ಭಾರತ್ ಬಂದ್ : ಐಟಿ ಕಂಪನಿಗಳ ಕಥೆಯೇನು?
ಬೆಂಗಳೂರು, ಫೆ.19: ಎಂದಿನಂತೆ ಕೇಂದ್ರ ಸರ್ಕಾರ ಬುಧವಾರ, ಗುರುವಾರದ ಭಾರತ್ ಬಂದ್ ನಲ್ಲಿ ಪಾಲ್ಗೊಳ್ಳದಂತೆ ಎಲ್ಲಾ ಕಂಪನಿಗಳಿಗೂ ಸೂಚಿಸಿದೆ. ಆದರೆ, ಎರಡು ದಿನ ಸಂಪೂರ್ಣ ಕಂಪ್ಯೂಟರ್, ಲ್ಯಾಪ್ ಟಾಪ್, ಐಪ್ಯಾಡ್, ಸ್ಮಾರ್ಟ್ ಫೋನ್ ಬಂದ್ ಮಾಡಲು ಐಟಿ ಕಂಪನಿಗಳು ಸಿದ್ಧವಿಲ್ಲ.
ವಾರದ ಮಧ್ಯಭಾಗದಲ್ಲಿ ಭಾರತ್ ಬಂದ್ ಬಂದಿರುವುದರಿಂದ ಸಾಲುಸಾಲು ರಜೆಗಳ ಲಾಭ ಪಡೆದು ಅನೇಕ ಸಾಫ್ಟ್ ವೇರ್ ಉದ್ಯೋಗಿಗಳು ತಮ್ಮಮ್ಮ ಊರು ಸೇರುವ ಅವಕಾಶವೂ ಈ ಬಾರಿ ಇಲ್ಲ. ಎಲ್ಲಾ ಉದ್ಯೋಗಿಗಳು ಇನ್ನೂ ರಜೆ ಬಗ್ಗೆ ಗೊಂದಲದಲ್ಲೇ ಇದ್ದಾರೆ. ಕಂಪನಿಗಳು ಉದ್ಯೋಗಿಗಳಿಗೆ ಖಾಸಗಿ ವಾಹನಗಳನ್ನು ಒದಗಿಸುವ ಭರವಸೆ ನೀಡಿರುವುದರಿಂದ ರಜೆ ಕನಸು ಕಾಣುವಂತಿಲ್ಲ.
ಐಟಿ, ಐಟಿಯೇತರ ಸಂಸ್ಥೆಗಳ ಉದ್ಯೋಗಿಗಳ ರಜಾ/ಕೆಲಸ ಸ್ಟೇಟಸ್ ಬಗ್ಗೆ ಒನ್ ಇಂಡಿಯಾ ಒಂದಿಷ್ಟು ಮಾಹಿತಿ ಸಂಗ್ರಹಿಸಿದೆ, ಭಾರತ್ ಬಂದ್ ದಿನದಂದು ಯಾವ ಕಂಪನಿ ಕಾರ್ಯ ನಿರ್ವಹಿಸಲಿದೆ, ಯಾವ ಕಂಪನಿ ಪೂರ್ಣ ರಜೆ ಘೋಷಿಸಿದೆ ಮತ್ತು ಯಾವ ಕಂಪನಿ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂಬುದರ ಬಗ್ಗೆ ಕಣ್ಣು ಹಾಯಿಸೋಣ.
ಭಾರತ್ ಬಂದ್ ದಿನದಂದು ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಅಡಿಯಲ್ಲಿರುವ ಒನ್ ಇಂಡಿಯಾ ವೆಬ್ ತಾಣದ ಉದ್ಯೋಗಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ. ಆದರೆ, ಈ ಎಲ್ಲಾ ಬದಲಾವಣೆ ಹಾಗೂ ರಜೆ ಘೋಷಣೆಗಳು ಬದಲಾವಣೆಗೆ ಒಳಪಟ್ಟಿದ್ದು, ಆಯಾ ಸಂಸ್ಥೆಯ HR ವ್ಯವಸ್ಥಾಪಕರ ಆದೇಶವೇ ಅಂತಿಮ ಎಂದು ತಿಳಿಯತಕ್ಕದ್ದು.
ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಮಂಗಳವಾರವೇ ಬಂದ್ ಬಿಸಿ ತಟ್ಟಿದ್ದು, ಎಲ್ಲೆಡೆ ಬಂದ್ ಆಚರಣೆ ಬಗ್ಗೆ ಸಭೆ, ಮೆರವಣಿಗೆ ಜಾರಿಯಲ್ಲಿದೆ. ಮುಂಬೈನಲ್ಲಿ ಶಿವಸೇನೆ ಬಂದ್ ನೇತೃತ್ವವಹಿಸಿರುವುದು ಬಿಸಿ ಜೋರಾಗೇ ತಟ್ಟಲಿದೆ(ಚಿತ್ರಗಳಲ್ಲಿ ನೋಡಿ). ಮಂಗಳೂರು ಹಾಗೂ ಮೈಸೂರಿನಲ್ಲಿ ಸಾರಿಗೆ ವ್ಯವಸ್ಥೆ ನೋಡಿಕೊಂಡು ರಜೆ ಬಗ್ಗೆ ತಿಳಿಸಲಾಗುವುದು ಎಂದು ಇನ್ಫೋಸಿಸ್ ವಕ್ತಾರರು ಹೇಳಿದ್ದಾರೆ.

