು ಯುವ ಶಕ್ತಿಯ ಕೌಶಲ್ಯ ಅಭಿವೃದ್ಧಿ ಅಗತ್ಯ ಎದ್ದು ಕಾಣುತ್ತಿದೆ. ಎನ್ನಾರೈಗಳ ಸಹಾಯವಿದ್ದರೆ ಮಾತ್ರ ಕೆಲವು ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿ ಕಾಣಲು ಸಾಧ್ಯ. ಕೈಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿ ಇವುಗಳಲ್ಲಿ ಒಂದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಅಮೆರಿಕದಲ್ಲಿ ಈಗ ಅನೇಕ ಹೋಟೆಲ್, ಮೊಟೆಲ್ ಗಳು ಗುಜರಾತಿಗಳ ಕೈಯಲ್ಲಿರುವುದು ಸಂತಸದ ವಿಷಯ. ಇದರಂತೆ ಭಾರತಕ್ಕೂ ಅವರ ಕೊಡುಗೆ ನಿರೀಕ್ಷೆಯಿದೆ ಎಂದರು.

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಅಭಿವೃದ್ಧಿ ನಮ್ಮ ದಿವ್ಯ ಮಂತ್ರವಾಗಬೇಕು. ನಮ್ಮ ನಾಡು ಅಭಿವೃದ್ಧಿಯನ್ನು ಪರಕೀಯರು ಬಂದು ಮಾಡಲಾರರು. ಪರಕೀಯರು ವ್ಯಾಪರಸ್ಥರಾಗಿರುತ್ತಾರೆ ಅಷ್ಟೇ .ಗುಜರಾತ್ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲು ಎನ್ನಾರೈಗಳ ಕೊಡುಗೆ ಅಪಾರ. ಇದೇ ರೀತಿ ಇತರೆ ರಾಜ್ಯಗಳತ್ತ ಕೂಡಾ ಎನ್ನಾರೈಗಳು ಕಣ್ಣು ಹಾಯಿಸಬೇಕು

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಖ್ಯ ಕೆಲಸವನ್ನು ಮುಂದೂಡುತ್ತಲೇ ಬಂದಿರುವ ಬಿಜೆಪಿ ಕೊನೆಗೂ ತನ್ನ ಅಭ್ಯರ್ಥಿಯನ್ನು ಘೋಷಿಸಲು ಸಜ್ಜಾಗಿದೆ. ಮೋದಿ ಪ್ರಧಾನಿಯಾಗುವುದು ನಮ್ಮ ಕನಸು ಎಂದು ಎನ್ನಾರೈಗಳು ಕೂಡಾ ಹೇಳಿದ್ದಾರೆ.

ಮೋದಿ ಬೆಂಬಲಕ್ಕೆ ಎನ್ನಾರೈಗಳು
ಅಮೆರಿಕಾಧ್ಯಕ್ಷ ಬರಾಕ್ ಒಬಾಮರಂತೆ ನರೇಂದ್ರ ಮೋದಿ ಕೂಡಾ ಪ್ರಚಾರ ಕಲೆ, ಭಾಷಣ ಕಲೆ ಅರಿತ ನಿಪುಣ ರಾಜಕಾರಣಿ. 3ಡಿ ತಂತ್ರಜ್ಞಾನ ಬಳಸಿ ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಮೋದಿ ಪ್ರಚಾರ ವಿಧಾನ ಇನ್ನೂ ಬೇರೆ ನಾಯಕರಿಗೆ ಒಗ್ಗಿಲ್ಲ. ಜನರ ಜೊತೆ ಸದಾ ಕಾಲ ಉತ್ತಮ ಸಂವಹನ ಹೊಂದಿರುವ ಮೋದಿ ಜನಪ್ರಿಯತೆ ಎಲ್ಲಾ ರಂಗಕ್ಕೂ ಹಬ್ಬಿದೆ.

ಮೋದಿ ಬೆಂಬಲಕ್ಕೆ ಎನ್ನಾರೈಗಳು
ವೈಬ್ರೈಂಟ್ ಗುಜರಾತ್ ಮೂಲಕ ದೇಶ ವಿದೇಶದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಕ್ರಾಂತಿ ಮಾಡಿದ ಮೋದಿ ಅವರು ಉದ್ಯಮಿಗಳಿಗೂ ಅಚ್ಚುಮೆಚ್ಚು. ಮುಖೇಶ್ ಅಂಬಾನಿ,ರತನ್ ಟಾಟಾ, ಅನಿಲ್ ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಗುಜರಾತಿನ ಸಿಎಂ ಮೋದಿ ಅವರನ್ನು ಬೆಂಬಲಿಸಿದ್ದಾರೆ.












Click it and Unblock the Notifications