ಮೌನಿ ಅಮಾವಾಸ್ಯೆ: 3 ಕೋಟಿ ಭಕ್ತರ ಪುಣ್ಯ ಸ್ನಾನ

ಅಲಹಾಬಾದ್, ಫೆ.10: ಮಹಾ ಕುಂಭಮೇಳದಲ್ಲಿ ಭಾನುವಾರ(ಫೆ.10) ಎಲ್ಲೆಡೆಯಿಂದ ಹರಿದು ಬಂದ ಜನ ಸಾಗರವೇ ಗಂಗಾ ನದಿಯನ್ನು ಆವರಿಸಿದಂತೆ ಕಾಣಿಸುತ್ತಿತ್ತು, ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನಕ್ಕಾಗಿ ಅಸಂಖ್ಯಾತ ಜನರು ಸಂಗಮದತ್ತ ಮುನ್ನುಗ್ಗುತ್ತಿದ್ದಾರೆ.

ಮೌನಿ ಅಮಾವಾಸ್ಯೆ, ಮಹಾ ಕುಂಭಮೇಳದ ಪುಣ್ಯದಿನಗಳಲ್ಲಿ ಒಂದಾಗಿದೆ. ಜನವರಿ 14ರಂದು ಮಕರ ಸಂಕ್ರಾಂತಿ ದಿನ ಮುಳುಗೆದ್ದಿದ್ದ ನಾಗಾ ಸಾಧುಗಳು ಇಂದು ಕೂಡಾ ಎಲ್ಲರಿಗಿಂತ ಮೊದಲು ಪುಣ್ಯ ಸ್ನಾನ ಪಡೆದು ಪುಳಕಿತಗೊಂಡರು. ನಂತರ ಇತರೆ ಭಕ್ತಾದಿಗಳು ತಂಡೋಪತಂಡವಾಗಿ ಸಂಗಮದಲ್ಲಿ ಮುಳುಗು ಹಾಕಿದ್ದರು. ಆರಂಭದ ಆವಧಿಯಲ್ಲೇ ವಿವಿಧ ಅಖಾರಗಳಲ್ಲಿ ಸುಮಾರು 20 ಲಕ್ಷ ಜನ ಪುಣ್ಯ ಸ್ನಾನ ಪಡೆದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸ್ಥಳೀಯ ಅಡಳಿತಾಧಿಕಾರಿಗಳು ಹೇಳಿದ್ದಾರೆ. ದಿನದ ಕೊನೆಗೆ ಸುಮಾರು 3 ಕೋಟಿ ಜನ ಪುಣ್ಯ ಸ್ನಾನ ಪಡೆಯುವ ನಿರೀಕ್ಷೆಯಿದೆ. ಕೊನೆಗೂ ಕುಂಭಮೇಳ ಮೊದಲ ಬಲಿ ಪಡೆದಿದೆ. ಮುಂದೆ ಓದಿ[...]

12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಅಭೂತಪೂರ್ವ ಸುರಕ್ಷತೆ ಒದಗಿಸಲಾಗಿದೆ. ಸುಮಾರು 17,000 ಸಿಬ್ಬಂದಿ ಭಕ್ತಾದಿಗಳ ರಕ್ಷಣೆಗೆ ಟೊಂಕ ಕಟ್ಟಿಕೊಂಡು ನಿಂತಿದ್ದಾರೆ. ಐಟಿಬಿಪಿ, ಸಿಆರ್ ಪಿಎಫ್, ಬಿಎಸ್ ಎಫ್ ಹಾಗೂ ಆರ್ ಎಎಫ್ ಪಡೆಗಳ ಜೊತೆಗೆ ಉತ್ತರ ಪ್ರದೇಶದ ಪೊಲೀಸರು ಈ ಪವಿತ್ರ ಸ್ನಾನಕ್ಕೆ ರಕ್ಷಣೆ ಒದಗಿಸಿದ್ದಾರೆ.

ಇಳಿ ಸಂಜೆ ಹೊತ್ತಿಗೆ ನಡೆಯುವ ಮೌನಿ ಅಮಾವಾಸ್ಯೆ 'ಶಾಹಿ ಸ್ನಾನ'ಕ್ಕೂ ಮುನ್ನ ಕಂಡ ದೃಶ್ಯಾವಳಿ ಇಲ್ಲಿದೆ ನೋಡಿ...

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ನಾಗಾ ಸಾಧುಗಳ ಹಾಹಾಕಾರ ಮುಗಿಲು ಮುಟ್ಟಿದ್ದು, ತ್ರಿಶೂಲಧಾರಿ, ಭಸ್ಮಧಾರಿ, ನಗ್ನಸಾಧುಗಳು ಪವಿತ್ರ ಸ್ನಾನಕ್ಕೆ ಮುನ್ನುಗ್ಗುತ್ತಿರುವುದು

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಅಲಹಾಬಾದಿನ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆದಿನದಂದು ಪವಿತ್ರ ಸ್ನಾನಕ್ಕೆ ಮುಂಜಾನೆಯಿಂದಲೇ ನೂಕು ನುಗ್ಗಲಿದ್ದರೂ ಯಾವುದೇ ತೊಂದರೆ ಸಂಭವಿಸಿಲ್ಲ.

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮಹಾಕುಂಭಮೇಳದ ಜುನಾ ಅಖಾಡದಲ್ಲಿ ಕಿಕ್ಕಿರಿದ ಭಕ್ತರ ಸಮೂಹ, ಜನಸಾಗರವೇ ಮೇಳದ ಆಕರ್ಷಣೆ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಅತ್ತ ವಾರಣಾಸಿಯ ರಾಜೇಂದ್ರ ಪ್ರಸಾದ್ ಘಟ್ಟದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಮುಳುಗು ಹಾಕಲು ಜನಸಾಗರ ಹರಿದು ಬಂದಿದೆ.

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಬೆಳ್ಳಂಬೆಳ್ಳಗೆ ನಾಗಾ ಸಾಧು ತನ್ನ ಜಟೆಯನ್ನು ಎತ್ತಿ ಹಿಡಿದು ಪೋಸ್ ಕೊಟ್ಟಿದ್ದು ಹೀಗೆ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಸಂಗಮದಲ್ಲಿ ಜನಸಾಗರದಿಂದ ತುಂಬಿ ಹೋಗಿರುವ ಸ್ನಾನ ಘಟ್ಟಗಳು

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆಯ ಪವಿತ್ರ ಮುಳುಗು ಹಾಕಲು ಸೇತುವೆ ದಾಟಿ ಸ್ನಾನ ಘಟ್ಟಗಳತ್ತ ತೆರಳುತ್ತಿರುವ ಭಕ್ತಾದಿಗಳು

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ನಂತರ ಫೆ.15ರಂದು ವಸಂತ ಪಂಚಮಿ ಪುಣ್ಯದಿನ ಇನ್ನಷ್ಟು ಭಕ್ತರ ಸಂಖ್ಯೆ ಹೆಚ್ಚಲಿದೆ. ಸುಮಾರು 13ಕ್ಕೂ ಹೆಚ್ಚು ಸ್ನಾನ ಘಟ್ಟದಲ್ಲಿ ಭಕ್ತಾದಿಗಳು ಸುಮಾರು 30 ನಿಮಿಷದಿಂದ 1 ಗಂಟೆವರೆಗೂ ಪುಣ್ಯ ಸ್ನಾನ ಪೂಜಾ ಕೈಂಕರ್ಯ ನೆರವೇರಿಸಲು ಅವಕಾಶ ಒದಗಿಸಲಾಗಿದೆ.

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಮೌನಿ ಅಮಾವಾಸ್ಯೆ ಪುಣ್ಯ ಸ್ನಾನ ಚಿತ್ರ

ಪ್ರತಿಭಟನೆಯ ನಡುವೆಯೂ ವಿವಾದಿತ ಸ್ವಾಮೀಜಿ ನಿತ್ಯಾನಂದ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಅಲಹಾಬಾದಿಗೆ ಬಂದಿಳಿದಿದ್ದಾರೆ. ಸಾಧುಗಳ ಜೊತೆ ಭಾನುವಾರ ಮೆರವಣಿಗೆ ಹೊರಟಾಗ ಕಂಡ ದೃಶ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+