ಅಮೆರಿಕಕ್ಕೆ ಭಾರತ ಅಂದ್ರೆ ಇಷ್ಟ, ಪಾಕ್ ಕಷ್ಟ ಕಷ್ಟ

ಇಂತಹುದೇ ಅಂಶಗಳನ್ನೊಳಗೊಂಡ ಸಮೀಕ್ಷೆಯೊಂದನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು. ಆ ಸಮೀಕ್ಷಾ ವರದಿ ಪ್ರಕಾರ ಅಮೆರಿಕಕ್ಕೆ ತುಂಬಾ ಇಷ್ಟವಾಗುವ ರಾಷ್ಟ್ರಗಳ ಪೈಕಿ ಭಾರತ ಆರನೆಯ ಸ್ಥಾನದಲ್ಲಿದೆ. ಇನ್ನು ಪಕ್ಕದ ಪಾಕಿಸ್ತಾನದ ಬಗ್ಗೆ ಅಮೆರಿಕಕ್ಕೆ ಹೆಚ್ಚು ಒಲವು ಇಲ್ಲ. ಅಮೆರಿಕನ್ನರು ಇಷ್ಟಪಡದ ರಾಷ್ಟ್ರಗಳಲ್ಲಿ ಪಾಕ್ ತೃತೀಯ ಸ್ಥಾನದಲ್ಲಿದೆ. ಇರಾನ್ ಮತ್ತು ಕೊರಿಯಾ ಮೊದಲೆರಡು ಸ್ಥಾನಗಳಲ್ಲಿದೆ.
GallUP Polls ಪ್ರಕಾರ ಶೇ. 68ರಷ್ಟು ಅಮೆರಿಕನ್ನರಿಗೆ ಭಾರತ ಅಂದರೆ ಇಷ್ಟವಂತೆ (ನಿಮಗೇನನ್ನಿಸುತ್ತದೆ?, ಅಮೆರಿಕ ಬಗ್ಗೆ). ಅದೇ ಇಸ್ರೇಲ್, ಭಾರತದ ನಂತರದ ಸ್ಥಾನದಲ್ಲಿದೆ. ಮೆಕ್ಸಿಕೋಗೆ ಕೇವಲ ಶೇ. 47ರಷ್ಟು ಮತ ಸಿಕ್ಕಿದೆ.
ರಷ್ಯಾ ಬಗ್ಗೆ ಅಮೆರಿಕನ್ನರಿಗೆ ಅಷ್ಟಕ್ಕಷ್ಟೇ. ಶೇ. 50 ಮಂದಿ ರಷ್ಯಾ ಇಷ್ಟ ಅಂದಿದ್ದರೆ ಉಳಿದ ಶೇ. 50ರಷ್ಟು ಮಂದಿ ಕಷ್ಟ ಅಂದಿದ್ದಾರೆ. ಚೀನಾದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಶೇ. 52 ಮಂದಿಗೆ ಚೀನಾ ಬೇಡವಂತೆ. ಹಾಗೆ ಲಿಬಿಯಾ, ಇರಾಕ್, ಅಫಘಾನಿಸ್ತಾನ್, ಪ್ಯಾಲೆಸ್ತೀನ್, ಸಿರಿಯಾ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ಕಂಡರೂ ಅಮೆರಿಕನ್ನರಿಗೆ ಇಷ್ಟವಿಲ್ಲ.
ಈ ದೇಶಗಳಲ್ಲಿ ಯುದ್ಧ, ವ್ಯಾಜ್ಯ, ಆಂತರಿಕ ಬೇಗುದಿಯಿಂದಾಗಿ ಅಮೆರಿಕಕ್ಕೆ ಈ ದೇಶಗಳು ಪಸಂದ್ ಆಗಿಲ್ಲ. ಪ್ಯಾಲೆಸ್ತೀನ್ ವಿರುದ್ಧ ಖಡಕ್ಕಾಗಿ ಹೋರಾಡುತ್ತಿರುವ ಇಸ್ರೇಲ್ ಬಗ್ಗೆಯೂ ಅಮೆರಿಕನ್ನರಿಗೆ ಮೆಚ್ಚುಗೆಯಿದೆ. (ಪಿಟಿಐ)












Click it and Unblock the Notifications