ಮೊದಲೇ ಅಭ್ಯರ್ಥಿ ಪ್ರಕಟಿಸದಿರಲು 3 ಕಾರಣಗಳು

ಕಾರಣ 1 : ಅಭ್ಯರ್ಥಿಯ ಹೆಸರನ್ನು ಸಾಕಷ್ಟು ಮೊದಲೇ ಪ್ರಕಟಿಸಿದರೆ, ಅಭ್ಯರ್ಥಿಯ ಪೂರ್ವಾಪರ ತಿಳಿದುಕೊಳ್ಳಲು ಮತದಾರರಿಗೆ ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ಅಂಥವರಿಗೆ ಮತ ಹಾಕಲು ಮತದಾರ ಹಿಂದೇಟು ಹಾಕಬಹುದು. ಆದ್ದರಿಂದ, ಅಂತಹ ಅಭ್ಯರ್ಥಿಯ ಮಹತ್ವವನ್ನು ತಗ್ಗಿಸಿ, ಪಕ್ಷದ ವರ್ಚಸ್ಸಿನ ಆಧಾರದ ಮೇಲೆ ಮತ ಕೇಳಲು ಪಕ್ಷಕ್ಕೆ ಅನುಕೂಲವಾಗುತ್ತದೆ.
ಕಾರಣ 2 : ಯಾವುದೇ ಕ್ಷೇತ್ರಕ್ಕೆ ಯಾವನೊಬ್ಬ ಅಭ್ಯರ್ಥಿ ಹೆಸರು ಪ್ರಕಟವಾಗುತ್ತಿದ್ದಂತೆ ಟಿಕೆಟ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರು ತಮ್ಮನ್ನು ಕಡೆಗಣಿಸಿದ್ದೇಕೆ ಎಂದು ಮುನಿಸಿಕೊಳ್ಳಬಹುದು. ಟಿಕೆಟ್ ವಂಚಿತರು ಭುಗಿಲೆದ್ದು ಪಕ್ಷವಿರೋಧಿ ಚಟುವಟಿಕೆ ಶುರುಮಾಡಿಬಿಡುವ ಸಂಭವನೀಯತೆ ಇರುತ್ತದೆ. ಇಂಥ ರಗಳೆಯೇ ಬೇಡವೆಂದು ಕಡೆ ಘಳಿಗೆಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಂಪ್ರದಾಯ ಪಕ್ಷಗಳು ಇಟ್ಟುಕೊಂಡಿವೆ.
ಕಾರಣ 3 : ಪ್ರಮುಖ ಕಾರಣವೇನೆಂದರೆ, ದೀರ್ಘ ಪ್ರಚಾರಕಾರ್ಯ ಕೈಗೊಂಡು, ಜನರ ಅಭಿಪ್ರಾಯಪಡೆದ ನಂತರ ಉತ್ತಮ ಮತ್ತು ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಟ್ಟೆ ರಾಜಕೀಯ ಮಾಡಿ ದುರ್ಲಾಭ ಪಡೆದವರಿಗೆ ಆ ಪಕ್ಷದ ಕದ ಮುಚ್ಚಿದಂತೆಯೇ ಸರಿ.
ಆದ್ದರಿಂದ, ಮೊದಲೇ ಸೂಕ್ತ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರೆ, ಹೆಚ್ಚು ಸಮಯ ಕಾಲ ಪ್ರಚಾರ ಮಾಡುತ್ತ, ಮತದಾರರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತ ಅವರ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ. ಲೋಕಸಭೆ ಚುನಾವಣೆಗೆ 6ರಿಂದ 9 ತಿಂಗಳು, ವಿಧಾನಸಭೆಗೆ 4ರಿಂದ 6 ತಿಂಗಳು ಮತ್ತು ಪರಿಷತ್ ಚುನಾವಣೆಗೆ 3 ತಿಂಗಳು ಪ್ರಚಾರ ನಡೆಸುವುದು ಅಗತ್ಯ. ಆದರೆ, ಎಲ್ಲ ಕ್ಷೇತ್ರಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಹುಡುಕುವುದು ನಿಜಕ್ಕೂ ಒಂದು ಸವಾಲೇ ಸರಿ. ಹೆಚ್ಚು ಸಮಯ ಪ್ರಚಾರ ಮಾಡಿದವರಿಗೆ ಉತ್ತಮ ಭವಿಷ್ಯ ಕಟ್ಟಿಟ್ಟ ಬುತ್ತಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications