ಚಿತ್ರಗಳಲ್ಲಿ: ಕುಂಭ ಮೇಳದಲ್ಲಿ ವಿದೇಶಿಯರಿಗೇನು ಕೆಲ್ಸ?

ಮಹಾ ಕುಂಭಮೇಳಕ್ಕೆ ವಿದೇಶಿಯರು ಆಗಮಿಸುವುದು ಹೊಸದೇನಲ್ಲ. ಆದರೆ, ಪ್ರತಿ ವರ್ಷಕ್ಕಿಂತ ಈ ಬಾರಿ ವಿದೇಶಿಯರು ಹೆಚ್ಚಿನ ಆಸಕ್ತಿ ತೋರಿದ್ದಾರೆ ಏಕೆ? ಎಂಬ ಪ್ರಶ್ನೆ ಹುಡುಕಿ ಹೊರಟರೆ ಉತ್ತರ ಸರಳವಿದೆ.

ವಿದೇಶಿಯರಿಗೆ ಕುಂಭ ಮೇಳ ಈಗ ಬರೀ ಕುತೂಹಲದ ತಾಣವಾಗಿಲ್ಲ. ಮಾನಸಿಕ ನೆಮ್ಮದಿ, ಆಧ್ಯಾತ್ಮಿಕವಾಗಿ ಹೊಸತನ್ನು ಹುಡುಕುವ ಅದ್ಭುತ ವೇದಿಕೆಯಾಗಿ ಹೊರ ಹೊಮ್ಮಿದೆ. ಭಾರತೀಯರ ಯೋಗ ಶಕ್ತಿ ಮುಖ್ಯವಾಗಿ ವಿದೇಶಿಯರನ್ನು ಆಕರ್ಷಿಸಿದೆ.

ನಾನು 2000 ಇಸವಿಯಲ್ಲಿ ಯೋಗ ಕಲಿತೆ. ಅಲ್ಲಿಂದ ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೇನೆ. ಆಡಂಬರದ ಜೀವನದಿಂದ ಆಧ್ಯಾತ್ಮಿಕತೆಯ ಹೊಸ ಮಜಲನ್ನು ಕಾಣಲು ಭಾರತ ಸಹಕಾರಿ, ಕುಂಭಮೇಳ ಒಂದು ಅದ್ಭುತ ಮೇಳ ಎಂದು ಮಾ ಪ್ರೇಮ್ ಚಾಂದಿನಿಯಾಗಿ ಪರಿವರ್ತನೆಗೊಂಡಿರುವ ಇರಾನ್ ಮೂಲದ ಪ್ರವಾಸಿ ಮಹಿಲೆ ಹೇಳುತ್ತಾರೆ. ಇನ್ನಷ್ಟು ಚಿತ್ರಗಳು ತಪ್ಪದೇ ನೋಡಿ

ಮಾ ಪ್ರೇಮ್ ಚಾಂದಿನಿ ಅವರಂತೆ ಅನೇಕ ವಿದೇಶಿ ಮಹಿಳೆಯರು, ಪುರುಷರು ಸನ್ಯಾಸ ದೀಕ್ಷೆ ಪಡೆದಿದ್ದಾರೆ. ನಾಗಾ ಸಾಧುಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಗಂಗಾ ನದಿ ಪವಿತ್ರತೆ ಕಾಪಾಡಲು, ನೀರು ಸ್ವಚ್ಛವಾಗಿರಿಸಲು ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಿದ್ದಾರೆ.

