ನಾಚಿಗ್ಗೇಡು: ಡಿಎಂಕೆ ಮೇಲಿನ ಸಿಬಿಐ ದಾಳಿ ಸ್ಟಾಪ್!

ಹಿಂದಿನ ಸುದ್ದಿ: ಇದಕ್ಕೆ Shame Shame ಅನ್ನದೇ ಬೇರೆ ವಿಧಿಯಿಲ್ಲ. ಅತ್ತ ಡಿಎಂಕೆ ಪಕ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ತನ್ನ ಅಧೀನದಲ್ಲಿರುವ ಸಿಬಿಐ ಅನ್ನು ಆ ಪಕ್ಷದ ನಾಯಕರ ಮನೆಯ ಮೇಲೆ ಛೂ ಬಿಟ್ಟಿದೆ.
ಇದರಿಂದ ಸಿಬಿಐ ಅಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂದಿನ ಬಜೆಟ್ ಅಧಿವೇಶನಕ್ಕೆ ಸಿದ್ಧತೆ ನಡೆಸಿದ್ದ ಡಿಎಂಕೆ ಅಧಿನಾಯಕ ಕರುಣಾನಿಧಿಯ ಪುತ್ರ ಎಂಕೆ ಸ್ಟಾಲಿನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಇಂದು ಗುರುವಾರ ಬೆಳಗ್ಗೆ ಸಿಬಿಐ ದಾಳಿ ಎಂಬ ಪ್ರಹಸನ ನಡೆಸಿದೆ.
ಸ್ಟಾಲಿನ್ ಆಪ್ತ ಸಹಾಯಕ ರಾಮ್ ಪ್ರಕಾಶ್ ಅವರ ನಿವಾಸದ ಮೇಲೂ ಬೆಳಗ್ಗೆ 7 ಗಂಟೆಗೆ ದಾಳಿ ನಡೆದಿದ್ದು, ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿವೆ.
ಡಿಎಂಕೆ ನಾಯಕ ಸ್ಟಾಲಿನ್ ಸುಂಕ ಪಾವತಿಸದೆಯೇ ಅಕ್ರಮವಾಗಿ ಕಾರುಗಳನ್ನು ಆಮದು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆ ನೀಡಿದ್ದ ದೂರಿನ ಅನ್ವಯ ಈ ದಾಳಿ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದಾರೆ.
ಸುಮಾರು 20 ಕೋಟಿ ರೂ. ಮೌಲ್ಯದ ಕಾರುಗಳನ್ನು ಸ್ಟಾಲಿನ್ ಪುತ್ರ ಅಕ್ರಮವಾಗಿ ಆಮದು ಮಾಡಿಕೊಂಡಿದ್ದಾರೆ ಎಂಬುದು ಸಿಬಿಐ ದಾಳಿಗೆ ಹೇತುವಾಗಿರುವ ನೆಪವಾಗಿದೆ. ಹೀಗೆ ಅಕ್ರಮವಾಗಿ ಆಮದು ಕಾರುಗಳ ಪೈಕಿ ಒಂದನ್ನು ಸ್ಟಾಲಿನ್ ಪುತ್ರ ಬಳಸುತ್ತಿದ್ದ ಎನ್ನಲಾಗಿದೆ.
ಕಾಂಗ್ರೆಸ್ ಈ ಮಟ್ಟಕ್ಕೆ ಇಳಿಯುತ್ತದೆ ಎಂದು ತಿಳಿದಿರಲಿಲ್ಲ. ಇದು ರಾಜಕೀಯ ದ್ವೇಷ ಸಾಧನೆಯಾಗಿದೆ. ಕಾಂಗ್ರೆಸ್ ಎಂಥ ದುರಾಡಳಿತ ನಡೆಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹ ಸಿಬಿಐ ದಾಳಿಯಿಂದ ನಾವಂತೂ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ.












Click it and Unblock the Notifications