ಬಿಜೆಪಿ ಶಾಮಿಯಾನ, ಕೆಜೆಪಿ ಸರ್ಕಸ್ ಟೆಂಟ್

ಭಾರತಿಯ ಜನತಾ ಪಕ್ಷ ಶಾಮಿಯಾನ ಇದ್ದಂತೆ. ಅದಕ್ಕೆ ಹತ್ತಾರು ಆಧಾರ ಸ್ತಂಭಗಳಿರುತ್ತವೆ. ಅದರಲ್ಲಿ ಒಂದರೆಡು ಬಿದ್ದರೂ ಸಮಸ್ಯೆಯಾಗುವುದಿಲ್ಲ. ತನ್ನ ಕಾರ್ಯಕರ್ತರಿಗೆ ನೆರಳು ಕೊಡುತ್ತದೆ. ಆದರೆ ಸರ್ಕಸ್ ಟೆಂಟ್‌ಗೆ ಮಧ್ಯಭಾಗದಲ್ಲಿ ಒಂದೇ ಸ್ತಂಭ ಇರುತ್ತದೆ ಅದು
ಕುಸಿದುಬಿದ್ದರೆ ಇಡೀ ಟೆಂಟ್ ಮಗುಚಿಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ತಿಮಿಂಗಿಲಗಳಿಗೆ ಹೆದರಿದರೆ ಹೇಗೆ ?: ನಮ್ಮ ಸರ್ಕಾರ ಕಾರ್ಯಕರ್ತರ ಆಧಾರದಲ್ಲಿ ನಿಂತಿದೆ. ವಿಧಾನಸಭೆ ಬಲಾಬಲ ಪ್ರದರ್ಶನದ ಅಖಾಡ. ಅಲ್ಲಿ ಹಾಜರಿರುವ ಸದಸ್ಯರ ಸಂಖ್ಯೆ ಆಧಾರದಲ್ಲಿ ಬಹುಮತ ನಿರ್ಧಾರವಾಗುತ್ತದೆ.
ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಸಮುದ್ರ ಸ್ನಾನಕ್ಕೆ ಇಳಿದಮೇಲೆ ಅಲೆಗಳು, ಮಿಂಗಿಲಗಳಿಗೆ ಹೆದರಿದರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದ ಜನತೆ ಬಿಜೆಪಿಯನ್ನು 5 ವರ್ಷದ ಅವಧಿಗೆ ಆಯ್ಕೆ ಮಾಡಿದ್ದಾರೆ.
ಹಾಲಿ ಮುಖ್ಯಮಂತ್ರಿ ಬಿಜೆಪಿ ಕಟ್ಟಿದ ಹಿರಿಯ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಅವರ ಚಿಕ್ಕಪ್ಪ ಎಸ್.ಎಸ್.ಶೆಟ್ಟರ್ 1967ರಲ್ಲೇ ಜನಸಂಘದಿಂದ ಶಾಸಕರಾದವರು. ಅಂತಹ ಕುಟುಂಬದಿಂದ ಬಂದ ಶೆಟ್ಟರ್‌ರವರೂ ಸಹ ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳು.
ರಾಜ್ಯ ಸರ್ಕಾರದ ನೇತೃತ್ವ ವಹಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಹಲವು ವರ್ಷಗಳ ನಿರೀಕ್ಷೆಯನ್ನು ನಿಜಗೊಳಿಸಿದವರು. ಅಂತಹವರು ಬಜೆಟ್ ಮಂಡಿಸಲು ಮುಂದಾದರೆ ಅದಕ್ಕೆ ಅಡ್ಡಿ
ಪಡಿಸುತ್ತಿರುವವರ ಉದ್ದೇಶ ನಮಗೆ ಅರ್ಥವಾಗುತ್ತಿಲ್ಲ ಎಂದರು.
ಹಾಗೇನಾದರೂ ಬಜೆಟ್‌ಗೆ ಅಡ್ಡಿಪಡಿಸಿದರೆ ಅದು ಹೊಟ್ಟೆ ಕಿಚ್ಚಿನ ಪರಮಾವಧಿಯಾಗುತ್ತದೆ ಎಂದ ಅವರು, ಬಿಜೆಪಿಯಲ್ಲಿ ಜಗಳ ನಡೆದಿದೆ ಆದರೆ ಜನತೆಗೆ ಮೋಸ ಮಾಡಿಲ್ಲ. ಜಗಳವಾಡಿದ್ದನ್ನು ತೆಗೆದಿಟ್ಟರೆ ಬಿಜೆಪಿ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಹಿಂದಿನ ಯಾವ ಸರ್ಕಾರವೂ
ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಗಳಮಾಡಿದ್ದಕ್ಕಾಗಿ ಜನರಲ್ಲಿ ಕ್ಷಮೆ ಕೇಳುತ್ತೇವೆ. ಒಳ್ಳೆಯ ಕೆಲಸ
ಮಾಡಿರುವುದಕ್ಕಾಗಿ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.












Click it and Unblock the Notifications