ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್,ಲ್ಯಾಪ್ ಟ್ಯಾಪ್ ಇದೆ ಪಾಯಿಖಾನೆ ಇಲ್ಲ

By Mahesh
|
Google Oneindia Kannada News

Slums dwellers have power and phone, not toilets
ನವದೆಹಲಿ, ಮಾ.22: ಇನ್ನೆರಡು ವರ್ಷಗಳಲ್ಲಿ ಕೊಳಗೇರಿ ಮುಕ್ತ ನಗರ ಕಾಣುತ್ತೀರಿ ಎಂದು ರಾಜಕಾರಣಿಗಳು ಆಶ್ವಾಸನೆ ನೀಡುವುದನ್ನು ಕೇಳಿರುತ್ತಿರಿ.. ಆದರೆ, ಕೇಂದ್ರ ವಸತಿ, ನಗರ ಮತ್ತು ಬಡತನ ನಿವಾರಣಾ ಸಚಿವ ಅಜಯ್ ಮಾಕನ್ ನೀಡಿರುವ ವರದಿ ಕೇಳಿದರೆ ಹೌಹಾರಬೇಕಾಗುತ್ತದೆ.

ಭಾರತದ ಪ್ರಧಾನ ನೋಂದಣಾಧಿಕಾರಿ ನೇತೃತ್ವದಲ್ಲಿ ನಡೆಸಿದ ಕೊಳೆಗೇರಿ ಕುಟುಂಬಗಳ ಕುರಿತ ಸಮೀಕ್ಷಾ ವರದಿಯನ್ನು ಗುರುವಾರ ಪ್ರಕಟಿಸಲಾಗಿದ್ದು ವರದಿಯು, ಸುಮಾರು 6.8 ಕೋಟಿ ಭಾರತೀಯರು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಸ್ಲಂಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಎಲ್ಲರೂ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಟಿವಿ ಸಾಮಾನ್ಯ ವಿಷಯವಾಗಿದೆ. ಕೆಲವರು ಲ್ಯಾಪ್ ಟಾಪ್ ಕೂಡಾ ಬಳಸುತ್ತಿದ್ದಾರೆ. ಆದರೆ, ಶೌಚಾಲಯ ಮಾತ್ರ ಇಲ್ಲ ಎಂದು ತಿಳಿದು ಬಂದಿದೆ.

ಬಹುತೇಕ ಕೊಳೆಗೇರಿ ಕುಟುಂಬಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು , ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ನೆಲೆನಿಂತಿದೆ ಎಂದು ಅದು ಹೇಳಿದೆ. ಸಮೀಕ್ಷೆಯ ಮುಖ್ಯಾಂಶಗಳ ಕುರಿತು ವಿವರ ನೀಡಿದ ಸಮೀಕ್ಷಾ ಆಯುಕ್ತ ಸಿ.ಚಂದ್ರವೌಳಿ, ಸಮೀಕ್ಷೆಗೆ ಒಳಪಡಿಸಿದ ಒಟ್ಟು 1.73 ಕೋಟಿ ಮನೆಗಳು ಭಾರತದ ವಿವಿಧ ಭಾಗಗಳಲ್ಲಿ ನೆಲೆ ಕಾಯ್ದುಕೊಂಡಿದ್ದು ಅದರಲ್ಲಿ ಸುಮಾರು 1.37ಕೋಟಿ ಮನೆಗಳು ಕೊಳೆಗೇರಿ ಪ್ರದೇಶದಲ್ಲಿದೆ ಎಂದು ಹೇಳಿದ್ದಾರೆ.

ಮಿಲಿಯನ್‌ಗಿಂಲೂ ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ 19 ಪ್ರಮುಖ ನಗರಗಳ ಪೈಕಿ ಶೇ.25 ಕುಟುಂಬಗಳು ಸ್ಲಂಗಳಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಕೊಳೆಗೇರಿ ಕುಟುಂಬಗಳು ಹೊಂದಿರುವ ವಿವಿಧ ಸೌಲಭ್ಯಗಳ ಕುರಿತು ಬೆಳಕು ಚೆಲ್ಲಿದ ವೌಳಿ, ಶೇ.90 ಸ್ಲಂ ವಾಸಿಗಳಿಗೆ ವಿದ್ಯುತ್ ಸೌಲಭ್ಯವಿದೆ. ಶೇ.70 ಜನರು ಟಿವಿಯನ್ನು ಹೊಂದಿದ್ದಾರೆ.

ಆದರೆ ಕೇವಲ ಶೇ.10.4 ಕೊಳೆಗೇರಿ ನಿವಾಸಿಗಳು ಮಾತ್ರ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಚಿವ ಮಾಕನ್ ಮಾತನಾಡಿ, 2001ರಲ್ಲಿ ಒಟ್ಟು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದವರ ಪೈಕಿ ಶೇ. 23.5 ಮಂದಿ ಸ್ಲಂ ನಿವಾಸಿಗಳಾಗಿದ್ದರು. ಈಗ ಅದರ ಪ್ರಮಾಣವು 17.4 ಶೇ.ಕ್ಕಿಳಿದಿದೆ. ಪ್ರಸ್ತುತ 17.35 ಮಿಲಿಯನ್ ಸ್ಲಂ ಮನೆಗಳಿದ್ದು, 13.74 ಮಿಲಿಯನ್ ಸ್ಲಂ ಕುಟುಂಬಗಳಿವೆ ಎಂದು 2011ರ ಜನಗಣತಿ ಸಮೀಕ್ಷೆಯು ಸಾದರ ಪಡಿಸುತ್ತದೆ ಎಂದು ಅವರು ತಿಳಿಸಿದರು.

ಸ್ಲಂ ಕುಟುಂಬಗಳ ಶೇ.74 ಜನರು ಕುಡಿಯುವ ನೀರಿಗಾಗಿ ನಲ್ಲಿಯನ್ನೇ ಅವಲಂಬಿಸುವ ಪರಿಸ್ಥಿತಿ ಇದೆ. ಇದರಲ್ಲಿ ಶೇ.20.3 ಜನರು ಇದಕ್ಕಾಗಿ ಕೈಪಂಪುಗಳನ್ನು ಅಥವಾ ಕೊಳವೆಗಳನ್ನು ಅವಲಂಬಿಸಿದ್ದಾರೆ ಎಂದು ಅವರು ನುಡಿದರು. ಶೇ.66 ಸ್ಲಂ ನಿವಾಸಿಗಳು ಶೌಚಾಲಯ ಸೌಲಭ್ಯವನ್ನು ಹೊಂದಿದ್ದು, 18.9 ಶೇ.ಸ್ಲಂ ಕುಟುಂಬಗಳು ತೆರೆದ ಪ್ರದೇಶದಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾರೆ ಎಂದು ತಿಳಿಸಿದ ಸಚಿವರು, ಶೇ.15.1ಸ್ಲಂ ಕುಟುಂಬಗಳು ಸಾರ್ವಜನಿಕ ಶೌಚಾಲಯವನ್ನು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿ ದ್ದಾರೆ ಎಂದು ಹೇಳಿದ್ದಾರೆ.

English summary
One-third of identified slum households in India do not have toilets, but a sizeable percentage of the dwellings have electricity and mobile phone connections and televisions, says a report based on the 2011 census data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X