ಚಿತ್ರದುರ್ಗ ಪಕ್ಷೇತರ ಅಭ್ಯರ್ಥಿ ಸಾವು : ಕೊಲೆ ಶಂಕೆ

ಹಿರಿಯೂರು ಪುರಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಘವೇಂದ್ರ ರೆಡ್ಡಿ(33) ಮೃತ ವ್ಯಕ್ತಿ. ರಾಘವೇಂದ್ರ ರೆಡ್ಡಿ ಅವರ ಮೃತದೇಹ ಹಿರಿಯೂರು ಘನ ತಾಜ್ಯ ವಿಲೇವಾರಿ ಘಟಕದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಹಿರಿಯೂರು ಪುರಸಭೆಯ ವಾರ್ಡ್ ನಂ 1ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಘವೇಂದ್ರ ರೆಡ್ಡಿಯನ್ನು ವಿರೋಧಿ ಅಭ್ಯರ್ಥಿಗಳು ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸ್ಥಳೀಯ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಸೋಲುವ ಭೀತಿಯಲ್ಲಿರುವ ವಿರೋಧಿಗಳು ರಾಘವೇಂದ್ರ ಅವರನ್ನು ಕೊಲೆ ಮಾಡಿಸಿದ್ದಾರೆ ಎಂದು ಸ್ಥಳಕ್ಕಾಗಮಿಸಿದ ಹಿರಿಯೂರು ಠಾಣೆ ಪೊಲೀಸರು ಶಂಕಿಸಿದ್ದಾರೆ.
ರಾಘವೇಂದ್ರ ರೆಡ್ಡಿ ಚುನಾವಣಾ ವೆಚ್ಚಕ್ಕಾಗಿ ಅಧಿಕ ಸಾಲ ಮಾಡಿದ್ದರು. ಚುಣಾವಣೆಯಲ್ಲಿ ಸೋಲುತ್ತೇನೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದ್ದು, ಪಕ್ರಕರಣ ದಾಖಲಿಸಿಕೊಂಡಿರುವ ಹಿರಿಯೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications