ಕುಂಭಮೇಳ: ಶಿವರಾತ್ರಿದಿನ ವಿಐಪಿಗಳಿಗೆ ಪ್ರವೇಶ ನಿರ್ಬಂಧ
ಅಲಹಾಬಾದ್, ಫೆ.16: ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಸಕಲ ಪಾಪ ಪರಿಹಾರ ಮಾಡಿಕೊಳ್ಳುವ ಬಯಕೆ ಹೊತ್ತು ಬರುವ ಸಾಮಾನ್ಯ ಭಕ್ತಾದಿಗಳ ಪಾಡು ಒಂದು ಕಡೆಯಾದರೆ, ವಿವಿಪಿ, ವಿವಿಐಪಿಗಳ ತಲೆ ಕಾಯುವುದು ಸ್ಥಳೀಯ ಪೊಲೀಸರಿಗೆ ತಲೆ ನೋವಾಗಿದೆ. ವಿಐಪಿಗಳ ಮುಕ್ತ ಸಂಚಾರಕ್ಕೆ ಕೋರ್ಟಿನಿಂದ ನಿರ್ಬಂಧ ಇದ್ದರೂ ವಿಐಪಿಗಳು ಎಲ್ಲೆಂದರಲ್ಲಿ ಸಂಚರಿಸಿ ಗೊಂದಲ ಮೂಡಿಸುತ್ತಿದ್ದಾರೆ. ಪವಿತ್ರ ಸ್ನಾನದ ಮುಖ್ಯ ದಿನದಂದು ವಿಐಪಿಗಳಿಗೆ ಪ್ರವೇಶ ನಿರ್ಬಂಧಿಸಲು ಆಯೋಜಕರು ಆಗ್ರಹಿಸಿದ್ದಾರೆ.
ಅಲಹಾಬಾದ್ ರೈಲ್ವೆ ನಿಲ್ದಾಣದ ಕಾಲ್ತುಳಿತ ನಂತರ ಬೆಂಕಿ ದುರಂತವಾದ ಮೇಲೆ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ವಿಐಪಿಗಳು ತಮ್ಮ ಅಧಿಕೃತವಾಹನದೊಡನೆ ಕುಂಭಮೇಳಕ್ಕೆ ಆಗಮಿಸುವುದಕ್ಕೆ ಅಲಹಾಬಾದ್ ಕೋರ್ಟ್ ನಿರ್ಬಂಧ ಹೇರಿದೆ.
ಲಖ್ನೋ ಡಿಐಜಿ ನವನೀತ್ ಸಿಕೇರಾ ಸಕುಟುಂಬ ಪರಿವಾರ ಸಮೇತಕ್ಕೆ ಮೇಳಕ್ಕೆ ಆಗಮಿಸಿ, ಸಂಗಮದವರೆಗೂ ಹೋಗಿ ಎಲ್ಲೆಡೆ ಸುತ್ತಿ ಬಂದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಕೋರ್ಟ್ ಆದೇಶದ ಬಗ್ಗೆ ಗೊತ್ತಿರಲಿಲ್ಲ ಸ್ಸಾರಿ ಎಂದಿದ್ದಾರೆ. ಇದೇ ರೀತಿ ಬಿಎಸ್ ಎಫ್ ನ ಡಿಐಜಿ ಸುಭಾಶ್ ಜೋಶಿ ಅವರು ಕುಟುಂಬ ಸಮೇತ ಮೇಳಕ್ಕೆ ಬಂದು ಮುಕ್ತವಾಗಿ ಓಡಿದ್ದಾರೆ. ಇವರಿಗೆ ಭದ್ರತೆ ಒದಗಿಸುವುದು, ಜನ ಸಮಾನ್ಯರನ್ನು ನಿಭಾಯಿಸುವುದು ಎರಡರ ಮಧ್ಯೆ ಯುಪಿ ಪೊಲೀಸರು ಗೊಂದಲಕ್ಕೆ ಬಿದ್ದಿದ್ದಾರೆ.
ವಸಂತ ಪಂಚಮಿಯ ಅಂಗವಾಗಿ ಲಕ್ಷಾಂತರ ಮಂದಿ ಭಕ್ತರು ಪುಣ್ಯಸ್ನಾನ ಕೈಕೊಂಡಿದ್ದಾರೆ. ಮಹಾ ಶಿವರಾತ್ರಿ ದಿನದಂದು ವಿಐಪಿ, ವಿವಿಐಪಿಗಳಿಗೆ ಪ್ರವೇಶ ನಿರ್ಬಂಧಿಸುವುದರಿಂದ ಅನಾಹುತಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಸಚಿವಾಲಯಕ್ಕೆ ಸೂಚಿಸುವಂತೆ ಕೋರಿ ಆಯೋಜಕರಾದ ಸಚಿವ ಅಜಂಖಾನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಕಂಚಿ ಕಾಮಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ವಾರಣಸಿಯ ಕುಂಭಮೇಳದಲ್ಲಿ ಪುಣ್ಯಸ್ನಾನ ಕೈಗೊಂಡರು.

