ಯುರೋಪ್‌ ಸಂಸತ್ತಿಗೆ ಹೊರಟುನಿಂತ ಮೋದಿ

modi-invited-european-parliament-brussels-in-nov
ಅಹಮದಾಬಾದ್, ಫೆ.11‌: ಭಾರತದ ಸಂಸತ್ತಿಗೆ ಪ್ರಧಾನಿಯಾಗುವತ್ತ ದಾಪುಗಾಲು ಹಾಕುತ್ತಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಯುರೋಪ್‌ ಒಕ್ಕೂಟ ವಿಧಿಸಿದ್ದ ಬಹಿಷ್ಕಾರವನ್ನು ತೆರವುಗೊಳಿಸಿದ್ದು, ಯುರೋಪಿನ ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ 10ನೆಯ Corporate Culture and Spirituality India Conferencenನಲ್ಲಿ ಅನೇಕ ಯೂರೋಪ್‌ ಸಂಸದರು ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇವರೊಂದಿಗೆ ಆನ್ ಲೈನ್ ಸಂಪರ್ಕ ನಡೆಸಿದ ಸಂದರ್ಭದಲ್ಲಿ ಈ ಆಹ್ವಾನ ನೀಡಲಾಗಿದೆ. ಇದೇ ವರ್ಷ ನವೆಂಬರ್‌ ತಿಂಗಳಿನಲ್ಲಿ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಮೋದಿಗೆ ಕರೆ ಬಂದಿದೆ.

ಸುಮಾರು 27 ದೇಶಗಳ ಪ್ರತಿನಿಧಿಗಳು ಭಾಗಿಯಾಗುತ್ತಿರುವುದು ನವೆಂಬರ್ ಅಧಿವೇಶನದ ವಿಶೇಷವಾಗಿದೆ. ಜತೆಗೆ ಮುಂದಿನ ವರ್ಷ ಬ್ರಸೆಲ್ಸ್‌ ನಲ್ಲಿ ನಡೆಯುವ ಯುರೋಪ್‌ ವಾಣಿಜ್ಯ ಸಭೆಗೂ ತಮಗೆ ಆಹ್ವಾನ ನೀಡಲಾಗಿದೆ ಎಂದು ಮೋದಿ ತಮ್ಮ ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.

ಗುಜರಾತ್‌ ಅಭಿವೃದ್ಧಿ ಬಗ್ಗೆ ಯುರೋಪಿನ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೌರ ಶಕ್ತಿ ಕ್ಷೇತ್ರದಲ್ಲಿ ( ರಾಜ್ಯದ ಪತಾನ್ ಜಿಲ್ಲೆಯ ಚಾರಂಕ ಬಳಿ ಏಷ್ಯಾದ ಅತಿ ದೊಡ್ಡ ಸೌರ ಶಕ್ತಿ ಕೇಂದ್ರವಿದೆ ) ರಾಜ್ಯ ತುಂಬಾ ಮುಂದಿದೆ ಎಂದು ಹೊಗಳಿದ್ದಾರೆ ಎಂದು ಕೂಡ ಬ್ಲಾಗ್‌ ನಲ್ಲಿ ತಿಳಿಸಿದ್ದಾರೆ.

ಹವಾಮಾನ ಬದಲಾವಣೆ ವಿಷಯದ ಕುರಿತು ಪ್ರತ್ಯೇಕ ಇಲಾಖೆಯನ್ನು ಹೊಂದಿರುವ ಭಾರತದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆ ಗಿಜರಾತಿನದ್ದಾಗಿದೆ. ವಿಶ್ವದಲ್ಲಿ ಇತರೆ ಮೂರು ದೇಶಗಳು ಹೀಗೆ ಹವಾಮಾನ ಬದಲಾವಣೆ ಬಗ್ಗೆ ಪ್ರತ್ಯೇಕ ಇಲಾಖೆಯನ್ನು ಹೊಂದಿವೆ ಎಂಬುದನ್ನು ಇದೇ ವೇಳೆ, ಮೋದಿ ಯುರೋಪ್ ಯುರೋಪಿನ ಸಂಸರ ಗಮನಕ್ಕೆ ತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+