'ಭಾರತ ಮಾತಾ' ವಿಶ್ವದ ನೇತೃತ್ವ ವಹಿಸಬೇಕಿದೆ
ನವದೆಹಲಿ, ಫೆ.6: ರತನ್ ಟಾಟಾ, ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರನ್ನು ಹಿಂದಿಕ್ಕಿ, ದೆಹಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಭಾಷಣಗಾರರಾಗಿ ಹೊರಹೊಮ್ಮಿದ ಮೋದಿ ಅವರಿಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿದೆ. ಇಲ್ಲಿನ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಆವರಣಕ್ಕೆ ಮೋದಿ ಅವರು ಬುಧವಾರ (ಫೆ.6) ಮಧ್ಯಾಹ್ನ ಕಾಲಿಟ್ಟರು.
ಎಡಪಂಥೀಯ ಸಂಘಟನೆಗಳ ಬೆಂಬಲಿತ ಸುಮಾರು 50 ವಿದ್ಯಾರ್ಥಿಗಳು ಮೋದಿ ಭಾಷಣ ವಿರೋಧಿಸಿ ಕಾಲೇಜು ಹೊರಗಡೆ ಪ್ರತಿಭಟನೆ ನಡೆಸಿದರು. ಕಾಲೇಜು ಸಭಾಂಗಣದಲ್ಲಿ ಸುಮಾರು 1800ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಂತಚಿತ್ತರಾಗಿ ಕಾತುರದಿಂದ ಮೋದಿ ಭಾಷಣಕ್ಕಾಗಿ ಕಾದು ಕುಳಿತ್ತಿದ್ದರು.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಶೈಕ್ಷಣಿಕ ಪ್ರಗತಿ ಗಮನಿಸಿ ಶ್ರೀರಾಮ್ ಕಾಲೇಜು ವತಿಯಿಂದ ಪ್ರಶಸ್ತಿಯನ್ನು ನರೇಂದ್ರ ಮೋದಿ ವಿತರಿಸಿ ಭಾಷಣ ಆರಂಭಿಸಿದರು. ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿಗಳು ಮೋದಿ ಅವರನ್ನು ಭಾಷಣಗಾರರಾಗಿ ಆಯ್ಕೆ ಮಾಡಿದ್ದೇ ದೊಡ್ಡ ವಿಷಯವಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆಯ ಅಘೋಷಿತ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಅತ್ಯಂತ ಜಾಣ್ಮೆಯಿಂದ ರಾಜಕೀಯ ಬೆರೆಸದೆ ಆಡಳಿತಾರೂಢ ಪಕ್ಷಕ್ಕೆ ಚುರುಕು ಮುಟ್ಟಿಸುತ್ತಾ ವಿದ್ಯಾರ್ಥಿಗಳನ್ನು ಎಚ್ಚರಿಸಿದ್ದು ವಿಶೇಷವಾಗಿತ್ತು.
ಮೋದಿ ಭಾಷಣದ ಮುಖ್ಯಾಂಶಗಳು ದೃಶ್ಯಾವಳಿಯಲ್ಲಿ ಓದಿರಿ...

ಮೋದಿ ಭಾಷಣದ ತುಣುಕುಗಳು
* ಸಿಂಗಪುರದಲ್ಲಿ ಕುಡಿಯುವ ಹಾಲು ಗುಜರಾತಿನದ್ದು, ಅಫ್ಘಾನಿಸ್ತಾನದಲ್ಲಿ ಟೊಮ್ಯಟೋ ತಿಂದರೆ ಅದು ಗುಜರಾತಿನದ್ದಾಗಿರುತ್ತದೆ. ಇದೇ ಸ್ಥಿತಿ ಭಾರತದೆಲ್ಲೆಡೆ ಕಾಣುವಂತಾಗಬೇಕು.
* ಗುಜರಾತಿನಲ್ಲಿ ಶೇ 80ರಷ್ಟು ಹೈನುಗಾರಿಕೆಯಲ್ಲಿ ಪ್ರಗತಿ ಕಾಣಲಾಗಿದೆ.
* ಗುಜರಾತಿನಲ್ಲಿ ಪ್ರವಾಸೋದ್ಯಮ ಬೆಳೆಯಲು ಕೈಗಾರಿಕಾ ಪ್ರಗತಿಯೂ ಕಾರಣ.

ಮೋದಿ ಭಾಷಣದ ತುಣುಕುಗಳು
* ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಬೇಕಾದರೆ, ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ನಾವು ಸುಧಾರಣೆಯಾಗಲೇಬೇಕು
* ಮೇಡ್ ಇನ್ ಇಂಡಿಯಾ ಎಂಬ ಬ್ರ್ಯಾಂಡ್ ಗೆ ವಿಶ್ವದೆಲ್ಲೆಡೆ ಬೃಹತ್ ಮನ್ನಣೆ ಸಿಗಬೇಕಿದೆ.

ಮೋದಿ ಭಾಷಣದ ತುಣುಕುಗಳು
* ಯುವ ಪೀಳೆಗೆಯನ್ನು ಕೇವಲ ಹೊಸ ಪೀಳಿಗೆ ಮತದಾರರಾಗಿ ಕಾಣುವುದನ್ನು ಬಿಟ್ಟು ಹೊಸ ಪೀಳಿಗೆ ಯುವಶಕ್ತಿಯಾಗಿ ಕಾಣಬೇಕು.
* ವಿಶ್ವ ಗುರುವಿನಂತೆ 'ಭಾರತ ಮಾತಾ' ವಿಶ್ವದ ನೇತೃತ್ವ ವಹಿಸುವಂತಾಗಬೇಕು ಎಂಬುದು ನನ್ನ ದೊಡ್ಡ ಕನಸು
* ವಿಶ್ವದ ಅತ್ಯಂತ ಯುವ ಮನಸ್ಸಿನ ದೇಶ ಭಾರತ ಎನ್ನಲು ಹೆಮ್ಮೆಯಾಗುತ್ತದೆ.

ಮೋದಿ ಭಾಷಣದ ತುಣುಕುಗಳು
* ನಾನು ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ನಾಡಿನಿಂದ ಬಂದಿದ್ದೇನೆ ಎಂದು ಗರ್ವದಿಂದ ಹೇಳುತ್ತೇನೆ
* ಸ್ವಾಮಿ ವಿವೇಕಾನಂದರ 150ರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಯುವ ಶಕ್ತಿ ಭಾರತವನ್ನು ಮುನ್ನಡೆಸಲು ಮುಂದಾಗಬೇಕಿದೆ.

ಮೋದಿ ಭಾಷಣದ ತುಣುಕುಗಳು
* Pro people...Good Governance ಮಾದರಿಯಲ್ಲಿ ನಂಬಿಕೆ ಇಟ್ಟವರು ನಾವು
* ವಿಶ್ವದ ಅತ್ಯಂತ ಯುವ ಮನಸ್ಸಿನ ದೇಶ ಭಾರತ ಎನ್ನಲು ಹೆಮ್ಮೆಯಾಗುತ್ತದೆ.
* ನಮ್ಮಲ್ಲಿ ಶೇ 30ಕ್ಕೂ ಜನ 35 ವಯಸ್ಸಿಗಿಂತ ಕಡಿಮೆ ಇದ್ದಾರೆ. ಚೀನಾ ಮುದಿತನದಲ್ಲಿದೆ.

ಮೋದಿ ಭಾಷಣದ ತುಣುಕುಗಳು
* ಗುಜರಾತಿನಲ್ಲಿ ಕೃಷಿ ಯಶಸ್ವಿಯಾಗಲು, ಅಂತರ್ಜಲ ಸಂರಕ್ಷಣೆ ಕಾರಣ, ಪ್ರತಿ ವರ್ಷ ಶೇ 10ರಷ್ಟು ಪ್ರಗತಿ ಸಾಧಿಸಿದ್ದೇವೆ.
* ನಮ್ಮ ದೇಶದಲ್ಲಿರುವಷ್ಟು ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಬೇರೆಲ್ಲೂ ಇಲ್ಲ. ಆದರೆ, ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಮೋದಿ ಭಾಷಣದ ತುಣುಕುಗಳು
*ಕೆಟ್ಟ ಆಡಳಿತವೇ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
* ದೇಶಕ್ಕೆ ಸ್ವತಂತ್ರ ಬಂದು 60 ವರ್ಷಗಳು ಕಳೆದರೂ, ನಾವು ಸ್ವಯಂ ಆಡಳಿತ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಪ್ರಸಕ್ತ ಸನ್ನಿವೇಶಗಳು ದೇಶಕ್ಕೆ ಆಶಾದಾಯಕವಾಗಿಲ್ಲ. ಆದರೆ ನನಗೆ ವಿಶ್ವಾಸವಿದೆ ನಾವು ಈ ಸನ್ನಿವೇಶವನ್ನು ಬದಲಾಯಿಸಬಹುದು












Click it and Unblock the Notifications