ದೆಹಲಿ : ಮಹಿಳೆ ಅಪಹರಣ, ಸಾಮೂಹಿಕ ಅತ್ಯಾಚಾರ

Delhi : Woman abducted gangraped in moving car
ನವದೆಹಲಿ, ಮಾ. 11 : ದೇಶದ ರಾಜಧಾನಿ ತಲೆತಗ್ಗಿಸುವಂತೆ ಮತ್ತೊಂದು ಅತ್ಯಾಚಾರದ ಘಟನೆ ಭಾನುವಾರ ರಾತ್ರಿ ನಡೆದಿದೆ. ದೆಹಲಿಯ ಅಕ್ಷರಧಾಮ ದೇವಸ್ಥಾನದಿಂದ 35 ವರ್ಷದ ಮಹಿಳೆಯನ್ನು ಅಪಹರಿಸಿ, ಚಲಿಸುತ್ತಿರುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ.

ಒಟ್ಟು 6 ಜನರಿದ್ದ ತಂಡ ಈ ಮಹಿಳೆಯನ್ನು ಅಕ್ಷರಧಾಮದಿಂದ ಭಾನುವಾರ ರಾತ್ರಿ ಅಪಹರಿಸಿದೆ. ನಂತರ ನಗರದ ಸುತ್ತ ಕಾರನ್ನು ಸುತ್ತಾಡಿಸುತ್ತ 4 ಜನರು ಮಹಿಳೆ ಮೇಲೆ ಸತತವಾಗಿ ಅತ್ಯಾಚಾರವೆಸಗಿದ್ದಾರೆ. ಕಾರಿನಲ್ಲಿ ಇಬ್ಬರು ಮಹಿಳೆಯರೂ ಇದ್ದರೆಂದು ದೂರಿನಲ್ಲಿ ಹೇಳಲಾಗಿದೆ. ಅತ್ಯಾಚಾರ ನಡೆಯುತ್ತಿದ್ದಾಗ ಕಾರು ಅನೇಕ ಸಿಗ್ನಲ್‌ಗಳನ್ನು ದಾಟಿದ್ದರೂ ಯಾರ ಗಮನಕ್ಕೆ ಬರದಿರುವುದು ಅಚ್ಚರಿಯ ಸಂಗತಿ.

ಭಾನುವಾರ ರಾತ್ರಿ 10.15ರ ಸುಮಾರಿಗೆ ಪ್ರಗತಿ ಮೈದಾನದ ಬಳಿ ಆಕೆಯನ್ನು ಬಿಸಾಕಿ ಹೋಗಲಾಗಿದೆ. ನೈಟ್ ಬೀಟ್‌ನಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಆಕೆ ರಸ್ತೆ ಪಕ್ಕದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ತಮಗೆ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸಿ ಎಂದು ಆಕೆ ಕೇಳಿದ್ದಾರೆ. ನಂತರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ಮಹಿಳೆ ಬಹಿರಂಗಪಡಿಸಿದ್ದಾರೆ.

ಕಾರಿನಲ್ಲಿದ್ದವರು ತನಗೆ ಪರಿಚಿತರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಅತ್ಯಾಚಾರ ಎಸಗಿದ ನಂತರ ರಸ್ತೆಗೆ ಆಕೆಯನ್ನು ಬಿಸಾಕುವ ಮುನ್ನ ಆಕೆಯ ಬಳಿಯಿದ್ದ ಮೊಬೈಲ್, ಚಿನ್ನದಾಭರಣಗಳನ್ನೂ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ, ಹಿಂದೆ ಕೂಡ ಇದೇ ಜನರಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ದೂರಿದ್ದಾರೆ.

ಈ ಕೃತ್ಯ ಎಸಗಿದ ಎಲ್ಲರ ಹೆಸರನ್ನು ಆಕೆ ಬಹಿರಂಗಪಡಿಸಿದ್ದು, ಪೊಲೀಸರು ಅವರ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಅವರ ಫೋನ್ ಕರೆಗಳನ್ನು ಕೂಡ ಟ್ರಾಕ್ ಮಾಡುತ್ತಿದ್ದಾರೆ. ಮಾರ್ಚ್ 7ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ವಾಹನದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿತ್ತು. ಗುರ್‌ಗಾಂವ್ ನಲ್ಲಿ ಬಿಪಿಓ ಉದ್ಯೋಗಿಯ ಮೇಲೆ ಚಲಿಸುತ್ತಿದ್ದ ಕ್ಯಾಬ್‌ನಲ್ಲಿ ಅತ್ಯಾಚಾರ ಮಾಡಲಾಗಿತ್ತು.

ಮಹಿಳೆಯರ ಪಾಲಿಗೆ ದೆಹಲಿ ಅಸುರಕ್ಷಿತ ಪ್ರದೇಶ ಎಂದು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಕಳೆದ ವರ್ಷ ಡಿಸೆಂಬರ್ 16ರಂದು ಇದೇ ಮಾದರಿಯಲ್ಲಿ ಯುವತಿಯ ಮೇಲೆ 6 ಜನರು ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. [ಚಲಿಸುತ್ತಿರುವ ವಾಹನದಲ್ಲಿ ನಡೆದ ಅತ್ಯಾಚಾರಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+