ಚಿನ್ನದ ಬೆಲೆ 30Kಗಿಂತ ಕೆಳಗಿಳಿದಿದೆ ನೋಡಾ

ಕಳೆದ ತಿಂಗಳ ಎಣಿಕೆಯಂತೆ ಚಿನ್ನದ ಆಮದು ಪ್ರಮಾಣದಲ್ಲಿ ಶೇ 23 ರಷ್ಟು ಏರಿಕೆಯಾಗಿದೆ. ಸುಮಾರು 100 ಟನ್ ಗಳಷ್ಟು ಚಿನ್ನ ಆಮದಾಗಿದೆ. ಚಿನ್ನದ ಆಮದು ನಿಯಂತ್ರಿಸಲು ಸರ್ಕಾರ ಆಮದು ಮೇಲಿನ ಸುಂಕ ಹೆಚ್ಚಿಸಲಿದೆ ಎಂಬ ಸುದ್ದಿ ಹಬ್ಬಿತ್ತು.
ಈ ಕಾರಣದಿಂದ ವರ್ತಕರು ಹೆಚ್ಚು ದಾಸ್ತಾನು ಮಾಡುವ ಕಾರಣದಿಂದ ಹೆಚ್ಚಿನ ಆಮದಿಗೆ ಮುಂದಾಗಿದ್ದಾರೆ. ಆದರೆ, ದಾಸ್ತಾನುದಾರರು ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದ್ದು, ಬೆಲೆ ಇನ್ನೂ ಕುಗ್ಗಲಿ ಎಂದು ಆಶಿಸುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಇಂದಿನ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ.
ದೇಶದ ಪ್ರತಿ ತಿಂಗಳ ಆಮದು ಪ್ರಮಾಣಕ್ಕೆ ಹೋಲಿಸಿದರೆ ಜನವರಿ 2013ರಲ್ಲಿ ಆಮದು ಶೇ 40 ರಷ್ಟು ಹೆಚ್ಚು ಆಮದು ಕಂಡು ಬಂದಿದೆ ಎಂದು ಬಾಂಬೆ ಬುಲಿಯನ್ ಆಸೋಸಿಯೇಷನ್ ನ ಅಧ್ಯಕ್ಷ ಮೋಹಿತ್ ಕಾಂಬೋಜ್ ಹೇಳಿದ್ದಾರೆ. 2012ರಲ್ಲಿ ಸುಮಾರು 860 ಟನ್ ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ವಿವಿಧ ನಗರಗಳಲ್ಲಿ ಚಿನ್ನದ ದರ 30K ಆಸು ಪಾಸಿನಲ್ಲೇ ಇದೆ.
* ಮುಂಬೈನಲ್ಲಿ ಆಭರಣ ಚಿನ್ನ 10ಗ್ರಾಂಗೆ 30170.00 ಆಗಿದ್ದು, ಶುದ್ಧ ಚಿನ್ನದ ದರ 30310.0 ಆಗಿದೆ.
* ದೆಹಲಿಯಲ್ಲಿ ಆಭರಣ ಚಿನ್ನ 10ಗ್ರಾಂಗೆ 30,425.00 ಆಗಿದ್ದು, ಶುದ್ಧ ಚಿನ್ನದ ದರ 30,625.00 ಆಗಿದೆ.
* ಚೆನ್ನೈನಲ್ಲಿ ಆಭರಣ ಚಿನ್ನ 10ಗ್ರಾಂಗೆ 30,260.00 ಆಗಿದ್ದು, ಶುದ್ಧ ಚಿನ್ನದ ದರ 30,380.00 ಆಗಿದೆ.
* ಜೈಪುರದಲ್ಲಿ ಆಭರಣ ಚಿನ್ನ 10ಗ್ರಾಂಗೆ 30,400.00 ಆಗಿದ್ದು, ಶುದ್ಧ ಚಿನ್ನದ ದರ 30,425.00 ಆಗಿದೆ.
* ಅಹಮದಾಬಾದಿನಲ್ಲಿ ಆಭರಣ ಚಿನ್ನ 10ಗ್ರಾಂಗೆ 30,035.00 ಆಗಿದ್ದು, ಶುದ್ಧ ಚಿನ್ನದ ದರ 30,165.00 ಆಗಿದೆ.
ಬೆಂಗಳೂರು ಚಿನಿವಾರ ಪೇಟೆಯಲ್ಲಿ ಭಾನುವಾರ (ಫೆ.17) 22 Karat ಚಿನ್ನದ ದರ 10 ಗ್ರಾಂಗೆ 28,100 ರು, 24 karat ಚಿನ್ನ 10 ಗ್ರಾಂಗೆ 30,150 ರು ಇದೆ. ಮದುವೆ, ಹಬ್ಬದ ಋತು ಮುಗಿದ ಹಿನ್ನೆಲೆಯಲ್ಲಿ ಬೇಡಿಕೆ ತಗ್ಗಿದ್ದು, ಪರಿಣಾಮ ಹಳದಿ ಲೋಹದ ದರ ಭಾರಿ ಇಳಿಕೆ ಕಂಡಿದೆ ಎಂದು ಚಿನಿವಾರ ಪೇಟೆಯಿಂದ ಸುದ್ದಿ ಬಂದಿದೆ.












Click it and Unblock the Notifications