ಪ್ರೀತಿ: ಚನ್ನಪಟ್ಟಣ 2 ವಿದ್ಯಾರ್ಥಿಗಳ ಸಾವು, ಯುವತಿ ಪಾರು

ಮಲ್ಪೆಯ ಬದಿನಿದಿಯೂರು ಸಮೀಪ ಕಡಿಕೆ ಬಳಿ ಭಾನುವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು 19ರ ಹರಯದ ಮಧು ಮತ್ತು ಹೇಮಂತ್ ಎಂದು ಗುರುತಿಸಲಾಗಿದೆ. ಬದುಕುಳಿದಿರುವ ಯುವತಿಯನ್ನು 18 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಸೌಮ್ಯ, ಸದ್ಯಕ್ಕೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾಳೆ.
10 ದಿನಗಳ ಹಿಂದೆ ಈ ಮೂವರೂ ನಾಪತ್ತೆಯಾಗಿರುವ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹೇಮಂತ್ ಮತ್ತು ಸೌಮ್ಯ ಪ್ರೇಮಪಾಶಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಆದರೆ ಅವರ ಕುಟುಂಬದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ ಮಲ್ಪೆಗೆ ಬಂದಿಳಿದ ತ್ರಿಮೂರ್ತಿಗಳು ಮಧ್ಯಾಹ್ನ ಊಟ ಮಾಡಿದ್ದಾರೆ. ಆದರೆ ಅದರ ಜತೆಗೆ ಕೀಟನಾಶಕವನ್ನೂ ಸೇವಿಸಿದ್ದಾರೆ. ಕೀಟನಾಶಕ ಸೌಮ್ಯಳ ಮೇಲೆ ನಿರೀಕ್ಷಿತ ಪರಿಣಾಮ ಬೀರಿಲ್ಲ. ತಕ್ಷಣ ಅವಳು ವಾಂತಿ ಮಾಡಿಕೊಂಡಿದ್ದಾಳೆ. ಈ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ಖುದ್ದು ಸೌಮ್ಯ ನೀಡಿದ್ದಾಳೆ.
ಹೇಮಂತ್ ಕಣ್ವ ಗ್ರಾಮದವನು. ಸೌಮ್ಯ ಅಣಮನಹಳ್ಳಿಯವಳು. ಇವರಿಬ್ಬರ ಮಧ್ಯೆ, ಮಧು ತಿಮ್ಮನದೊಡ್ಡಿ ಗ್ರಾಮದವನು. ಇವನು ಸೌಮ್ಯಗೆ ಆಪ್ತಮಿತ್ರ. ಜನವರಿ 22ರಂದು ಸೌಮ್ಯ ಒಂದಷ್ಟು ಚಿನ್ನ ಒಡವೆ ಗಂಟು ಕಟ್ಟಿಕೊಂಡು ತವರಿನಿಂದ ನಿಗೂಢವಾಗಿ ಹೊರನಡೆದಿದ್ದಾಳೆ. ಅಂದೇ ಹೇಮಂತ ಮತ್ತು ಮಧು ಸಹ ಮನೆ ಬಿಟ್ಟಿದ್ದರು.












Click it and Unblock the Notifications