ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಇಲ್ಲದೆ ಬಿಎಸ್ಸಿಯಿಂದ ಇಂಜಿನಿಯರಿಂಗ್ ಸೇರಿ

By Mahesh
|
Google Oneindia Kannada News

Lateral Entry For BE. No CET For Science Graduates
ಬೆಂಗಳೂರು, ಮಾ.14: ಡಿಪ್ಲೋಮಾ ಮಾದರಿಯಲ್ಲೇ ಬಿಎಸ್ ಸಿ ಪದವೀಧರರು ಕೂಡಾ ಇಂಜಿನಿಯರಿಂಗ್ ಕೋರ್ಸಿಗೆ ಲ್ಯಾಟರಲ್ ಪ್ರವೇಶ ಅವಕಾಶವನ್ನು ನೀಡಲು aicte ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿಟಿ ರವಿ ಸಿಹಿ ಸುದ್ದಿ ನೀಡಿದ್ದಾರೆ.

ಎಐಸಿಟಿಇ ನಿರ್ದೇಶನದಂತೆ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಬಿಎಸ್ ಸಿ ಲ್ಯಾಟರಲ್ ಪ್ರವೇಶಕ್ಕೆ ಸಂಪುಟದ ಒಪ್ಪಿಗೆ ಸಿಕ್ಕಿದೆ. ಲ್ಯಾಟರಲ್ ಪ್ರವೇಶಕ್ಕೆ ಒಪ್ಪಿಗೆ ಸಿಕ್ಕಿರುವುದರಿಂದ ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 5 ಸಾವಿರಕ್ಕೂ ಅಧಿಕ ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ. ಲ್ಯಾಟರಲ್ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯ ಇರುವುದಿಲ್ಲ.

ಸೀಟು ಹಂಚಿಕೆ ಹಾಗೂ ಪ್ರವೇಶ ಪ್ರಕ್ರಿಯೆ ಕುರಿತಂತೆ ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನ ಅಂತ್ಯದೊಳಗೆ ಅಧಿಸೂಚನೆ ಹೊರಡಿಸಲಿದೆ. ಹೊಸ ನಿಯಮಗಳು ಜಾರಿಗೊಂಡ ನಂತರ ಬಿಎಸ್ಸಿ ವಿದ್ಯಾರ್ಥಿಗಳು ಲ್ಯಾಟರಲ್ ಪ್ರವೇಶಕ್ಕೆ ಸಿದ್ದರಾಗಬಹುದು ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.

ಯಾರು ಅರ್ಹರು?: ಡಿಪ್ಲೋಮಾ ವಿದ್ಯಾರ್ಥಿಗಳ ಲ್ಯಾಟರಲ್ ಪ್ರವೇಶ(ನೇರವಾಗಿ ಬಿಇ ಮೂರನೇ ಸೆಮಿಸ್ಟರ್) ಪ್ರಕ್ರಿಯೆ ಮುಗಿದ ಮೇಲೆ ಉಳಿದ ಸೀಟುಗಳನ್ನು ಬಿಎಸ್ಸಿ ಪದವೀಧ ಅಭ್ಯರ್ಥಿಗಳಿಗೆ ಹಂಚಲಾಗುತ್ತೆ.

* 2013-14ನೇ ಶೈಕ್ಷಣಿಕ ವರ್ಷದಿಂದಲೇ ಬಿಎಸ್ಸಿ ಲ್ಯಾಟರಲ್ ಪ್ರವೇಶ ಜಾರಿಗೆ ಬರಲಿದೆ.
* ವಿಜ್ಞಾನ ಪದವಿ ಓದುತ್ತಿರುವ ವಿದ್ಯಾರ್ಥಿ ಪಿಯು ಅಥವಾ ಕ್ಲಾಸ್ 12ನಲ್ಲಿ ಗಣಿತ ಪಠ್ಯ ವಿಷಯ ಓದಿರಲೇಬೇಕು
* ಬಿಎಸ್ಸಿಯಿಂದ ಲ್ಯಾಟರಲ್ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ಸಿಇಟಿ ಬರೆಯುವ ಅಗತ್ಯ ಇಲ್ಲ.
* ಬಿಎಸ್ಸಿಯಿಂದ ಸೇರಿದವರು ಲಿ ಇಂಜಿನಿಯರಿಂಗ್ ಗ್ರಾಫಿಕ್ಸ್ ಅಥವಾ ಇಂಜಿನಿಯರಿಂಗ್ ಡ್ರಾಯಿಂಗ್ ಹಾಗೂ ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ವಿಷಯದಲ್ಲಿ ಪಾಸಾಗಲೇಬೇಕು.
* ವಿಜ್ಞಾನ ಪದವಿ ವಿದ್ಯಾರ್ಥಿ ಶೇ 45 ಅಂಕ ಗಳಿಸಿದ್ದರೆ ಲ್ಯಾಟರಲ್ ಪ್ರವೇಶ ಪಡೆಯಲು ಸಾಧ್ಯ.
* 2011ರಲ್ಲಿ All India Council for Technical Education (AICTE) ಜಾರಿಗೆ ತಂದ ಈ ನಿಯಮ ಕರ್ನಾಟಕದಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿತ್ತು. ಈಗ ಬಿಎಸ್ಸಿಗೂ ಅನ್ವಯವಾಗಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Most of the students opting to join BE (Engineering) might not be happy with the rule saying that CET scores is a must to join any engineering courses. Well, here is an awesome opportunity for few candidates who wants to join BE without an Entrance test. Well, let me make sure, this opportunity is available for Science Graduates!!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X