ಉತ್ತರ ಪ್ರದೇಶದ ಅಲಹಾಬಾದಿನ ಗಂಗಾ ನದಿ ತಟದಲ್ಲಿ ಜ.14ರಿಂದ ನಡೆದಿರುವ 55 ದಿನಗಳ ಈ ಮಹಾ ಮೇಳದಲ್ಲಿ ನಾಗಾ ಸಾಧುಗಳೇ ವಿದೇಶಿಯರ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಕುಂಭಮೇಳದಲ್ಲಿ ಕಂಡ ವಿದೇಶಿಯರ ಕೆಲ ಚಿತ್ರಗಳು ಇಲ್ಲಿದೆ ನೋಡಿ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಕ್ಯಾಲಿಫೋರ್ನಿಯಾದಿಂದ ಬಂದ Ashley (L), Marcia (C) and Mereith (R) ಕುಂಭಮೇಳಕ್ಕೆ ಬರುವ ಭಕ್ತಾದಿಗಳನ್ನು ಸ್ವಾಗತಿಸುತ್ತಿದ್ದಾರೆ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಮಹಾ ಕುಂಭ ಮೇಳದಿಂದ ಗಂಗಾನದಿ ಹಾಳಾಗದಿರಲಿ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದು 'ಮರ' ದ ದಿರಿಸು ಧರಿಸಿ ನಿಂತಿರುವ ಭಾರತೀಯ ಮೂಲದ ಅಮೆರಿಕನ್ ಕೀರ್ತನ್ ಅಮೃತಾ.

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಸಾಧುಗಳಿಂದ ಕಲಿತ ವಿದ್ಯೆಯ ಪ್ರಯೋಗ...ವಿದೇಶಿ ಭಕ್ತೆಯರಿಂದ ಕುಂಭಮೇಳದಲ್ಲಿ ಹೋಮ ಹವನ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ದಾಲಾಯಿ ಲಾಮ ಸೇರಿದಂತೆ ಧರ್ಮಗುರುಗಳೊಂದಿಗೆ ಬಾಬಾ ರಾಮದೇವ್

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಅಲಹಾಬಾದಿನ ಸಂಗಮದ ಬಳಿ ಭಾವ ಪರವಶವಾಗಿ ಕುಣಿಯುತ್ತಿರುವ ಇಸ್ಕಾನ್ ಪಂಥದ ಅನುಯಾಯಿ ವಿದೇಶಿ ಭಕ್ತೆ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ಲಿಂಗರೂಪಿ ಪರಮಶಿವನಿಗೆ ವಿದೇಶಿ ಭಕ್ತೆಯರಿಂದ ಅಭಿಷೇಕ ಸೇವೆ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ದೀಕ್ಷೆ ಪಡೆದ ನಂತರ ಸಾಧುಗಳಿಂದ ಕಲಿತ ವಿದ್ಯೆಯ ಪ್ರಯೋಗ...ವಿದೇಶಿ ಭಕ್ತಾದಿಗಳಿಂದ ಕುಂಭಮೇಳದಲ್ಲಿ ಹೋಮ ಹವನ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಮಹಾ ಕುಂಭಮೇಳದಲ್ಲಿ ಪವಿತ್ರ ಗಂಗಾ ನದಿಗೆ ಆರತಿ ಬೆಳಗುತ್ತಿರುವ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದ ಆರಂಭದ ದಿನಗಳಲ್ಲಿ ಕಂಡ ವಿದೇಶಿ ಭಕ್ತೆಗೆ ಎಲ್ಲರಿಗೂ ನಮಸ್ಕರಿಸುವುದೇ ಸಂಭ್ರಮದ ವಿಷಯ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ವಿದೇಶಿಯರು ಆಕರ್ಷಿಸುತ್ತಿರುವ ಸಾಮೂಹಿಕ ಯೋಗ ಕಾರ್ಯಕ್ರಮ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ವಿದೇಶಿಯರು ಆಕರ್ಷಿಸುತ್ತಿರುವ ಸಾಮೂಹಿಕ ಯೋಗ ಕಾರ್ಯಕ್ರಮ

ಕುಂಭಮೇಳದಲ್ಲಿ ವಿದೇಶಿಯರು

ಕುಂಭಮೇಳದಲ್ಲಿ ವಿದೇಶಿಯರು

ಪೆಶ್ವೆ ಮೆರವಣಿಗೆಯಲ್ಲಿ ಭಾರತೀಯ ಸಾಧುಗಳ ಜೊತೆಗೆ ವಿದೇಶಿ ಸನ್ಯಾಸಿಗಳ ಮಹಾ ಮೆರವಣಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+