ಗಲ್ಫ್ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗ ಬಿ.ಆರ್ ಶೆಟ್ಟಿ

Dr. BR Shetty among Ten billionaires in Gulf Indians rich list: Survey
ಬೆಂಗಳೂರು, ಫೆ.11: ಗಲ್ಫ್ ನಲ್ಲಿರುವ ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯನ್ನು ಅರೇಬಿಯನ್ ಬಿಸ್ ನೆಸ್ ಟುಡೇ ಪ್ರಕಟಿಸಿದೆ. ಮಿಕಿ ಜಗ್ತಿಯಾನಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಕರಾವಳಿ ಮೂಲದ ಬಿ.ಆರ್. ಶೆಟ್ಟಿ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಒಂದು ಕಾಲದಲ್ಲಿ ಲಂಡನ್ ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಲ್ಯಾಂಡ್ ಮಾರ್ಕ್ ಗ್ರೂಪ್ ನ ಸ್ಥಾಪಕ ಜಗ್ತಿಯಾನಿ 4.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ. ಫಿರೋಜ್ ಅಲನ್ 4.3 ಬಿಲಿಯನ್ ಡಾಲರ್ ನೊಂದಿಗೆ ದ್ವಿತೀಯ, ದುಬೈಯಲ್ಲಿ ಉದ್ಯಮ ಹೊಂದಿರುವ ರಘು ಕತಾರಿಯಾ 2.5 ಬಿಲಿಯನ್ ಡಾಲರ್ ನೊಂದಿಗೆ ತೃತೀಯ, ಇಎಂಕೆಇ ಗ್ರೂಪ್ ನ ಯೂಸುಫ್ ಅಲಿ 2.2 ಬಿಲಿಯನ್ ಡಾಲರ್ ನೊಂದಿಗೆ ನಾಲ್ಕನೇ ಹಾಗೂ ಬಿ. ಆರ್. ಶೆಟ್ಟಿ 1.9 ಬಿಲಿಯನ್ ಡಾಲರ್ ನೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.

ಇಲ್ಲಿ ಭಾರತೀಯ ಸಮುದಾಯದವರ ದೇಣಿಗೆ ಹಾಗೂ ಯಶಸ್ಸು ಸ್ಮರಣೀಯ ಮತ್ತು ನಮ್ಮ ಪಟ್ಟಿ ಇದನ್ನು ತೋರಿಸುತ್ತಿದೆ. ಮಿಕಿ ಜಗ್ತಿನಿ ಮತ್ತು ಯೂಸುಫ್ ಅಲಿ ಅವರು ಸ್ವಂತ ಬಲದಿಂದ ಮೇಲೇರಿದವರು. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಅರೇಬಿಯನ್ ಬಿಸ್ನೆಸ್ ನ ಸಂಪಾದಕ ಎಡ್ವರ್ಡ್ ಅಟ್ಟವುಡ್ ಹೇಳಿದರು.

ಗರಿಷ್ಠ ಶ್ರೀಮಂತ ಮಹಿಳೆಯಲ್ಲಿ ಜಂಬೊ ಎಲೆಕ್ಟ್ರಾನಿಕ್ಸ್ ನ ಮಾಲಕಿ ವಿದ್ಯಾ ಛಾಬ್ರಿಯಾ ಅವರಿದ್ದರು. 1.4 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ಡಾ ಬಿ.ಆರ್ ಶೆಟ್ಟಿ ಸಾಧನೆ: ದುಬೈನಲ್ಲಿ ತಲೆ ಎತ್ತಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100ನೇ ಮಹಡಿಯ ಮಾಲೀಕರಾಗಿದ್ದಾರೆ. ಜೊತೆಗೆ 141 ನೇ ಮಹಡಿಯಯಲ್ಲಿ ಸ್ವಂತ ಕಚೇರಿ ತೆರೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಕನ್ನಡಿಗನೊಬ್ಬನ ಸಾಧನೆಯಲ್ಲ. ಕರ್ನಾಟಕ ಹೆಮ್ಮೆ ಪಡುವಂತ ಸಾಧನೆಯೂ ಹೌದು.

ಅಬುದಾಬಿಯಲ್ಲಿ ನೆಲೆಸಿರುವ ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಸಮೂಹ ಅಸ್ಪತ್ರೆಗಳ ಸಂಸ್ಥಾಪಕರು. ಎಎಂಸಿ ಸಮೂಹದ ಮೂಲಕ ಪ್ರಸಿದ್ದಿ ಪಡೆದವರು.

ಬಿ.ಆರ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಕಾಪು ಸಮೀಪದ ಬಾವಗತ್ ನವರು. 1972 ರಲ್ಲಿ ಕ್ಲಿನಿಕಲ್ ಫಾರ್ಮಸಿಯಲ್ಲಿ ಪದವಿ ಪಡೆದ ನಂತರ ಉದ್ಯೋಗ ಅರಸಿ ಅಬುದಾಬಿಗೆ ತೆರಳಿ ನ್ಯೂ ಮೆಡಿಕಲ್ ಸೆಂಟರ್ ಎಂಬ ಕ್ಲಿನಿಕ್ ಆರಂಭಿಸಿದ ಹಂತಹಂತವಾಗಿ ಶೆಟ್ಟಿ ಬೆಳೆಯುತ್ತಾ ಹೋದರು.

ಇದೀಗ ಶೆಟ್ಟಿ ದುಬೈ ಸರಕಾರದ ವಿತ್ತ ಇಲಾಖೆಯ ಸಲಹಾ ಮಂಡಳಿಯ ಸದಸ್ಯ ಕೂಡ. 2009ರ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ, ಮಂಗಳೂರು ವಿವಿ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಪತ್ನಿ ಚಂದ್ರಕುಮಾರಿ, ಒಬ್ಬ ಮಗ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಶೆಟ್ಟಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+