ಮಿನಿ ಮತ ಸಮರ 21,974 ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು, ಮಾ.1 :ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಫೆ.28 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕೆಲವು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಒಟ್ಟು 21,974 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಏಳು ಮಹಾನಗರ ಪಾಲಿಕೆ ಸೇರಿದಂತೆ 208 ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ಚುನಾವಣೆ ನಡೆಯಲಿದೆ. ಈಗಾಗಲೇ 85 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವುದಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಚಾಮರಾಜಪೇಟೆ ಅಂಬೇಡ್ಕರ್ ನಗರ ವಾರ್ಡ್ ಮತ್ತು ತೇರದಾಳ ಪುರಸಭೆಯ 23 ನೇ ವಾರ್ಡ್ ನಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ ಆದ್ದರಿಂದ ಚುನಾವಣೆ ನಡೆಯುವುದಿಲ್ಲ.

ಅಂತಿಮ ಪಟ್ಟಿಯ ಪ್ರಕಾರ 4867 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದ್ದು, 21,974 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 5,900 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳ ಕಣದಲ್ಲಿದ್ದಾರೆ.

ಪ್ರಮುಖ ಪಕ್ಷಗಳ ಅಂತಿಮ ಅಭ್ಯರ್ಥಿಗಳ ಸಂಖ್ಯೆ ಕೆಳಗಿನಂತಿದೆ...
ಬಿಜೆಪಿ 3954
ಕಾಂಗ್ರೆಸ್ 4492
ಜೆಡಿಎಸ್ 3651
ಕೆಜೆಪಿ 1966
ಬಿಎಸ್ ಆರ್ ಕಾಂಗ್ರೆಸ್ 1496
ಜೆಡಿಯು 44
ಸಿಪಿಎಂ 133
ಸಿಪಿಐ 20
ಎನ್ ಸಿಪಿ 30
ಬಿಎಸ್ ಪಿ
03
ವಾಟಾಳ್ ಪಕ್ಷ
15
ಕರ್ನಾಟಕ ಮಕ್ಕಳ ಪಕ್ಷ 10
ಸ್ವತಂತ್ರ್ಯ ಅಭ್ಯರ್ಥಿಗಳು 5900

ಅವಿರೋಧ ಆಯ್ಕೆ : ಬೆಳವಾವಿ ಮಹಾನಗರ ಪಾಲಿಕೆಯ 2, ಸಂಕೇಶ್ವರ ಪುರಸಭೆಯ 11, ಭಟ್ಕಳ ಪುರಸಭೆಯ 13 ವಾರ್ಡ್ ಸೇರಿದಂತೆ ರಾಜ್ಯಾದ್ಯಂತ 85 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಾ.7 ರಂದು ಚುನಾವಣೆ ನಡೆಯಲಿದೆ ಮತ್ತು ಮಾ.11ಕ್ಕೆ ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+