ತುಮಕೂರು-ಒಂದು ವಾರ್ಡ್ ನಾಳೆ ಮರು ಮತದಾನ

re-election at Tumkur City
ತುಮಕೂರು, ಮಾ.8 : ರಾಜ್ಯದ ಏಳು ಮಹಾನಗರ ಪಾಲಿಕೆ ಸೇರಿದಂತೆ 208 ನಗರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ತುಮಕೂರು ನಗರ ಸಭೆಯ ಒಂದು ವಾರ್ಡ್ ನಲ್ಲಿ ಮರು ಮತದಾನ ನಡೆಸುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತುಮಕೂರು ನಗರ ಸಭೆಯಲ್ಲಿ ಒಟ್ಟು 35 ರ್ವಾರ್ಡ್ ಗಳಿವೆ. ಎಲ್ಲಾ ವಾರ್ಡ್ ಗಳಿಗೂ ಗುರುವಾರ ಮತದಾನ ನಡೆದಿತ್ತು. ಆದರೆ, ವಾರ್ಡ್ ನಂ 20ರಲ್ಲಿ ಮತದಾನದ ವೇಳೆ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.

ತಾಂತ್ರಿಕ ದೋಷ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನ ಮುಗಿದ ಬಳಿಕ ಮತಯಂತ್ರದ ಪರಿಶೀಲನೆ ನಡೆಸಿದಾಗ ಮತದಾರರ ಪಟ್ಟಿಯಲ್ಲಿರುವುದಕ್ಕಿಂತ ಹೆಚ್ಚಿನ ಮತಗಳು ಚಲಾವಣೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ನಗರ ಸಭೆಯ ವಾರ್ಡ್ ನಂ 20 ರಲ್ಲಿ ಮರುಮತದಾನ ನಡೆಸಲು ಆದೇಶಿಸಿದ್ದಾರೆ. ವಾರ್ಡ್ ನಂ20 ರಲ್ಲಿ ಒಟ್ಟು 5,438 ಮತದಾರರಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿಗೆ ಮತದಾನವಾಗಿದೆ ಆದ್ದರಿಂದ ಜಿಲ್ಲಾಧಿಕಾರಿ ಆರ್.ಕೆ.ರಾಜು ಮರುಮತದಾನ ನಡೆಸುವುದಾಗಿ ಘೋಷಿಸಿದ್ದಾರೆ.

ನಾಳೆ ಮರುಮತದಾನ ನಡೆಯುವುದರಿಂದ ವಾರ್ಡ್ ನಂ 20ರ ವ್ಯಾಪ್ತಿಗೆ ಬರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮರು ಮತದಾನ ನಡೆಯಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+