ಕೆಜೆಪಿ ಬಿಜೆಪಿ ಗೊಂದಲ : ನಿಷ್ಠಾವಂತರಿಗಿಲ್ಲ ಟಿಕೆಟ್

BJP are still in confusion
ಬೆಂಗಳೂರು, ಫೆ.28 : ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣ ರಂಗೇರಿದೆ. ಪಕ್ಷಾಂತರದ ಪ್ರಭಾವ ಈ ಚುನಾವಣೆ ಮೇಲೆಯೂ ಪರಿಣಾಮ ಬೀರಿದ್ದು, ಕೆಜೆಪಿಗೊ, ಬಿಜೆಪಿಗೊ ಎಂದು ಅಂತಂತ್ರ ಸ್ಥಿತಿಯಲ್ಲಿರುವ ಕೆಲವು ನಾಯಕರು ತಮ್ಮ ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡದೆ, ತಮ್ಮ ಬೆಂಬಲಿಗರಿಗೆ ಟಕೆಟ್ ನೀಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವುದರಲ್ಲಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಈಗಾಗಲೇ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಚುನಾವಣೆ ಗೆದ್ದ ನಂತರ ಪಕ್ಷ ಬದಲಾವಣೆ ಮಾಡಬೇಕಾಗಿ ಬಂದರೆ ತಮ್ಮ ಹಿಂದೆಯೇ ಬರಬೇಕು ಎಂಬ ಷರತ್ತು ಸಹ ವಿಧಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿರುವುದು ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ.

ಯಡಿಯೂರಪ್ಪ ಬೆಂಬಲಿಗ ಸಚಿವರಾದ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಸಿ.ಸಿ.ಪಾಟೀಲ್ ಮುಂತಾದ ನಾಯಕರು ಕೆಜೆಪಿಗೊ ಬಿಜೆಪಿಗೊ ಎಂದು ಇನ್ನೂ ಗೊಂದಲದಲ್ಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಿರುವುದರಿಂದ ಈ ನಾಯಕರು ಸಹಜವಾಗೆ ಆತಂಕಗೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ, ಅವರು ಗೆದ್ದು ಬಂದ ನಂತರ ಇವರು ಕೆಜೆಪಿ ಸೇರಿದರೆ, ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂದು ಆಲೋಚಿಸಿದ್ದಾರೆ.

ಅದಕ್ಕಾಗಿ ತಂತ್ರ ರೂಪಿಸಿರುವ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿ, ತಾವು ಪಕ್ಷ ಬಿಟ್ಟರೆ ತಮ್ಮ ಜೊತೆಗೆ ಬರುವಂತೆ ಷರತ್ತು ಹಾಕಿದ್ದಾರೆ. ಕೆಲವು ನಾಯಕರಿಗೆ ಈಗಾಗಲೇ ಗಡುವು ನೀಡಿರುವ ಯಡಿಯೂರಪ್ಪ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಪಕ್ಷ ಸೇರಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೆಜೆಪಿ ಮತ್ತು ಬಿಜೆಪಿ ನಡುವಿನ ಗೊಂದಲದಿಂದಾಗಿ, ಬಿಜೆಪಿಯ ಕೆಲವು ನಿಷ್ಠಾವಂತರು ತಮ್ಮ ಕ್ಷೇತ್ರದಲ್ಲಿ ಟಿಕೆಟ್ ದೊರೆಯದೆ ಪರದಾಡುತ್ತಿದ್ದಾರೆ. ಮಾರ್ಚ್ 7ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ನಂತರ ವಿಧಾನಸಭಾ ಚುನಾವಣೆ ತಯಾರಿ ಪ್ರಾರಂಭವಾಗಲಿದೆ. ಆಗ ಪಕ್ಷಾಂತರ ಪರ್ವ ಮತ್ತೆ ಆರಂಭವಾಗಿ ಯಾರು ಯಾವ ಪಕ್ಷ ಸೇರಲಿದ್ದಾರೆ ಎಂದು ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+