ಪ್ರಿಯತಮೆಯ MMS: ಯುವಕನ ಬಂಧನ

ಈ ದುಷ್ಕೃತ್ಯದಲ್ಲಿ ತೊಡಗಿದ್ದ ಕೈಲಾರಸ್ ಪಟ್ಟಣದ ಪಪ್ಪು ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಹುಡುಗಿಯ ಮನೆಯವರು ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಏನಾಯಿತೆಂದರೆ ಆರೋಪಿ ಪಪ್ಪು ತನ್ನ ಪ್ರೇಯಸಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಬರುವಂತೆ ಮಾಡಿ ಅಲ್ಲಿ ಆಕೆಗೆ ತನ್ನ ಬಟ್ಟೆ ಕಳಚುವಂತೆ ಪ್ರಚೋದಿಸಿ ಬಳಿಕ ಆಕೆಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ.
ಆದರೆ ಆ ಕ್ರಿಯೆಯನ್ನು ಅಲ್ಲೇ ಪೊದೆಗಳಲ್ಲಿ ಅವಿತುಕೊಂಡು ವಿಡಿಯೋ ಚಿತ್ರೀಕರಣ ಮಾಡುವಂತೆಯೂ ತನ್ನ 3 ಗೆಳೆಯರಿಗೆ ಸೂಚಿಸಿದ್ದಾನೆ. ಬಳಿಕ ಆ ವಿಡಿಯೋವನ್ನು ಆತ ಇಂಟರ್ ನೆಟ್‌ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications