ಕೆಲಸದ ಆಮಿಷ - ಇಸ್ರೋ ನಕಲಿ ವಿಜ್ಞಾನಿ ಬಂಧನ

Lady arrested for faking Isro job cards
ಬೆಂಗಳೂರು, ಮಾ.4 : ಇಸ್ರೋ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಭುವನೇಶ್ವರ ಮೂಲದ ಶ್ರದ್ಧಾ ಶ್ರಾವಷ್ಠ ಮೊಹಂತಿ (23) ಎಂಬ ಯುವತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಎಸ್.ಎನ್.ಸಿದ್ರಾಮಪ್ಪ ಅವರ ನೇತೃತ್ವದ ವಿಶೇಷ ತಂಡ ಈಕೆಯನ್ನು ಬಂಧಿಸಿದ್ದು, ಇಸ್ರೋ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ 84 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಈಕೆ ತಲಾ 3 ಸಾವಿರ ರೂ. ಸಂಗ್ರಹಿಸಿ ವಂಚಿಸಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.

2012ರಲ್ಲಿ ಇಸ್ರೋ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಶ್ರದ್ಧಾ, ತಾನು ಇಸ್ರೋ ಸಂಸ್ಥೆಯ ಉದ್ಯೋಗಿ ಎಂದು ನಕಲಿ ಗುರುತಿನ ಪತ್ರ ಮತ್ತು ನೇಮಕಾತಿ ಪತ್ರ ತಯಾರಿಸಿ, ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದಳು ಎನ್ನಲಾಗಿದೆ.

ಸೆರೆ ಸಿಕ್ಕಿದ್ದು ಹೇಗೆ : ಶ್ರದ್ಧಾ ತಾನು ಸೃಷ್ಟಿಸಿದ ನಕಲಿ ದಾಖಲೆ, ಅಂಕಪಟ್ಟಿ ಮುಂತಾದವುಗಳನ್ನು ಬೆಂಗಳೂರಿನ ಇಸ್ರೋ ಸಂಸ್ಥೆಗೆ ನೀಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಳು ಅಂಕಪಟ್ಟಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದ ಇಸ್ರೋ ಸಂಸ್ಥೆಯವರಿಗೆ ಇದು ನಕಲಿ ಎಂಬ ಅನುಮಾನವುಂಟಾಗಿದೆ.

ದೆಹಲಿಯ ಇಸ್ರೋ ಕಚೇರಿಗೆ ಈಕೆಯ ದಾಖಲಾತಿಗಳನ್ನು ಪರಿಶೀಲನೆಗೆಗಾಗಿ ಕಳಿಸಿದ್ದಾರೆ. ದೆಹಲಿಯಲ್ಲಿ ಎಲ್ಲಾ ದಾಖಲಾತಿಗಳು ನಕಲಿ ಎಂದು ತಿರಸ್ಕರಿಸಲಾಗಿದೆ.

ಬೆಂಗಳೂರು ಇಸ್ರೋ ಕಚೇರಿಯವರು ನೀಡಿದ ದೂರಿನ ಅನ್ವಯ, ಕಳೆದ 8 ತಿಂಗಳಿನಿಂದ ಈಕೆಯ ವಿರುದ್ಧ ಸಾಕ್ಷ್ಯ ಸಂಗ್ರಹಸುತ್ತಿದ್ದ ಪೊಲೀಸರು ಸೋಮವಾರ ಭುವನೇಶ್ವರದ ಟೌನ್ ಬಿ.ಹೆಚ್.ಪಿ.ಕಾಲೋನಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+