ಹತ್ತು ಲಕ್ಷ ದಂಡ ತೆತ್ತ ರೈಲ್ವೆ ಆಹಾರ ನಿಗಮ

Indian Railways
ನವಹೆದಲಿ, ಫೆ, 28 : ಮೂರು ರೂಪಾಯಿ ಉಳಿಸುವ ಆಸೆ ಹೊಂದಿದ್ದ ಭಾರತೀಯ ರೈಲ್ವೆ ಆಹಾರ ನಿಗಮ, ಅದಕ್ಕೆ ಪ್ರತಿಫಲವಾಗಿ 10 ಲಕ್ಷ ರೂ. ದಂಡ ಕಟ್ಟಲು ಸಿದ್ಧವಾಗಿದೆ. ಎಂಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ತಂಪು ಪಾನೀಯಗಳನ್ನು ಮಾರಾಟ ಮಾಡಿದ್ದ, ರೈಲ್ವೆ ಆಹಾರ ನಿಗಮಕ್ಕೆ ನವದೆಹಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯ 10 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ನಿಗಮ 12 ರೂ.ಗಳ ತಂಪುಪಾನೀಯಗಳನ್ನು 15 ರೂ.ಗಳಿಗೆ ಮಾರಾಟ ಮಾಡಿತ್ತು. ಹೆಚ್ಚು ಮೊತ್ತ ನೀಡಿ ಪಾನೀಯ ಕುಡಿದು ದಣಿವಾರಿಸಿಕೊಂಡ ದೆಹಲಿಯ ನಿವಾಸಿಗಳಾದ ಸಚಿನ್ ದಿಮನ್ ಮತ್ತು ಶರಣ್ಯ ಹೆಚ್ಚಿನ ಮೊತ್ತ ವಿಧಿಸಿದ್ದನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಐಆರ್ಎಫ್ ಸಿ ಹೆಚ್ಚಿನ ಬೆಲೆಗೆ ತಂಪು ಪಾನೀಯ ಮಾರಾಟ ಮಾಡುತ್ತಿದೆ ಎಂದು ಗ್ರಾಹಕರ ನ್ಯಾಯಾಲಯಕ್ಕೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದರು. ಸಚಿನ್ ಮತ್ತು ಶರಣ್ಯ ನೀಡಿದ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಪ್ರಯಾಣದ ವೇಳೆ ಪಾನೀಯ ತೆಗೆದುಕೊಳ್ಳದೇ ಬೇರೆ ಆಯ್ಕೆಗಳಿರುವುದಿಲ್ಲ.

ಇಂತಹ ಅಂಶವನ್ನು ಬಂಡವಾಳ ಮಾಡಿಕೊಂಡು ಗ್ರಾಹಕರನ್ನು ವಂಚಿಸಿದ ರೈಲ್ವೆ ನಿಗಮವನ್ನು ತರಾಟೆಗೆ ತೆಗೆದುಕೊಂಡಿತು. ಲಕ್ಷಾಂತರ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಪಾನೀಯ ಮಾರಾಟ ಮಾಡಿದ ರೈಲ್ವೆ ಆಹಾರ ನಿಗಮಕ್ಕೆ, ಖಾಸಗಿ ಕಂಪನಿಗಳಂತೆ ವರ್ತಿಸಬೇಡಿ ಎಂದು ಸೂಚನೆ ನೀಡಿತು. ದೂರು ನೀಡಿದ ಸಚಿನ್ ಮತ್ತು ಶರಣ್ಯ ಅವರಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿತು.

ಮಾಡಿದ ತಪ್ಪಿಗಾಗಿ 10 ಲಕ್ಷ ರೂ. ಮೊತ್ತದ ದಂಡವನ್ನು ದೆಹಲಿಯ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ರೇವಣಿ ಇಡುವಂತೆ ಸೂಚನೆ ನೀಡಿತು. ತಂಪು ಪಾನೀಯ ನೀಡಿ ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದ್ದ ರೈಲ್ವೆ ಆಹಾರ ನಿಗಮ ಈಗ ದಂಡ ಕಟ್ಟಲು ಸಿದ್ದವಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+