ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಾಗ್ರಾ ನುಂಗಿದರೆ ಎಂದೂ ದಪ್ಪಗಾಗಲ್ಲ

By Mahesh
|
Google Oneindia Kannada News

Viagra help men men lose weight
ನ್ಯೂಯಾರ್ಕ್,, ಮಾ.14: ವಯಾಗ್ರಾ ನುಂಗಿದರೆ ಪುರುಷತ್ವ ಉಕ್ಕಿ ಲೈಂಗಿಕ ಕ್ರಿಯೆಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದುಕೊಂಡಿರುವ ಪುರುಷ ಪುಂಗವರಿಗೆ ಮತ್ತೊಂದು ಸಿಹಿ ಸುದ್ದಿಯಿದೆ. ವಯಾಗ್ರಾ ನುಂಗಿದರೆ ನಿಮ್ಮ ದೇಹ ದಪ್ಪಗಾಗುವುದೇ ಇಲ್ಲವಂತೆ.

ನೀವು ಸೇವಿಸುವ ಆಹಾರದ ಕೊಬ್ಬಿನ ಕೋಶಗಳು ಹೊಟ್ಟಿಗೆ ಹೊಂದಿಕೊಂಡಂತೆ ಕ್ಯಾಲೋರಿ ಹೆಚ್ಚಿಸಿ ಸ್ಥೂಲಕಾಯರನ್ನಾಗಿಸುತ್ತದೆ. ಆದರೆ, ವಯಾಗ್ರಾ ಸೇವಿಸುವುದರಿಂದ ಕ್ಯಾಲೋರಿಗಳನ್ನು ಕರಗಿಸಿ ದೇಹವನ್ನು ನವ ಚೈತನ್ಯವನ್ನು ತುಂಬಲಿದೆ.

ಸಂಶೋಧಕರು ಇಲಿ ಮೇಲೆ ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ, ವಯಾಗ್ರಾ ತಿಂದ ಇಲಿ ಹೆಚ್ಚೆಚ್ಚು ತಿಂದರೂ ದೇಹದ ತೂಕದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ ಎಂದು ಸನ್ ವರದಿ ಮಾಡಿದೆ.

ಪ್ರೊ ಅಲೆಕ್ಸಾಂಡರ್ ಫೈಜರ್ ಅವರು ಹೇಳುವಂತೆ ಶಿಶ್ನ ನಿಮಿರುವಿಕೆ ಸಮಸ್ಯೆ ನಿವಾರಣೆಯೊಂದೇ ವಯಾಗ್ರಾದ ಉದ್ದೇಶವಲ್ಲ. ದೇಹದ ಸುಸ್ಥ್ತಿ ಕಾಯ್ದುಕೊಂಡು ದೇಹ ದಪ್ಪವಾಗುವುದನ್ನು ತಡೆಗಟ್ಟಲು ಉಪಯೋಗ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಯಾಗ್ರಾ ಸೇವಿಸುವುದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಕೂಗೆದ್ದಿತ್ತು. ಅಮೆರಿಕದ 86ರ ಹರೆಯದ ಚಿರ ಯುವಕನೊಬ್ಬ ವಯಾಗ್ರಾ ನುಂಗಿ ತನ್ನ ಕಣ್ಣು ಕಳೆದುಕೊಂಡು ಅಂಧತ್ವ ಅನುಭವಿಸಿ ಕೋರ್ಟ್ ಮೆಟ್ಟಿಲೇರಿದ್ದ. ಈ ಕಥೆ ಇಲ್ಲಿದೆ.

ವಯಾಗ್ರಾ ಸಮಸ್ಯೆಗಳೇನು?: 1998ರಿಂದ ಮಾರುಕಟ್ಟೆಯಲ್ಲಿರುವ 'ವಂಡರ್ ಗುಳಿಗೆ' ವಯಾಗ್ರಾದಿಂದ ಈ ವರೆಗೂ ಯಾರಿಗೂ ಕಣ್ಣು ಹೋದ ದಾಖಲೆಗಳಿಲ್ಲ. 55 ವರ್ಷ ದಾಟಿದವರು ಈ ಔಷಧಗಳನ್ನು ಬಳಸಿದಾಗ ಕಿವುಡರಾಗಿರುವುದು ಸಮೀಕ್ಷೆ ಹೇಳಿತ್ತು.

ಶಿಶ್ನ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವಯಾಗ್ರಾ ಸೇವಿಸಿ ಹೆಚ್ಚಿನ ಲೈಂಗಿಕ ಸುಖ ಅನುಭವಿಸುವುದು ಮಾಮೂಲಿನ ಸಂಗತಿಯಾಗಿದೆ. ಎಲ್ಲಾ ಮಾತ್ರೆಗಳಂತೆ ವಯಾಗ್ರಾ ಸೇವಿಸುವುದರಿಂದಲೂ ಸೈಡ್ ಎಫೆಕ್ಟ್ ಉಂಟಾಗುತ್ತದೆ.

ಸೈಡ್ ಎಫೆಕ್ಟ್ಸ್ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ, ತಲೆನೋವು, ಶೀತ, ಮಲಬದ್ಧತೆ, ಕಣ್ಣು ಕತ್ತಲೆ ಕಟ್ಟುವಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅದರೆ, ಕೆಲವೊಮ್ಮೆ ಎದೆನೋವು, ಮೈಕೈ ನೋವು, ಚರ್ಮದಲ್ಲಿ ತುರಿಕೆ, ನಿದ್ರಾಹೀನತೆ, ಸ್ಪರ್ಶ ಹೀನತೆ, ಬಾಯಿ ಒಣಗುವಿಕೆ, ಅತಿಯಾಗಿ ಬೆವರುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡ ಉದಾಹರಣೆಗಳಿದೆ.

ಆದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಳಿಗೆ ಸೇವಿಸಿದರೆ, ಸೈಡ್ ಎಫೆಕ್ಟ್ ದೊಡ್ಡದಾಗೆ ಕಾಡುತ್ತದೆ. ಪಾರ್ಶ್ವವಾಯು, ಮೂರ್ಛೆ ಹೋಗುವುದು, ಮೂಗಿನಲ್ಲಿ ರಕ್ತ ಸೋರುವುದು, ಅಧಿಕ ರಕ್ತದೊತ್ತಡ, ಕಿವುಡಾಗುವಿಕೆ ಅಲ್ಲದೆ ಹೃದಯಾಘಾತ ಕೂಡಾ ಸಂಭವಿಸುವ ಸಾಧ್ಯತೆಗಳಿರುತ್ತದೆ.

ವಿಚಿತ್ರವೆಂದರೆ ಕೆಲವು ಪ್ರಕರಣಗಳಲ್ಲಿ ನಿಮಿರಿಕೆಗೆ ಒಳಪಟ್ಟ ಶಿಶ್ನ ಸುಮಾರು 4 ಗಂಟೆಗಳ ಅದೇ ಸ್ಥಿತಿಯಲ್ಲೇ ಉಳಿದು ಸಮಸ್ಯೆ ಉಂಟು ಮಾಡಿದ್ದು ಇದೆ. ಅದರೆ, ಮೇಲ್ಕಂಡ ಪ್ರಕರಣದಲ್ಲಿ ಅಂಥೋನಿ ವಯಸ್ಸು 86 ವರ್ಷವಾದ್ದರಿಂದ ಸೈಡ್ ಎಫೆಕ್ಟ್ ಗೂ ಮೀರಿದ ಸಮಸ್ಯೆ ಎದುರಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

English summary
Researchers have claimed that the anti-impotence pill Viagra could help men burn the calories from food, melting the fat away.Prof Alexander Pfeifer said that the drug was not only able to minimise erectile problems but can also reduce the risks of gaining excessive weight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X