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಅಲಹಾಬಾದಿನಲ್ಲಿ ನಡೆದಿರುವ ಕುಂಭಮೇಳದಲ್ಲಿ ಪವಿತ್ರಸ್ನಾನಕ್ಕೂ ಮುನ್ನ ನೃತ್ಯ ಗಾಯನದೊಂದಿಗೆ ಭಕ್ತಿ ಪರವಶವಾಗಿರುವ ಇಸ್ಕಾನ್ ಆಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿಣ್ಣರು

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಕುಂಭಮೇಳದ ಜುನಾ ಅಖಾಡದ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನಕ್ಕಾಗಿ ತೆರಳುವಾಗ ಕುಣಿದಾಡಿದ್ದು ಹೀಗೆ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಕುಂಭಮೇಳದ ಜುನಾ ಅಖಾಡದ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನಕ್ಕಾಗಿ ತೆರಳುವ ದೃಶ್ಯ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಕುಂಭಮೇಳದ ಜುನಾ ಅಖಾಡದ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಪಂಚಾಯತಿ ಅಖಾರ ಮಹಾನಿರ್ವಾನಿ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನಕ್ಕೆ ತೆರಳುವಾಗ ವಾದ್ಯದೊಂದಿಗೆ ಕಾಣಿಸಿದ್ದು ಹೀಗೆ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಪಂಚಾಯತಿ ಅಖಾರ ಮಹಾನಿರ್ವಾನಿ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನಕ್ಕೆ ತೆರಳುವಾಗ..

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನಕ್ಕೆ ತೆರಳುತ್ತಿರುವ ಭಕ್ತಿ ಜನಸಾಗರ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಪಂಚಾಯತಿ ಅಖಾರ ಮಹಾನಿರ್ವಾನಿ ನಾಗಾ ಸಾಧುಗಳು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಪಂಚಾಯತಿ ಅಖಾರ ಮಹಾನಿರ್ವಾನಿ ನಾಗಾ ಸಾಧು ವಸಂತ ಪಂಚಮಿ ಅಂಗವಾಗಿ ಪುಣ್ಯಸ್ನಾನ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಸ್ವಾಮಿ ಚಿದಾನಂದ ಮುನಿ ಹಾಗೂ ಇತರೆ ಧರ್ಮಗುರುಗಳು, ಭಕ್ತಾದಿಗಳು ' ಗಂಗೆಯನ್ನು ಪ್ರೀತಿಸಿ, ಪರಿಸರ ಉಳಿಸಿ' ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಗಂಗೆಯನ್ನು ಪ್ರೀತಿಸಿ, ಪರಿಸರ ಉಳಿಸಿ' ಅಭಿಯಾನದಲ್ಲಿ ಪಾಲ್ಗೊಂಡಿದ್ದ ವಿದೇಶಿ ಭಕ್ತಾದಿಗಳು

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ವಾರಣಾಸಿಯಲ್ಲಿ ವ್ಯಾಲೆಂಟೈನ್ಸ್ ಡೇ ದಿನ ಕಂಡ ವಿದೇಶಿ ಭಕ್ತಾದಿಗಳು

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಅಲಹಾಬಾದಿನ ಸ್ವಾಮಿ ಚಿದಾನಂದ ಮುನಿ ಆಶ್ರಮದಲ್ಲಿ ಗಂಗೆಯನ್ನು ಪ್ರೀತಿಸಿ, ಪರಿಸರ ಉಳಿಸಿ' ಅಭಿಯಾನ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ವ್ಯಾಲೆಂಟೈನ್ಸ್ ಡೇ ದಿನ ಗಂಗೆಯನ್ನು ಪ್ರೀತಿಸಿ, ಪರಿಸರ ಉಳಿಸಿ' ಅಭಿಯಾನ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಖೇಲ್ ಮಹಾ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಮುಳ್ಳಿನ ಹಾಸಿಗೆ ಮೇಲೆ ಮಲಗಿರುವ ಸಾಧು ಜನರ ಆಕರ್ಷಣೆಯ ಕೇಂದ್ರ ಬಿಂದು

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಮಹಾ ಕುಂಭಮೇಳದ ಸನ್ಯಾಸಿ ಅಖಾರಾದ ಮಹಿಳಾ ಸಾಧ್ವಿಗಳು ದೀಕ್ಷೆ ಪಡೆಯಲು ಹೊರಟ್ಟಿದ್ದಾರೆ.

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಕುಂಭಮೇಳದ ಜುನಾ ಅಖಾಡಾದ ನಾಗಾ ಸಾಧುಗಳು ದೀಕ್ಷೆ ಸಮಾರಂಭದಲ್ಲಿ ಕಾಣಿಸಿದ್ದು ಹೀಗೆ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಅಲಹಾಬಾದಿನ ಮಹಾ ಕುಂಭಮೇಳದಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ತೊಡಗಿರುವ ನಾಗಾ ಸಾಧ್ವಿಗಳು

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ಉತ್ತರಾಖಂಡ್ ಸಿಎಂ ವಿಜಯ್ ಬಹುಗುಣ, ಧರ್ಮಗುರುಗಳ ಜೊತೆ ಗಂಗೆಯಲ್ಲಿ ಮಿಂದೆದ್ದಿದ್ದು ಹೀಗೆ

ಕುಂಭಮೇಳ: ನಿರ್ಬಂಧ ಮೀರಿ ನುಗ್ಗುವ ವಿಐಪಿಗಳು
ನಾಗಾ ಸಾಧು ನೀನೆ ಗತಿಯಪ್ಪ ಎಂದು ಆಶೀರ್ವಾದ ಬೇಡುತ್ತಿರುವ ಭಕ್ತೆ

ಕುಂಭಮೇಳದಲ್ಲಿ ದುರಂತ
ಕುಂಭಮೇಳದಲ್ಲಿ ಹತ್ತಿದ ಬೆಂಕಿಯನ್ನು ನಂದಿಸಲು ಸಾಹಸ ಪಡುತ್ತಿರುವ ಕಾರ್ಯಕರ್ತರು
* ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ
* ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ
* ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು
* ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ












Click it and Unblock the Notifications