ಏರ್ ಇಂಡಿಯಾ ಪ್ರಯಾಣ ದರದಲ್ಲಿ ಭಾರಿ ಇಳಿಕೆ

ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯ ಮೂಲಕ ಪ್ರಯಾಣಿಕರು ಬೇಸಿಗೆ ರಜೆ ಮಜಾ ಅನುಭವಿಸಲು ಹೊಸ ಕೊಡುಗೆ ಇದಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಬುಧವಾರದಿಂದ ಮುಂದಿನ 60 ದಿನಗಳವರೆಗೆ ಪ್ರಯಾಣ ದರದಲ್ಲಿ ಇಳಿಕೆ ಕಂಡು ಬರಲಿದೆ. ಎಸಿ ಟ್ರೈನ್ ದರಕ್ಕೆ ಅನುಗುಣವಾಗಿ ವಿಮಾನದರವನ್ನು ಹೊಂದಿಸಲಾಗಿದೆ.
ಉದಾಹರಣೆಗೆ: 60 ದಿನಗಳ ಅಡ್ವಾನ್ ಟಿಕೆಟ್ ಖರೀದಿ ಮಾಡಿದರೆ ದೆಹಲಿ ಹಾಗೂ ಮುಂಬೈ ವಿಭಾಗದ ಪ್ರಯಾಣದ ದರ 3,981 ರು ಆಗಲಿದೆ. ದೆಹಲಿ- ಲಖ್ನೋ ಮಾರ್ಗದ ಪ್ರಯಾಣದ 2,566 ರು ಗೆ ಇಳಿಯಲಿದೆ.
ಮೇ ತಿಂಗಳ ನಂತರ ಪ್ರಯಾಣಕ್ಕೆ ಈ ಟಿಕೆಟ್ ಗಳು ಬಳಕೆ ಮಾಡಬಹುದಾಗಿದೆ. ಈ ಸೌಲಭ್ಯದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ಇತರೆ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್ ಜೆಟ್ ಹಾಗೂ ಜೆಟ್ ಏರ್ ವೇಸ್ ಇತ್ತೀಚೆಗೆ ಪ್ರಯಾಣ ದರದಲ್ಲಿ ಇಳಿಕೆ ಮಾಡಿ ಏರ್ ಇಂಡಿಯಾಗೆ ಭಾರಿ ಪೈಪೋಟಿ ನೀಡಿದ್ದವು. ಆದರೆ, ವಿಮಾನಯಾನದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು.
ಇದರ ಜೊತೆಗೆ ಸಿಂಗಪುರದ ಮೂಲದ ಟೈಗರ್ ಏರ್ ವೇಸ್ ತನ್ನ ವಾರ್ಷಿಕೋತ್ಸವ ಕೊಡುಗೆಯಾಗಿ ಅತಿ ಕಡಿಮೆ ವೆಚ್ಚದಲ್ಲಿ ಬೆಂಗಳೂರು, ಹೈದರಾಬಾದ್, ಕೊಚ್ಚಿ, ತಿರುವನಂತಪುರಂ ಹಾಗೂ ತಿರುಚನಾಪಳ್ಳಿಯಿಂದ ಸಿಂಗಪುರಕ್ಕೆ ವಿಮಾನಯಾನ ಸೇವೆ ಕಲ್ಪಿಸಿದೆ.
ಈ ಆಫರ್ ಮೇ 1 ರಿಂದ ಡಿಸೆಂಬರ್ 15 ರ ತನಕದ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದ್ದು, ಮಾ.15ರೊಳಗೆ ಟಿಕೆಟ್ ಖರೀದಿಸಬೇಕಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಕ್ಕೆ ಟಿಕೆಟ್ ಮೊತ್ತ 50 ಡಾಲರ್ (2700 ರು) ಮಾತ್ರ. ಯಾರಿಗುಂಟು ಯಾರಿಗಿಲ್ಲ.












Click it and Unblock the Notifications