ಕೋಕಾ ಕೋಲಾ ಕಂಪನಿಯಲ್ಲಿ ಉದ್ಯೋಗ ಕಡಿತ

ವೆಚ್ಚ ಕಡಿತ ಮಂತ್ರ ಜಪಿಸುತ್ತಿರುವ ವಿಶ್ವದ ಅತಿ ದೊಡ್ಡ ಪಾನೀಯ ಸಂಸ್ಥೆ, ಕೋಕಾ ಕೋಲಾ ಉದ್ಯೋಗ ಕಡಿತ ಮೊದಲ ಕಂತಿನಲ್ಲಿ 750 ಮಂದಿ ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ.
ಇದು ಎಲ್ಲ ಶ್ರೇಣಿಯ ಉದ್ಯೋಗಿಗಳಿಗೂ ಅನ್ವಯವಾಗಿದ್ದು, ಮುಂದಿನ ವಾರದಿಂದ ಕೆಲಸಕ್ಕೆ ಬರುವುದು ಬೇಡ ಎಂದು ಸಂಬಂಧಪಟ್ಟ ಉದ್ಯೋಗಿಗಳಿಗೆ ನೋಟಿಸ್ ಮೂಲಕ ಮಾಹಿತಿ ನೀಡಿದೆ.
ಉತ್ತರ ಅಮೆರಿಕದ ಕೋಕಾ ಕೋಲಾ ಕಂಪನಿಯಲ್ಲಿ 75,000 ಮಂದಿ ಉದ್ಯೋಗಿಗಳಿದ್ದು ಅದರಲ್ಲಿ 750 ಮಂದಿಯನ್ನು ಮನೆಗೆ ಕಳಿಸಲಾಗಿದೆ. ಮುಂದೆ ಅಟ್ಲಾಂಟಾ ಕಚೇರಿಯಲ್ಲೂ ಇದೇ ರೀತಿ ಉದ್ಯೋಗ ಕಡಿತ ಕೈಗೊಳ್ಳಲಾಗುವುದು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
2010ರಲ್ಲಿ ಉತ್ತರ ಅಮೆರಿಕದಲ್ಲಿ ಈ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿತ್ತು. ಪ್ರಸ್ತುತ ಅಮೆರಿಕದ ಏಳು ಕಡೆಗಳಲ್ಲಿ ಕೋಕಾ ಕೋಲಾ ಕಂಪನಿ ವಹಿವಾಟು ವಿಸ್ತರಿಸಿಕೊಂಡಿದೆ. ಅದರಲ್ಲಿ ನಾಲ್ಕಲು ಕೇಂದ್ರಗಳನ್ನು ಮುಚ್ಚಲು ಕಂಪನಿ ನಿರ್ಧರಿಸಿದೆ. ಆದಾರ ಸೇವಾ ಕ್ಷೇತ್ರದಲ್ಲಿ ತನ್ನ ಅಧಿಪತ್ಯ ಕಾಪಾಡಿಕೊಳ್ಳಲು ಇದು ಅನಿವಾರ್ಯ ಕ್ರಮವಾಗಿ ಎಂದು ಕಂಪನಿ ತಿಳಿಸಿದೆ.
2012 ರಲ್ಲಿ ಕೋಕಾ ಕೋಲಾ ಕಂಪನಿ ನಿವ್ವಳ ಆದಾಯ ಶೇ. 5ರಷ್ಟು ಹೆಚ್ಚಳ ಕಂಡಿತ್ತು. ಜಾಗತಿಕ ಮಟ್ಟದಲ್ಲೂ ಮಾರಾಟ ಗಾತ್ರ ಶೇ. 4ರಷ್ಟು ಏರಿಕೆಯಾಗಿತ್ತು. Sprite, Minute Maid, Powerade and Dasani ಕುಡಿಯುವ ನೀರು ಕೋಕಾ ಕೋಲಾ ಕಂಪನಿ ಉತ್ಪನ್ನಗಳಾಗಿವೆ.












Click it and Unblock the Notifications