ಏರ್ ಶೋ ಪ್ರಮುಖ ಆಕರ್ಷಣೆ ಟೈಗರ್ ಮಾಥ್
ಬೆಂಗಳೂರು, ಫೆ.6: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ಬುಧವಾರ (ಫೆ.6) ಆರಂಭಗೊಂಡಿದ್ದು, ಕೇಂದ್ರ ರಕ್ಷಣಾ ಇಲಾಖೆ ಸಚಿವ ಎ.ಕೆ.ಆಂಟನಿ ಚಾಲನೆ ನೀಡಿದ್ದಾರೆ. ಫೆ.6 ರಿಂದ ಫೆ 10 ರವರೆಗೆ ವೈಮಾನಿಕ ಜಾತ್ರೆ ನಡೆಯಲಿದೆ.
ಬೃಹತ್ ವೈಮಾನಿಕ ಜಾತ್ರೆಯಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ. ಆಗಸದಲ್ಲಿ ಉಕ್ಕಿನ ಹಕ್ಕಿಗಳ ಸದ್ದು ಅಬ್ಬರಿಸುತ್ತಿದೆ. ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾಗೆ ಕೇಂದ್ರ ರಕ್ಷಣಾ ಇಲಾಖೆ ಸಚಿವ ಎ.ಕೆ.ಆಂಟನಿ ಚಾಲನೆ ನೀಡಿದ್ದಲ್ಲದೆ ಯುದ್ಧ ವಿಮಾನದಲ್ಲಿ ಕುಳಿತು ಹುರಿದುಂಬಿಸಿದರು. ಮೊದಲ ದಿನದಲ್ಲಿ ರೆಡ್ ಬುಲ್ ವಿಮಾಗಳು, ಎಚ್ ಎಎಲ್ ನ ಸಾರಂಗ್ ಆಕರ್ಷಕ ಕಸರಸ್ತು ಜನಮನ ಸೆಳೆಯಿತು.
ಟಿಕೆಟ್ ಗೊಂದಲ: ಏರ್ ಶೋಗೆ ಟಿಕೆಟ್ ಸಿಗದೆ ಬೆಂಗಳೂರಿನ ಜಯನಗರದ ಆಕ್ಸಿಸ್ ಬ್ಯಾಂಕ್ ಕಚೇರಿಗಳ ಮುಂದೆ ನೂರಾರು ಜನ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಈ ಬಗ್ಗೆ ವಿವರಗಳನ್ನು ಮುಂದೆ ನಿರೀಕ್ಷಿಸಿ..ಸದ್ಯಕ್ಕೆ ಟಿಕೆಟ್ ಹಾಗೂ ಇನ್ನಿತರ ವಿವರಗಳತ್ತ ಕಣ್ಣು ಹಾಯಿಸಿ
* ಉದ್ಯಮಿ ವೀಕ್ಷಕರ ಟಿಕೆಟ್ : ಪ್ರದರ್ಶನ ಪ್ರದೇಶಕ್ಕೆ ಮಾತ್ರ : 2000 ರು/ USD 35 : ಫೆ.6-8, 2013
* ಸಾರ್ವಜನಿಕರಿಗೆ : ADVA ಪ್ರದೇಶಕ್ಕೆ ಮಾತ್ರ : 400 ರು/ USD 15 :ಫೆ.6-8, 2013
* ಸಾರ್ವಜನಿಕರಿಗೆ : ADVA ಪ್ರದೇಶಕ್ಕೆ ಮಾತ್ರ : 500 ರು/ USD 20 :ಫೆ.9-10, 2013
* ಸಾರ್ವಜನಿಕರಿಗೆ : ಪ್ರದರ್ಶನ ಪ್ರದೇಶಕ್ಕೆ ಮಾತ್ರ : 1000 ರು/ USD 30 :ಫೆ.9-10, 2013
ಪ್ರದರ್ಶನದ ವೇಳೆ :
* ಫೆ.6, 2013: ಮಧ್ಯಾಹ್ನ 2 ರಿಂದ 5 ಗಂಟೆ
* ಫೆ.7, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.8, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.9, 2013: ಬೆಳಗ್ಗೆ 10 ರಿಂದ 5 ಗಂಟೆ
* ಫೆ.10, 2013: ಬೆಳಗ್ಗೆ 10 ರಿಂದ 5 ಗಂಟೆ
* ಟಿಕೆಟ್ ಗಳು ಆನ್ ಲೈನ್ ಹಾಗೂ ಬ್ಯಾಂಕ್ , ಫಿಕ್ಕಿ ಮತ್ತು ಯಲಹಂಕ ವಾಯುನೆಲೆಯಲ್ಲಿ ಲಭ್ಯ
* ಸಾರ್ವಜನಿಕ ಟಿಕೆಟ್ ಗಳಿಗಾಗಿ AXIS ಬ್ಯಾಂಕ್ ಬ್ರ್ಯಾಂಚ್ ಗಳು, FICCI ಬೆಂಗಳೂರು ಕಚೇರಿ ಮತ್ತು ಯಲಹಂಕ ವಾಯುನೆಲೆಯನ್ನು ಸಂಪರ್ಕಿಸಬಹುದು.* ಆನ್ ಲೈನ್ ಮೂಲಕ ಟಿಕೆಟ್ ಪಡೆಯಲು ಏರೋ ಇಂಡಿಯಾ ಅಧಿಕೃತ ವೆಬ್ ತಾಣವನ್ನು ವೀಕ್ಷಿಸಿ..ಟಿಕೆಟ್ ಸಿಗದಿದ್ದರೆ ಸದ್ಯಕ್ಕೆ ಏರ್ ಶೋ ಪ್ರಮುಖ ಆಕರ್ಷಣೆ ಟೈಗರ್ ಮ್ಯಾಥ್ ಹಾಗೂ ಗ್ಲೋಬ್ ಮಾಸ್ಟರ್ ಬಗ್ಗೆ ಸ್ಲೈಡ್ ಗಳಲ್ಲಿ ನೋಡಿ

