ಪೇದೆಗಳಿಗೆ ಮೊದಲು ರಜೆ ಕೊಡಿ: ಮಿರ್ಜಿ ಹುಕುಂ

ಬುಧವಾರ ರಾತ್ರಿ ಮಾಸ್ಟರ್ ಕಂಟ್ರೋಲ್ ವೈರ್ ಲೆಸ್ ಮೂಲಕ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಈ ಆದೇಶ ನೀಡಿದ್ದಾರೆ. ಇದನ್ನು ಕೇಳಿದ ಪೇದೆಗಳು 'ಬದುಕಿದೆಯಾ ಬಡ ಜೀವವವೇ' ಎಂದು ನಿಟ್ಟುಸಿರುಬಿಟ್ಟಿದ್ದಾರೆ.
'ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ, ಕಿರಿಯ ಸಿಬ್ಬಂದಿಗೆ ರಜೆ ನೀಡುವುದು ಹಿರಿಯ ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಈ ಹಿಂದೆಯೇ ಸೂಚನೆ ರವಾನೆಯಾಗಿದ್ದರೂ ಕೆಲ ಅಧಿಕಾರಿಗಳು ರಜೆ ನೀಡುತ್ತಿರಲಿಲ್ಲ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಆದರೆ ಇನ್ನು ಮುಂದೆ ಪೇದೆಗಳಿಗೆ ರಜೆ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿಯೂ' ಮಿರ್ಜಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ರಾಜಾನುಕುಂಟೆಯಲ್ಲಿ ಠಾಣೆಯಲ್ಲಿಯೇ ಪೇದೆ ಆನಂದ ಕುಮಾರ್, ತನ್ನ ಮೇಲಾಧಿಕಾರಿ ವಿಜಯ ಕುಮಾರ್ ರಜೆ ನೀಡಲಿಲ್ಲವೆಂದು ಕೋಪಿಸಿಕೊಂಡು ಆತನನ್ನು ಗುಂಡಿಟ್ಟು ಕೊಂದ 10 ದಿನಗಳಲ್ಲೇ ಈ ಆದೇಶ ಹೊರಬಿದ್ದಿರುವುದು ಗಮನಾರ್ಹ.












Click it and Unblock the Notifications