ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ರೈಲು ಮತ್ತೆ ಬಂತು!

By Srinath
|
Google Oneindia Kannada News

ಬೆಂಗಳೂರು, ಫೆ. 25: 'ಎಲ್ಲಾ ರೈಲು ಬಿಡ್ತಿದ್ದೀರಾ. ಅದಿನ್ನೂ ಯಾವ ಕಾಲಕ್ಕೋ ಬರೋದು' ಅಂತ ಹೇಳುತ್ತಿರುವಾಗಲೇ ಬೆಂಗಳೂರು-ಚೆನ್ನೈ ನಡುವಣ ಡಬ್ಬಲ್ ಡೆಕ್ಕರ್ ರೈಲು ಪ್ರಾಯೋಗಿಕ ಸಂಚಾರಕ್ಕಾಗಿ ಭಾನುವಾರ ಬೆಂಗಳೂರು ರೈಲು ನಿಲ್ದಾಣಕ್ಕೆ ಬಂದೇ ಬಿಟ್ಟಿದೆ. ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದ್ದು, ಈ ಡಬ್ಬಲ್ ಡೆಕ್ಕರ್ ರೈಲು ಸಂಚಾರ ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಸುಮಾರು ಆರು ಗಂಟೆಗಳಲ್ಲಿ ಪ್ರಯಾಣಿಕರನ್ನು ಚೆನ್ನೈಗೆ ಕರೆದೊಯ್ಯುವ-ಅಲ್ಲಿಂದ ನಮ್ಮನ್ನು ತಂದು ಬಿಡುವ ಈ ಅತ್ಯಾಧುನಿಕ ರೈಲಿಗೆ ತುಂಬು ಸ್ವಾಗತ ಕೋರುವಾ, ನಮ್ಮ ಪ್ರಯಾಣಗಳನ್ನು ಸುಖಕರವಾಗಲಿ ಎಂದೂ ಆಶಿಸುವ.

bangalore-chennai-bangalore-ac-double-decker-train

ಅಂದಹಾಗೆ ಇಂತಹ ರೈಲು ದಕ್ಷಿಣ ಭಾರತಕ್ಕೆ ಮೊದಲು. ಸರಿಯಾಗಿ ಒಂದು ವರ್ಷದ ಹಿಂದಿನ ರೈಲ್ವೆ ಬಜೆಟ್ ನಲ್ಲಿ (2012-13) ಬೆಂಗಳೂರು-ಚೆನ್ನೈ ನಡುವೆ ಡಬ್ಬಲ್ ಡೆಕ್ಕರ್ ರೈಲು ಘೋಷಿಸಲಾಗಿತ್ತು.

ಸಂಪೂರ್ಣ ಹವಾನಿಯಂತ್ರಿತ: ಪಂಜಾಬ್‌ನ ಕಪುರ್ತಲಾ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾದ ಈ ಡಬ್ಬಲ್ ಡೆಕ್ಕರ್‌ನಲ್ಲಿ 11 ಹವಾನಿಯಂತ್ರಿತ ಬೋಗಿಗಳಿದ್ದು, ಪ್ರತಿಯೊಂದರಲ್ಲೂ 120 ಆಸನಗಳಿವೆ. ಸಾಮಾನ್ಯ ರೈಲಿನಲ್ಲಿ ಸರಾಸರಿ 90 ಆಸನಗಳಿರುತ್ತವೆ. ಲ್ಯಾಪ್‌ ಟಾಪ್, ಮೊಬೈಲ್‌ ಗಳನ್ನು ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ ಇದೆ.

ಡಬ್ಬಲ್ ಡೆಕ್ಕರ್ ಎಸಿ ರೈಲು ಪ್ರತಿದಿನ ಬೆಳಗ್ಗೆ 7.25 ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪುತ್ತದೆ. ಮಧ್ಯಾಹ್ನ 2.40ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8.40ಕ್ಕೆ ಚೆನ್ನೈ ತಲುಪುತ್ತದೆ. ಪೆರಂಬೂರು, ಅರಕ್ಕೋಣಂ, ಕಟ್ಪಾಡಿ, ಅಂಬೂರ್, ಜೋಲಾರ ಪೇಟೆ, ಬಂಗಾರ ಪೇಟೆ, ಕೃಷ್ಣರಾಜ ಪುರ ಮತ್ತು ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ವಿಶೇಷ ಏನು?
# ಬೆಂಗಳೂರು- ಚೆನ್ನೈಗೆ ಟಿಕೆಟ್ ಬೆಲೆ ಹಿರಿಯರಿಗೆ 440 ರೂ ಮತ್ತು ಮಕ್ಕಳಿಗೆ 250 ರೂ.
# ಡಬಲ್‌ ಡೆಕ್ಕರ್‌ ರೈಲು ಎರಡೂ ದಿಕ್ಕಿನಲ್ಲಿ ಇನ್ನೂ 45 ಬಾರಿ ಪ್ರಯೋಗಾರ್ಥ ಸಂಚಾರ ನಡೆಸಬೇಕಾಗಿದೆ.
# ಈ ಡಬಲ್‌ ಡೆಕ್ಕರ್‌ ರೈಲು ಗಂಟೆಗೆ 160 ಕಿ ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
# ಆದರೆ 110 ಕಿ.ಮೀ. ವೇಗದಲ್ಲಿ 362 ಕಿ.ಮೀ ದೂರವನ್ನು ಕ್ರಮಿಸಲಿದೆ.
# ಸದ್ಯಕ್ಕೆ ಇದಕ್ಕಿಂತ ವೇಗವಾಗಿ (5 ಗಂಟೆಯಲ್ಲಿ) ಶತಾಬ್ದಿ ಚೆನ್ನೈ-ಬೆಂಗಳೂರು ನಡುವೆ ಸಂಚರಿಸುತ್ತದೆ.
# 30 ವರ್ಷಗಳ ಹಿಂದೆ ಇಂತಹ ರೈಲು ಇದೇ ಹಳಿಗಳ ಮೇಲೆ ಚಲಿಸುತ್ತಿತ್ತು.
# 1500 ಮಂದಿ ಪ್ರಯಾಣಿಕರು ಸಂಚರಿಸಬಹುದು.
# GPS ವ್ಯಸವ್ಥೆ ಇದೆ.
# ಮೊದಲು ಹೌರಾ- ಧನಬಾದ್ ನಡುವೆ ಡಬಲ್‌ ಡೆಕ್ಕರ್‌ ರೈಲು ಸಂಚಾರ ಪ್ರಾರಂಭವಾಯ್ತು.
# ಬಳಿಕ, ದೆಹಲಿ- ಜೈಪುರ ಮತ್ತು ಅಹಮದಾಬಾದ್- ಮುಂಬೈ ನಡುವೆ ಈಗ ಡಬಲ್‌ ಡೆಕ್ಕರ್‌ ರೈಲು ಸಂಚರಿಸುತ್ತಿದೆ.

English summary
Bangalore-Chennai-Bangalore AC double decker train
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X