ಗ್ಲೋಬ್‌ಮಾಸ್ಟರ್
ಭಾರೀ ತೂಕ ಎತ್ತುವ ವಿಮಾನ. ಅಮೆರಿಕದಿಂದ ಐಎಎಫ್ ಇತ್ತೀಚೆಗಷ್ಟೇ ಖರೀದಿಸಿದೆ.
ಯುದ್ಧ ವಾಹನಗಳು, ಯುದ್ಧ ಸನ್ನದ್ಧ ಯೋಧರು ಸೇರಿದಂತೆ ಸುಮಾರು 77.7 ಟನ್ ಪೆಲೋಡ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದರದ್ದು. 4 ಎಂಜಿನ್ ಹೊಂದಿರುವ ಗ್ಲೋಬ್‌ಮಾಸ್ಟರ್ ತಾತ್ಕಾಲಿಕ ರನ್‌ವೇಗಳಲ್ಲೂ ಸಹ ಲ್ಯಾಂಡ್ ಮತ್ತು ಟೇಕಾಫ್ ಆಗುತ್ತೆ. ಚಿತ್ರಕೃಪೆ: http://military.wikia.com/wiki/User:Cypher3

ಟೈಗರ್ ಮಾಥ್
ಪ್ರಾಚೀನ ಮಾದರಿಯ ವಿಮಾನ. ಇದೇ ಮೊದಲ ಬಾರಿಗೆ ಏರ್ ಷೋದಲ್ಲಿ ಪ್ರದರ್ಶನ ನೀಡಲಿದೆ. ಟೈಗರ್ ಮಾಥ್ ಡಿಹೆಚ್82a ವಿಮಾನದಲ್ಲಿ 2 ಸೀಟ್ ಗಳಿವೆ. 185 ಹೆಚ್ ಪಿ ಸಾಮರ್ಥ್ಯದ ಜತೆಗೆ 4 ಸಿಲಿಂಡರ್ ನ ಜಿಪ್ಸಿಕೂಲ್ಡ್ ಎಂಜಿನ್ ಒಳಗೊಂಡಿದೆ.
ಎರಡನೇ ಮಹಾಯುದ್ಧ ವೇಳೆ ರಾಯಲ್ ಏರ್ ಫೋರ್ಸ್ ಗೆ ಇದರಿಂದಲೇ ತರಬೇತಿ ನೀಡಲಾಗುತ್ತಿತ್ತಂತೆ. ಟೈಗರ್ ಮಾಥ್ ವಿಶೇಷ ಅಂದರೆ ವಿದ್ಯುತ್ ಚಾಲನೆ ಇಲ್ಲದೆ ಕೈಯಿಂದಲೇ ಸ್ಟಾರ್ಟ್ ಮಾಡಬೇಕಾಗಿದೆ.
ರಕ್ಷಣಾ ಸಚಿವ ಎಕೆ. ಅಂಟನಿ
ಏರೋ ಇಂಡಿಯಾ ಉದ್ಘಾಟಿಸಿ ವಿಮಾನ ಹತ್ತಿದ ರಕ್ಷಣಾ ಸಚಿವ ಎಕೆ. ಅಂಟನಿ ಹಾಗೂ ಏರ್ ಚೀಫ್ ಮಾರ್ಷಲ್ ಎನ್ ಎಕೆ ಬ್ರೌನ್ ಜೊತೆ

ರಕ್ಷಣಾ ಸಚಿವ ಎಕೆ. ಅಂಟನಿ
ರಕ್ಷಣಾ ಸಚಿವ ಎಕೆ. ಅಂಟನಿ ಅವರು ರಾಜ್ಯ ಸಚಿವ ಜಿತೇಂದ್ರ ಪ್ರಸಾದ್ ಹಾಗೂ ಏರ್ ಚೀಫ್ ಮಾರ್ಷಲ್ ಎನ್ ಎಕೆ ಬ್ರೌನ್ ಜೊತೆ ಕೊಟ್ಟ ಪೋಸ್

ಫ್ರೆಂಚ್ ಏರ್ ಕ್ರಾಫ್ಟ್
ಯಲಹಂಕ ವಾಯುನೆಲೆಯಲ್ಲಿ ನಡೆದಿರುವ ಏರೋ ಇಂಡಿಯಾ 2013ರಲ್ಲಿ ಫ್ರೆಂಚ್ ಏರ್ ಕ್ರಾಫ್ಟ್ Dassault Rafaleಅಬ್ಬರದ ಹಾರಾಟ

ಸಾರಂಗ್ ಹೆಲಿಕಾಪ್ಟರ್
HAL ನಿರ್ಮಿತ ಸಾರಂಗ್ ಹೆಲಿ ಕಾಪ್ಟರ್ ಗಳು ಏರ್ ಶೋನ ಮೊದಲ ದಿನದಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು.












Click it and Unblock the Notifications