ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದ್ದ ಒಂದೇ ಒಂದು ಪಾಸ್ ವರ್ಡ್ ಬೆಲೆ ಎಷ್ಟು ಗೊತ್ತೆ?

By Rajendra
|
Google Oneindia Kannada News

Twitter
ಸ್ಯಾನ್ ಫ್ರಾನ್ಸಿಸ್ಕೋ, ಫೆ.3: ಅತಿದೊಡ್ಡ ಸಾಮಾಜಿಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದು ಸರಿಸುಮಾರು 2.50 ಲಕ್ಷ ಟ್ವಿಟ್ಟರ್ ಅಕೌಂಟ್ ಗಳು ಹ್ಯಾಕ್ ಆಗಿವೆ. ಬಳಕೆದಾರರ ಪಾಸ್ ವರ್ಡ್ ಸೇರಿದಂತೆ ಹಲವು ಮಾಹಿತಿಗಳು ಸೋರಿಕೆಯಾಗಿವೆ.

ಅಂದಹಾಗೆ ಕದ್ದ ಒಂದೇ ಒಂದು ಪಾಸ್ ವರ್ಡ್ ಕಾಳಸಂತೆಯಲ್ಲಿ ಎಷ್ಟಕ್ಕೆ ಮಾರಾಟವಾಗುತ್ತದೆ ಗೊತ್ತೆ? ಒಮ್ಮೆ ಹ್ಯಾಕರ್ ಗಳ ಕೈಗೆ ಪಾಸ್ ವರ್ಡ್ ಸಿಕ್ಕಿದರೆ ಅದನ್ನು ಕಾಳಸಂತೆಯಲ್ಲಿ ಅವರು ಸುಮಾರು 20 ಡಾಲರ್ ಗಳಿಗೆ ಮಾರಾಟ ಮಾಡಿಕೊಳ್ಳುತ್ತಾರೆ.

ಸುಲಭವಾದ, ಸರಳವಾದ ಪಾಸ್ ವರ್ಡ್ ಗಳನ್ನು ಹ್ಯಾಕ್ ಮಾಡುವುದು ಹ್ಯಾಕರ್ ಗಳ ಪಾಲಿಗೆ ನೀರು ಕುಡಿದಷ್ಟೇ ಸಲೀಸು. ಅಂದಹಾಗೆ ಅತ್ಯಂತ ಸುಲಭವಾಗಿ ಹ್ಯಾಕ್ ಆಗಿರುವ ಪಾಸ್ ವರ್ಡ್ ಯಾವುದು ಗೊತ್ತೆ? "password" ಎಂಬ ಪದ!

ಒಟ್ಟಿನಲ್ಲಿ ಟ್ವಿಟ್ಟರ್ ಮೇಲೆ ನಡೆದಿರುವ ದಾಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗಿದೆ. ಇದರಲ್ಲಿ ಹವ್ಯಾಸಿ ಸೈಬರ್ ಕಳ್ಳರ ಕೈವಾಡ ಇದ್ದಂತಿಲ್ಲ. ಟ್ವಿಟ್ಟರ್ ಬಳಕೆದಾರರು ತಮ್ಮ ಪಾಸ್ ವರ್ಡ್ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ ಟ್ವಿಟ್ಟರ್ ಭದ್ರತಾ ನಿರ್ದೇಶಕ ಬಾಜ್ ಲಾರ್ಡ್.

ಹ್ಯಾಕರ್ ಗಳು ತುಂಬಾ ಅನುಭವಿಗಳು. ಅವರಿಗೆ ಎಲ್ಲಾ ಅತ್ಯಾಧುನಿಕ ತಂತ್ರಗಳು ತಿಳಿದಿವೆ. ಹಲವು ಸಂಸ್ಥೆಗಳು ಹಾಗೂ ಕಂಪನಿಗಳ ಅಂತರ್ಜಾಲ ತಾಣಗಳ ಮೇಲೂ ಈ ರೀತಿ ದಾಳಿಯಾಗಿದೆ. ಹ್ಯಾಕರ್ ಗಳು ಜಾವಾ ಸಾಫ್ಟ್ ವೇರ್ ಬಳಕೆಯಲ್ಲಿ ನುರಿತವರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎಲ್ಲರ ಪಾಸ್ ವರ್ಡ್ ಬದಲಾಯಿಸುವಂತೆ ಟ್ವಿಟ್ಟರ್ ತಮ್ಮ ಬಳಕೆದಾರರಿಗೆ ಇ-ಮೇಲ್ ರವಾನಿಸಿದೆ. ಅತ್ಯುತ್ತಮ ಪಾಸ್ ವರ್ಡ್ ಹವ್ಯಾಸಗಳನ್ನು ರೂಢಿಸಿಕೊಳ್ಳವಂತೆ ಮಾಡಲು ಟ್ವಿಟ್ಟರ್ ತನ್ನ ಬಳಕೆದಾರರಿಗೆ ಉತ್ತೇಜನ ನೀಡಲು ಮುಂದಾಗಿದೆ.

English summary
Twitter said that hackers, in the latest online attack, may have gained access to information on a quarter of a million of its more than 200 million active users. The passwords can be valuable on auction-like black market sites where a single password can fetch $20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X