ಗಂಡನ ಸಾಯಿಸಿ ಹೆಂಡ್ತಿಗೆ ಅಧಿಕಾರ ಕೊಟ್ಟ ಅಖಿಲೇಶ್

ಈ ಮಧ್ಯೆ, ಡಿವೈಎಸ್ ಪಿ ಜಿಯಾ ಉಲ್ ಹಕ್ ಕೊಲೆ (ಮಾರ್ಚ್ 2) ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಘುನಾಥ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯಾನನ್ನು ಪ್ರಮುಖ ಆರೋಪಿಯನ್ನಾಗಿಸಿ ಸಿಬಿಐ ಕೇಸು ದಾಖಲಿಸಿಕೊಂಡಿದೆ.
ಜಿಯಾ ಉಲ್ ಹಕ್ ಅವರ ಪತ್ನಿ ಪರ್ವೀನ್ ಅಜಾದ್ ಅವರನ್ನು ಪೊಲೀಸ್ ಕಲ್ಯಾಣ ಇಲಾಖೆಯಲ್ಲಿ ವಿಶೇಷಾಧಿಕಾರಿಯನ್ನಾಗಿ (OSD) ಶುಕ್ರವಾರ ನೇಮಕ ಮಾಡಲಾಗಿದೆ. ಈ ಹುದ್ದೆಯು ಜಿಯಾ ಉಲ್ ಹಕ್ ಅವರು ನಿಭಾಯಿಸುತ್ತಿದ್ದ DSP ಶ್ರೇಣಿಗೆ ಸಮವಾಗಿದೆ. ಅಂದಹಾಗೆ, ಪರ್ವೀನ್ ಅಜಾದ್ ಅವರು ದಂತ ವೈದ್ಯ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮದುವೆ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸ್ಥಗಿತಗೊಳಿಸಿದ್ದ ಪರ್ವೀನ್ ಅವರನ್ನು ಜಿಯಾ ಉಲ್ ಹಕ್ ಅವರೇ ಒತ್ತಾಯ ಮಾಡಿ, ಓದುವಂತೆು.
'OSD ಹುದ್ದೆಗೆ ನೇಮಕಗೊಂಡಿರುವ ಪರ್ವೀನ್ ಅವರಿಗೆ 15,600- 39,100 ರೂಪಾಯಿ ವೇತನ ಶ್ರೇಣಿ ಪ್ರಾಪ್ತಿಯಾಗಿದೆ. ಸದ್ಯಕ್ಕೆ ಪರ್ವೀನ್ ಅವರು ಅಸ್ವಸ್ಥರಾಗಿರುವುದರಿಂದ ತಡವಾಗಿ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ' ಎಂದು ಗೃಹ ಕಾರ್ಯದರ್ಶಿ ಕಮಲ್ ಸಕ್ಸೇನಾ ತಿಳಿಸಿದ್ದಾರೆ.












Click it and Unblock the Notifications