ಪೊಲೀಸ್ ಜೀಪಿಂದ ಬಿದ್ದು ಗಾಯಗೊಂಡ 3 ವೇಶ್ಯೆಯರು

ಆದರೆ ಹುಚ್ಚು ಸಾಹಸಕ್ಕೆ ಯತ್ನಿಸಿದ ಆ ಯುವತಿಯರು ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ವಾಹನದಿಂದಲೇ ಧುಮುಕಿ ಪರಾರಿಯಾಗಲು ಯತ್ನಿಸಿದರು. ಪರಿಣಾಮವಾಗಿ ರಸ್ತೆ ಮೇಲೆ ಬಿದ್ದು ಗಾಯ ಮಾಡಿಕೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಮೂವರು ವೇಶ್ಯೆಯರು ಹೀಗೆ ಪರಾರಿಯಾಗಲೆತ್ನಿಸಿ ಗಾಯಗೊಂಡಿದ್ದಾರೆ. ಇವರ ಪೈಕಿ ಇಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದರು. ಒಬ್ಬ ಯುವತಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾಳೆ.
ವಾರಾಂತ್ಯ ಶನಿವಾರ ಸಾಯಂಕಾಲ ಈ ಘಟನೆ ನಡೆದಿದೆ. 'ಶನಿವಾರ ಬೆಳಗ್ಗೆ ಎಲ್ಲರನ್ನೂ ಕೋರ್ಟಿಗೆ ಕರೆದೊಯ್ಯುತ್ತಿದ್ದಿವಿ. ಬಂಧಿತ ಯುವತಿಯರನ್ನು ಸಂರಕ್ಷಣಾ ಕೇಂದ್ರಕ್ಕೆ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಅವರನ್ನು ವಾಪಸ್ ಕರೆದುತರುತ್ತಿದ್ದಾಗ... ಜೀಪಿನ ಹಿಂಬದಿಯಿಂದ ಹಾರಿದ ಯುವತಿಯರು ಈ ಅವಘಡ ಮಾಡಿಕೊಂಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications