ಮಾಲ್ಡೀವ್ಸಲ್ಲಿ ಭಾರತೀಯ ಮಹಿಳೆಯ ಗ್ಯಾಂಗ್ ರೇಪ್

ಕೇವಲ ಸಾವಿರ ಜನರು ಮಾತ್ರ ವಾಸಿಸುತ್ತಿರುವ ಧಂಗೇತಿ, ಅಲಿಫ್ ಧಾಲ್ ಅತೋಲ್ ದ್ವೀಪ ಸಮೂಹದ ಒಂದು ದ್ವೀಪವಾಗಿದೆ. ಈ ದ್ವೀಪ ಸಮೂಹದಲ್ಲಿರುವ ಧಂಗೇತಿ ಮೂರನೇ ಅತಿ ಹೆಚ್ಚು ಜನರು ವಾಸಿಸುತ್ತಿರುವ ಪ್ರದೇಶವಾಗಿದೆ. ವಾಸಿಸುತ್ತಿರುವವರಿಗಿಂತ ಪ್ರವಾಸಿಗರೇ ಇಲ್ಲಿ ಹೆಚ್ಚಾಗಿದ್ದಾರೆ.
ಖಾಸಗಿ ಕಂಪ್ಯೂಟರ್ ಕಲಿಕಾ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಭಾರತೀಯ ಮಹಿಳೆ ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಯುವಕರ ಸಮೂಹವೊಂದು, ಆಕೆಯ ಮೇಲೆ ಭಾನುವಾರ ತಡರಾತ್ರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮಹಿಳೆಯ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡಲಾಗಿದ್ದು, ಆಕೆ ಮಾನಸಿಕವಾಗಿ ತುಂಬಾ ಜರ್ಝರಿತರಾಗಿದ್ದಾರೆ. ಮಾನಸಿಕ ಆಘಾತಕ್ಕೆ ಒಳಗಾಗಿರುವ ಮಹಿಳೆಯನ್ನು ಅತೋಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಚಾರ ನಡೆಸಿರುವುದು ಸ್ಥಳೀಯರೋ, ಪ್ರವಾಸಿಗರೋ ಎಂಬುದು ಇನ್ನೂ ತಿಳಿದುಬಂದಿಲ್ಲ.
ಸ್ಥಳೀಯ ಅಧಿಕಾರಿಗಳು ಹೇಳುವುದೇನೆಂದರೆ, ಆ ಮಹಿಳೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರಲಿಲ್ಲ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆಕೆಗೆ ಸ್ಮೃತಿ ಮರಳಿ ಹೇಳಿಕೆ ಪಡೆದ ನಂತರ, ವಿಚಾರಣೆ ನಡೆಸಿ ಈ ಕೃತ್ಯ ಎಸಗಿದವರನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications