ನಿರುದ್ಯೋಗ: ಮೋದಿ ನಾಡಿನಲ್ಲಿ ಕಡಿಮೆ; ಗರಿಷ್ಠ ಎಲ್ಲಿ?

Economic Survey Unemployment lowest in Gujarat Maximum in Kerala
ಅಹಮದಾಬಾದ್, ಫೆ.28‌: ಭಾರತದ ಮುಂದಿನ ಪ್ರಧಾನಿಯಾಗಲು ಹೊರಟಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜ್ಯದಲ್ಲಿ ನಿರುದ್ಯೋಗವನ್ನು ಕನಿಷ್ಠ ಮಟ್ಟದಲ್ಲಿಟ್ಟಿದ್ದಾರೆ.

ಮೋದಿ ಆಳ್ವಿಕೆಯ ಗುಜರಾತಿನ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವ ಕೇಂದ್ರ ಸರಕಾರವೇ ಈ ಅಂಶವನ್ನು ಒಪ್ಪಿಕೊಂಡಿದೆ. ನಿನ್ನೆ ಬಿಡುಗಡೆ ಮಾಡಿದ್ದ ಆರ್ಥಿಕ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ. ಹಾಗಾದರೆ ನಿರುದ್ಯೋಗ ಅತಿ ಹೆಚ್ಚು ಎಲ್ಲಿ ತಾಂಡವವಾಡುತ್ತಿದೆ ಅಂದರೆ ಕೇರಳದತ್ತ ಬೊಟ್ಟು ಮಾಡಿದೆ ಕೇಂದ್ರದ ಆರ್ಥಿಕ ಸಮೀಕ್ಷೆ.

ದೇಶದಾದ್ಯಂತ 2009-10ರಲ್ಲಿ 28 ದಶಲಕ್ಷ ಮಂದಿ ನಿರುದ್ಯೋಗಿಗಳು ಇದ್ದಾರೆ. ಉದ್ಯೋಗ ಪ್ರಮಾಣದಲ್ಲಿ ಹೇಳಿಕೊಳ್ಳುವಂತಹ ಏರಿಕೆ ಇಲ್ಲವಾದರೂ 2004-05 ರಿಂದ 2009-10ರ ವೇಳೆಗೆ ಉದ್ಯೋಗಾವಕಾಶಗಳು ತುಸು ಆಶಾದಾಯಕವಾಗಿದೆ.

ಇದಕ್ಕೆ ಮತ್ತೊಂದು ಕಾರಣವೆಂದರೆ ಯುವ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕೆ ಒತ್ತು ಕೊಡುತ್ತಿರುವುದು. ಒಂದು ಹಂತದ ಶಿಕ್ಷಣ ಮುಗಿದ ಮೇಲೆ ಉದ್ಯೋಗದ ಬೇಟೆಗೆ ಇಳಿಯದೆ ಮತ್ತಷ್ಟು ಶಿಕ್ಷಣ ಪಡೆಯಲು ಮುಂದಾಗಿದ್ದಾರೆ. 1990-91ರಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದವರ ಸಂಖ್ಯೆ 50 ಲಕ್ಷ ಇತ್ತು. ಈ ಪ್ರಮಾಣ 2010-11 ವೇಳೆಗೆ ಗಣನೀಯವಾಗಿ ಏರಿದ್ದು 170 ಲಕ್ಷಕ್ಕೆ ತಲುಪಿದೆ.

ಇನ್ನು ಅಂತರ ರಾಜ್ಯ ಹೋಲಿಕೆ ನೋಡಿದಾಗ ಗುಜರಾತಿನಲ್ಲಿ ಪ್ರತಿ 1 ಸಾವಿರ ಮಂದಿಗೆ ಕೇವಲ 18 ಮಂದಿಯಷ್ಟೇ ನಿರುದ್ಯೋಗ ಎದುರಿಸುತ್ತಿದ್ದಾರೆ. ಅದೇ ಕೇರಳದಲ್ಲಿ ಪ್ರತಿ ಸಾವಿರ ಮಂದಿಗೆ 75 ಮಂದಿ ನಿರುದ್ಯೋಗಿಗಳಿದ್ದಾರೆ. ಬಿಹಾರ ಇದೇ ಮಟ್ಟದಲ್ಲಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MGNREGA) ಗ್ರಾಮಾಂತರ ಭಾಗದಲ್ಲಿ ಉದ್ಯೋಗಾವಕಾಶ ಸುಧಾರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+