ಮತ ನಿಷ್ಠೆಯ ಪರಾಕಾಷ್ಠೆ: ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟರು

ಜಿಲ್ಲೆಯ ಬಯಾದ್ ತಾಲೂಕಿನಲ್ಲಿ ದೆರಾಯಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಮಂಗಳವಾರ ಸಾಯಂಕಾಲ ಈ ಅಮಾನವೀಯ ಘಟನೆ ನಡೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತ ಗಿರೀಶ್ ಪರಮಾರ್ ಎಂಬ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
'15 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇವರೆಲ್ಲ ಗಿರೀಶ್ ಪರಮಾರ್ ಎಂಬ ಅಭ್ಯರ್ಥಿಗೇ ಮತ ಹಾಕಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಕುದಿಯುವ ಎಣ್ಣೆಗೆ ಕೈಹಾಕಿದ್ದಾರೆ. ಈ ಸಂಬಂಧ ಗಿರೀಶ್ ಪರಮಾರನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ' ಎಂದು ಸಬರಕಾಂತ ಎಸ್ಪಿ ಚಿರಾಗ್ ಕೊರಾಡಿಯಾ ಪಿಟಿಐಗೆ ತಿಳಿಸಿದ್ದಾರೆ.
'ದುರದೃಷ್ಟಕರವೆಂದರೆ ಗಾಯಗೊಂಡ ಯಾವೊಬ್ಬರೂ ಗಿರೀಶ್ ಪರಮಾರ್ ವಿರುದ್ಧ ದೂರು ನೀಡಲು ಮುಂದೆ ಬರಲಿಲ್ಲ. ಗಾಯಾಳುಗಳೆಲ್ಲ ಒಂದು ನಿರ್ದಿಷ್ಟ ಕೋಮಿಗೆ ಸೇರಿದವಾರಗಿದ್ದಾರೆ. ಹಾಗಾಗಿ ಮುಂದೇನಾಗುವುದೋ ಎಂಬ ಭೀತಿಯಿಂದ ಅವರು ದೂರು ನೀಡಿಲ್ಲ' ಎಂದು ಚಿರಾಗ್ ಹೇಳಿದ್ದಾರೆ.
'ಈ ನಿರ್ದಿಷ್ಟ ಕೋಮಿನವರು ತಮ್ಮ ಅಭ್ಯರ್ಥಿಗೇ ಮತಹಾಕಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಇಂತಹ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದಾರೆ' ಎಂದು ಗ್ರಾಮಸ್ಥರು ತಿಳಿಸಿದ್ದಾರೆ.












Click it and Unblock the Notifications