ಪತ್ನಿಯನ್ನು ಪೀಸ್ ಮಾಡಿ ನಾಯಿಗೆ ಹಾಕಿದ್ದ ಆಟಗಾರ

ಆ ಆಟಗಾರನ ಹೆಸರು ಬ್ರುನೊ ಫರ್ನಾಂಡಿಸ್ ಡಿಸೋಜಾ. 28 ವರ್ಷದ ಡಿಸೋಜಾಗೆ ಒಬ್ಬ ಹೆಂಡತಿಯಿದ್ದಳು. ಆದರೆ ಅವಳು ಮಾಜಿಯಾಗಿದ್ದಳು. ಇದರಿಂದ ಸಿಟ್ಟಿಗೆದ್ದವನೇ ಆಕೆಯನ್ನು ಅಪಹರರಿಸಿ, ಸಾಯಿಸುವುದಕ್ಕೆ ಸುಪಾರಿ ಕೊಟ್ಟಿದ್ದ.
ಅವಳ ಹೆಸರು ಎಲಿಜಾ ಸಮುಡಿಯೊ. ವೃತ್ತಿಯಿಂದ ಮಾಡೆಲ್ ಆಗಿದ್ದಳು. ಇನ್ನೂ 25 ವರ್ಷದವಳು. ಅವರಿಬ್ಬರಿಗೂ ಒಂದು ಗಂಡು ಮಗುವೂ ಇತ್ತು. ಬಾಡಿಗೆ ಹಂತಕರಿಂದ ಅವಳನ್ನು ಸಾಯಿಸಿಸಿ, ಅವಳ ದೇಹದ ಭಾಗಗಳನ್ನು ಒಂದೊಂದಾಗಿ ಪೀಸ್ ಮಾಡಿ ತನ್ನ ನೆಚ್ಚಿನ ನಾಯಿಗೆ ಉಣಬಡಿಸಿದ್ದ.
ಇದೆಲ್ಲ ನಡೆದಿರುವುದು 2010ರ ಜೂನ್ 4ರಂದು. ಗೋಲ್ ಕೀಪರ್ ಡಿಸೋಜಾ ತನ್ನ ಕಂದಮ್ಮನ ಖರ್ಚು ವೆಚ್ಚಕ್ಕೆ ಹಣ ಪಾವತಿಸುವುದನನ್ನು ತಪ್ಪಿಸಿಕೊಳ್ಳಲು ಪತ್ನಿ ಮುಡಿಯೊಳನ್ನು ಸಾಯಿಸಿದ್ದ. ಮಗುವಿನ ಖರ್ಚಿಗೆ ಹಣ ಕೊಡಲಿಲ್ಲಾಂದ್ರೆ ಕಾನೂನು ಮೊರೆ ಹೋಗುವುದಾಗಿ ಬೆದರಿಸುತ್ತಿದ್ದಳು.
ಹಾಗಾಗಿ ಅವಳನ್ನು ಕೊಲ್ಲುವ ಏರ್ಪಾಡು ನಡೆಯಿತು ಎಂದು ಡಿಸೋಜಾ ಕೋರ್ಟಿಗೆ ತಿಳಿಸಿದ್ದಾನೆ. ಹತ್ಯೆ ನಡೆದ ಬಳಿಕ ಆರಂಭದಲ್ಲಿ ತನ್ನ ಪತ್ನಿ ಸಮುಡಿಯೊ ಏನಾದಳು ಎಂಬುದರ ಬಗ್ಗೆ ಡಿಸೋಜಾ ಏನನ್ನೂ ಹೇಳಿರಲಿಲ್ಲ.
ಆದರೆ ತನ್ನ ಆಪ್ತ ಸ್ನೇಹಿತ ಲೂಯಿಜ್ ಹೆನ್ರಿಖ್ ರೊಮಾವೊ ಬಾಡಿಗೆ ಹಂತಕರಿಗೆ ದುಡ್ಡುಕೊಟ್ಟು ಹೇಗೆ ಸಮುಡಿಯೊಳನ್ನು ಸಾಯಿಸಿದ ಎಂಬುದ ಬಗ್ಗೆ ಕಾಲಾಂತರದಲ್ಲಿ ಬಾಯ್ಬಿಟ್ಟ. ಪ್ರಕರಣದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಶಾಮೀಲಾಗಿದ್ದ.
ಇಷ್ಟೆಲ್ಲ ಆದಮೇಲೆ ನೇರವಾಗಿ ತಾನೇ ಪತ್ನಿ ಸಮುಡಿಯೊಳನ್ನು ಸಾಯಿಸಿಲ್ಲವಾದರೂ ಅದರ ಹೊಣೆಯನ್ನು ತಾನೇ ಹೊತ್ತುಕೊಳ್ಳುವುದಾಗಿ ಡಿಸೋಜಾ ವಿಚಾರಣೆ ವೇಳೆ ಕೋರ್ಟಿಗೆ ಹೇಳಿದ್ದಾನೆ.
ಡಿಸೋಜಾ ಪೊಲೀಸರಿಗೆ ತಿಳಿಸಿರುವಂತೆ ಸಮುಡಿಯೊಳನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಬಳಿಕ ಅವಳ ದೇಹವನ್ನು ಪೀಸ್ ಪೀಸ್ ಮಾಡಿ ಮನೆ ನಾಯಿಗೆ ಹಾಕಲಾಗಿದೆ. ಹಾಗಾಗಿ ಪೊಲೀಸರಿಗೆ ಸಮುಡಿಯೊಳ ದೇಹ ಸಿಗಲೇ ಇಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications