ಚೀನಾ ಚಿನ್ನ: 6ನೇ ವರ್ಷವೂ ಚಿನ್ನದಂತಹ ಸಾಧನೆ

gold-production-china-tops-6th-year-consumption-india-2
ನವದೆಹಲಿ, ಫೆ.8: ನಿರಂತರವಾಗಿ 6 ವರ್ಷದಲ್ಲಿ ಗರಿಷ್ಠ ಪ್ರಮಾಣದಲ್ಲಿ ಚಿನ್ನವನ್ನು ಉತ್ಪಾದಿಸುತ್ತಿರುವ ನೆರೆಯ ಚೀನಾ, ಕಳೆದ ವರ್ಷವೂ ಗರಿಷ್ಠ ಪ್ರಮಾಣದಲ್ಲಿ ಚಿನ್ನವನ್ನು ಉತ್ಪಾದಿಸಿ, ದಾಖಲೆ ನಿರ್ಮಿಸಿದೆ. ಆದರೆ ''ಜಾಣ'' ಚೀನಾ ತಾನು ಉತ್ಪಾದಿಸುವ ನೈಸರ್ಗಿಕ ಉತ್ಪನ್ನಗಳಲ್ಲಿ ಲವಲೇಶವನ್ನೂ ಬೇರೆ ದೇಶಗಳಿಗೆ ಮಾರುವುದಿಲ್ಲ. ಎಲ್ಲವನ್ನೂ ತನ್ನಲ್ಲೇ ಉಳಿಸಿಕೊಳ್ಳುವ ಜಾಣತನ ತೋರುತ್ತದೆ!

6 ವರ್ಷಗಳ ಹಿಂದೆ, 2007ರಲ್ಲಿ ದಕ್ಷಿಣ ಆಫ್ರಿಕ ಚಿನ್ನದ ಉತ್ಪಾದನೆಯಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನ ಅಲಂಕರಿಸಿತ್ತು. 2012ನೆ ಸಾಲಿನಲ್ಲಿ ಚೀನಾ ಹಿಂದಿನ ವರ್ಷಕ್ಕಿಂತ ಶೇ 11.6ರಷ್ಟು ಹೆಚ್ಚಿನ ಪ್ರಮಾಣದ ಚಿನ್ನವನ್ನು ಭೂಗರ್ಭದಿಂದ ಮೇಲಕ್ಕೆತ್ತಿದ್ದು, ಒಟ್ಟು 403.5 ಟನ್‌ಗಳಷ್ಟು ಚಿನ್ನವನ್ನು ಉತ್ಪಾದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಕುತೂಹಲದ ಸಂಗತಿಯೆಂದರೆ ಹೀಗೆ ನೆರೆಯ ಚೀನಾ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಮೂಲಕ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ ಬಳಕೆಯಲ್ಲಿ ಭಾರತ ಅಗ್ರ ಸ್ಥಾನದಲ್ಲಿಯೇ ಇದೆ. ಚೀನಾ ಕಳೆದ ವರ್ಷದಂತೆ ಈ ಬಾರಿಯೂ ಎರಡನೆಯ ಸ್ಥಾನದಲ್ಲಿದೆ ಎಂದು China Gold Association ವರದಿ ಮಾಡಿದೆ.

2015ರಲ್ಲಿ 420-450 ಟನ್ ಚಿನ್ನವನ್ನು ಉತ್ಪಾದಿಸುವ ಗುರಿ ಹೊಂದಿರುವ ಚೀನಾ ಬಳಕೆ ಪ್ರಮಾಣ ಆ ವೇಳೆಗೆ 1,000 ಟನ್ ತಲುಪುವ ಸಾಧ್ಯತೆಯಿದೆ ಎಂದು ಹೇಳಿದೆ. ಕುತೂಹಲದ ಸಂಗತಿಯೆಂದರೆ ಬ್ರಿಟೀಷರಿಂದ ಅದಾಗತಾನೇ ಸ್ವತಂತ್ರಗೊಂಡಿದ್ದ ಚೀನಾ, 1949ರಲ್ಲಿ ಉತ್ಪಾದಿಸಿದ್ದ ಚಿನ್ನದ ಪ್ರಮಾಣ ಕೇವಲ 4.07 ಟನ್. ಅದೇ ಕಳೆದ ಸಾಲಿನಲ್ಲಿ ಅದರ ನೂರು ಪಟ್ಟು ಹೆಚ್ಚು ಚಿನ್ನವನ್ನು ಉತ್ಪಾದಿಸಿ, ಬಂಗಾರದಂತಹ ಸಾಧನೆ ಮಾಡಿದೆ.

ಚೀನಾ ಸರಕಾರ ಜಾರಿಗೆ ತಂದಿರುವ ನೂತನ ಸುಧಾರಣಾ ನೀತಿಗಳೇ ಅಲ್ಲಿನ ಚಿನ್ನದ ಗಣಿಗಳಲ್ಲಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಳ್ಳುವುದಕ್ಕೆ ಹೇತುವಾಗಿದೆ. ಶಾನ್‌ಡಾಂಗ್, ಹೆನಾನ್, ಜಿಯಾಂಗ್‌ಕ್ಸಿಗಳಲ್ಲಿರುವ ಗಣಿಗಳು ಚೀನಾದ ಪ್ರಮುಖ ಚಿನ್ನದ ಗಣಿಗಳು. ಈ ಗಣಿಗಳಿಂದ ರಾಷ್ಟ್ರದ ಒಟ್ಟು ಚಿನ್ನ ಉತ್ಪಾದನೆಯ ಶೇ. 82.71ರಷ್ಟು ಚಿನ್ನದ ಗಣಿಗಾರಿಕೆ ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+