ಬಂದ್ ದಿನ ಲಾಗ್ ಔಟ್? ಅಥವಾ WFH
ವಿಪ್ರೋ ಸಂಸ್ಥೆ, ಬೆಂಗಳೂರಿನ ಇನ್ಫೋಸಿಸ್, ಎಚ್ ಸಿಎಲ್, ಐಗೇಟ್, ಆರೇಕಲ್, ಆಕ್ಸೆಂಚರ್, ಐಬಿಎಂ ಹಾಗೂ ಇನ್ನಿತರ ಪ್ರಮುಖ ಸಂಸ್ಥೆಗಳು ಕ್ಯಾಬ್ ಒದಗಿಸಿ ಉದ್ಯೋಗಿಗಳಿಗೆ ಮನೆ ತನಕ 'ಪಿಕ್ ಅಪ್ ಡ್ರಾಪ್' ವ್ಯವಸ್ಥೆ ಒದಗಿಸಲು ಸಜ್ಜಾಗಿದೆ. ಮಹಿಳೆಯರು ಸೇರಿದಂತೆ ಕೆಲ ಉದ್ಯೊಗಿಗಳು ಈಗಾಗಲೇ ತಮ್ಮ ಮ್ಯಾನೇಜರ್ ಗಳ ಓಲೈಕೆ ಮಾಡಿ Work from Home ಸೌಲಭ್ಯ ಪಡೆದುಕೊಂಡಿದ್ದಾರೆ.

ಬಂದ್ ದಿನ ಲಾಗ್ ಔಟ್? ಅಥವಾ WFH
ಕೆಲಸ ನಿಲ್ಲಿಸುವಂತಿಲ್ಲ: ಬಹುತೇಕ ವಿಪ್ರೋ ಹಾದಿಯಲ್ಲೇ ಇತರೆ ಪ್ರಮುಖ ಕಂಪನಿಗಳಾದ ಐಬಿಎಂ, ಇಂಟೆಲ್, ಮೈಕ್ರೋಸಾಫ್ಟ್, ಡೆಲ್, ಎಚ್ ಪಿ, ಆಕ್ಸೆಂಚರ್ ನ ಕೆಲ ವಿಭಾಗಗಳು ಮುಂದಿನ ಶನಿವಾರ (ಫೆ.23)ದಂದು ಕಡ್ಡಾಯ ಹಾಜರಾತಿಯನ್ನು ಜಾರಿಗೊಳಿಸಿದೆ. ಆರೇಕಲ್ ಸೇರಿದಂತೆ ಕೆಲ ಕಂಪನಿಗಳು ಮನೆಯಿಂದ ಕಚೇರಿ ಕೆಲಸ ಮಾಡುವ ಸೌಲಭ್ಯ(Work From Home) ಒದಗಿಸಿದೆ.

ಬಂದ್ ದಿನ ಲಾಗ್ ಔಟ್? ಅಥವಾ WFH
ಬಿಪಿಒ ಹಾಗೂ ಐಟಿಯೇತರ ಕಂಪನಿಗಳು ಹಾಗೂ 24X7 ಸೇವೆ ನೀಡುವ ಸಂಸ್ಥೆಗಳಿಗೆ ಅಷ್ಟಾಗಿ ಬಾಧೆ ತಟ್ಟಿದಂತೆ ಇಲ್ಲ. ಬಹುತೇಕ ಸಂಸ್ಥೆಗಳು ಯುಎಸ್ ಅಥವಾ ಪೂರ್ವ ಏಷ್ಯಾ ಟೈಮ್ ಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದರಿಂದ ರಜೆ, ಬಂದ್ ಪರಿವಿಲ್ಲದಂತೆ ನಿರಂತರ ಕೆಲಸದಲ್ಲಿ ತೊಡಗಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಬಂದ್ ದಿನ ಲಾಗ್ ಔಟ್? ಅಥವಾ WFH
ಖಾಸಗೀಕರಣ, ಹೊರಗುತ್ತಿಗೆ, ಕಾರ್ಮಿಕರ ಕಾನೂನು ಉಲ್ಲಂಘನೆ, ಬೆಲೆ ಏರಿಕೆ ಸೇರಿದಂತೆ ಹತ್ತು ಹಲವು ಅಂಶಗಳ ಕಾರಣ ಭಾರತ್ ಬಂದ್ ನಡೆಸಲು ಭಾರತೀಯ ಮಜ್ದೂರ್ ಸಂಘ(BMS), ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಹಾಗೂ AITUC, CITU, INTUC ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಮುಂದಾಗಿದೆ.

ಬಂದ್ ದಿನ ಲಾಗ್ ಔಟ್? ಅಥವಾ WFH
ಇತ್ತೀಚೆಗೆ ಕರ್ನಾಟಕದ ರಾಜ್ಯ ಸಾರಿಗೆ ಸಂಸ್ಥೆ ಮುಷ್ಕರದಿಂದ ಖಾಸಗಿ ಬಸ್, ಕ್ಯಾಬ್ ಗಳಿಗೆ ಬೇಡಿಕೆ ಹುಟ್ಟಿತ್ತು. ಪದೇ ಪದೇ ಬಿಎಂಟಿಸಿ ಬಂದ್ ಆಗಿರುವುದರಿಂದ ಖಾಸಗಿ ವಾಹನಗಳು ಗುತ್ತಿಗೆ ಬೆಲೆ ಕೂಡಾ ಏರಿಕೆಯಾಗಿದೆ. ಜೊತೆಗೆ ಐಟಿ ಕಂಪನಿಗಳ ಜೊತೆ ಸರಿಯಾದ ಡೀಲ್ ಕುದುರಿಲ್ಲದ ಕಾರಣ ಬಂದ್ ದಿನ ಕೆಲ ಕಂಪನಿಗಳು ಅನಿವಾರ್ಯವಾಗಿ ರಜೆ ಘೋಷಿಸಲೇಬೇಕಾಗಿದೆ.


Click it and Unblock the Notifications
