ಸಮ್ಮತಿ ಸೆಕ್ಸ್ ಮಿತಿ ಇಳಿಕೆ ಇಲ್ಲ, ಮಸೂದೆ ಪಾಸ್

Anti-rape bill introduced in Lok Sabh
ನವದೆಹಲಿ, ಮಾ.19: ಸಮ್ಮತಿಯ ಸೆಕ್ಸ್‌ನ ವಯೋಮಿತಿಯನ್ನು 18ರಿಂದ 16 ವರ್ಷಕ್ಕಿಳಿಸುವ ಪ್ರಸ್ತಾವಕ್ಕೆ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಮಂಗಳವಾರ anti-rape ಮಸೂದೆ ಮಂಡಿಸಿ, ಅನುಮೋದನೆ ಪಡೆದಿದೆ.

ಸಮ್ಮತಿ ಸೆಕ್ಸ್‌ನ ವಯಸ್ಸಿನ ಮಿತಿಯನ್ನು ಮತ್ತೆ 18ಕ್ಕೇರಿಸಿ ಅತ್ಯಾಚಾರ ತಡೆ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದಿತ್ತು. ಮಸೂದೆಗೆ ಸಂಬಂಧಿಸಿದಂತೆ ಸೋಮವಾರ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆ ಸಮ್ಮತಿ ಸೆಕ್ಸ್‌ನ ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸುವ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟವು ಈ ನಿರ್ಧಾರ ತೆಗೆದುಕೊಂಡಿದೆ.

ಸಭೆಯಲ್ಲಿ ಬಿಜೆಪಿ, ಎಸ್ಪಿ ಮತ್ತಿತರ ಪಕ್ಷಗಳು ಸಮ್ಮತಿ ಸೆಕ್ಸ್‌ನ ವಯಸ್ಸಿನ ಮಿತಿಯನ್ನು 16ಕ್ಕಿಳಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಪುಟವು ಮತ್ತೊಮ್ಮೆ ಸಭೆ ಸೇರಿ ಸಮ್ಮತಿ ಸೆಕ್ಸ್‌ನ ವಯೋವುತಿಯನ್ನು ಮತ್ತೆ 18ಕ್ಕೇರಿಸಿ ನಿರ್ಧಾರ ತೆಗೆದುಕೊಂಡಿದೆ.

ವಯೋಮಿತಿಯನ್ನು ಇಳಿಸಿದರೆ ವಿವಾಹಪೂರ್ವ ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಬಿಜೆಪಿ ಸಹಿತ ಹಲವು ಪಕ್ಷಗಳು ಆಕ್ಷೇಪ ಎತ್ತಿದ ಬಳಿಕ ಸರಕಾರ 18 ವರ್ಷವನ್ನೇ ಮುಂದುವರಿಸುವ ನಿರ್ಧಾರಕ್ಕೆ ಯುಪಿಎ ಬದ್ಧವಾಗಬೇಕಾಯಿತು.

ಮಹಿಳೆಯರನ್ನು ಹಿಂಬಾಲಿಸುವುದು ಹಾಗೂ ಲೈಂಗಿಕದರ್ಶನ ತೃಪ್ತಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾಪದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ.

ಇಣುಕಿ ನೋಡುವುದು ಮತ್ತು ಪರರ ಮಿಲನವನ್ನು ವೀಕ್ಷಿಸುವುದನ್ನು ಅಪರಾಧಗಳೆಂದು ಪರಿಗಣಿಸಿದರೆ ಈ ಕಾನೂನುಗಳನ್ನು ಪುರುಷರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಇವುಗಳಿಗೆ ಅತ್ಯಂತ ಸ್ಪಷ್ಟವಾದ ವ್ಯಾಖ್ಯಾನವನ್ನು ಕೊಡಬೇಕೆಂದು ಮುಲಾಯಂ ಸಿಂಗ್‌ ಯಾದವ್‌ ಮತ್ತಿತರ ಕೆಲವು ಹಿರಿಯ ರಾಜಕಾರಣಿಗಳು ಸಲಹೆ ಮಾಡಿರುವ ಹಿನ್ನೆಲೆಯಲ್ಲಿ ಹೊಸ ಮಸೂದೆಯಿಂದ ಈ ಪ್ರಸ್ತಾವಗಳನ್ನು ಕೈಬಿಡಲು ನಿರ್ಧರಿಸಿದೆ.

ಯುಪಿಎಗೆ ಡಿಎಂಕೆ ಬೆಂಬಲ ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸದನದಲ್ಲಿ ಮಸೂದೆ ಬಗ್ಗೆ ಸ್ಪಷ್ಟವಾದ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಹೊಸ ನಿಯಮದ ಪ್ರಕಾರ 16 ವರ್ಷ ವಯೋಮಿತಿಯ ವ್ಯಕ್ತಿ ಮೊದಲ ಬಾರಿಗೆ ಅಪರಾಧ ಎಸಗಿದರೆ 'first time offender' ಎಂದು ಹೇಳಿ ಶಿಕ್ಷೆಯಿಂದ ವಿನಾಯತಿ ನೀಡಿ ಬುದ್ಧಿಮಾತು ಹೇಳಿ ಕಳಿಸುವ ಅವಕಾಶ ಕೂಡಾ ನಿಯಮದಲ್ಲಿದೆ. 16 ವರ್ಷ ಹುಡುಗ ಏನಾದರೂ ತಪ್ಪು ಮಾಡಿದರೆ ಆತನ ಮೇಲೆ ರೇಪ್ ಕೇಸ್ ಬುಕ್ ಮಾಡಲು ಬರುವುದಿಲ್ಲ. ಸಮ್ಮತಿ ಸೆಕ್ಸ್ ಗೆ ಪರೋಕ್ಷವಾಗಿ ಸರ್ಕಾರ ಒಪ್ಪಿಗೆ ಈ ರೀತಿಯಿಂದಲೂ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+