ಬೆಂಗಳೂರಿನಲ್ಲಿ ಸೌದಿ ಪೆಟ್ರೋ ಕಂಪನಿ ಸ್ಥಾಪನೆ

Saudi petro giant to set up centres in Bangalore, Shanghai
ಬೆಂಗಳೂರು, ಜ.28: ಐಟಿ ಸಿಟಿ ಬೆಂಗಳೂರಿನತ್ತ ಸೌದಿ ಮೂಲದ ಪೆಟ್ರೋಕೆಮಿಕಲ್ ಕಂಪನಿ ದಾಪುಗಾಲು ಇರಿಸಿದೆ. ಇದರಿಂದ ಪೆಟ್ರೋಲ್ ಕೊರತೆ ನೀಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಜಾಗತಿಕವಾಗಿ ಬೆಂಗಳೂರಿನ ಮಟ್ಟ ಏರಿಕೆಯಾಗಲಿದೆ.

ಸೌದಿ ಅರೇಬಿಯಾದ ಪ್ರಮುಖ ಪೆಟ್ರೋ ಕೆಮಿಕಲ್ ಕಂಪನಿ ಬೆಂಗಳೂರು ಹಾಗೂ ಚೀನಾದ ಶಾಂಘೈ ನಗರದಲ್ಲಿ ತನ್ನ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಸಿದೆ.

Saudi Basic Industries Corporation (SABIC) ತನ್ನ ಅತ್ಯಾಧುನಿಕ ಸೌಲಭ್ಯವುಳ್ಳ ಕೇಂದ್ರಗಳನ್ನು ಬೆಂಗಳೂರು ಹಾಗೂ ಶಾಂಘೈನಲ್ಲಿ ಆರಂಭಿಸಿದೆ. ಸುಮಾರು 500 ಜನ ವೃತ್ತಿಪರರನ್ನು ಈ ಕೇಂದ್ರಗಳು ಹೊಂದಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವಿಶ್ವದಾದ್ಯಂತ ಸುಮಾರು 18ಕ್ಕೂ ಅಧಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು SABIC ಹೊಂದಿದೆ. ಬೆಂಗಳೂರಿನ ಕೇಂದ್ರ 2013ರ ಎರಡನೇ ತ್ರೈಮಾಸಿಕದಲ್ಲಿ ಆರಂಭವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಮಾಹಿತಿ ಆಧಾರಿತ ಸೇವೆ ಒದಗಿಸುವಲ್ಲಿ ಬೆಂಗಳೂರು ಮಂಚೂಣಿಯಲ್ಲಿದೆ. ಹೀಗಾಗಿ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ನಮ್ಮ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂಡು SABIC ಸಿಇಒ ಮಹಮ್ಮದ್ ಅಲ್ ಮಾಡಿ ಹೇಳಿದ್ದಾರೆ.

ಬೆಂಗಳೂರು ಹಾಗೂ ಶಾಂಘೈ ಸೇರಿದಂತೆ ಒಟ್ಟು ನಾಲ್ಕು ಕೇಂದ್ರಗಳ ಮೇಲೆ SABIC ಸುಮಾರು ಅರ್ಧ ಬಿಲಿಯನ್ ಯುಎಸ್ ಡಾಲರ್ ಬಂಡವಾಳ ಹೂಡಿಕೆ ಮಾಡಿದೆ. ರಸಾಯನ ವಿಜ್ಞಾನ, ಮೆಟಿರಿಯಲ್ ಸೈನ್ಸ್, ಪ್ರೊಸೆಸ್ ಇಂಜಿನಿಯರಿಂಗ್ ಹಾಗೂ ಅನಾಲಿಟಕಲ್ ಮತ್ತು ಅಪ್ಲಿಕೇಷನ್ ತಂತ್ರಾಂಶದ ಬಗ್ಗೆ ಸಂಸ್ಥೆ ಸಂಶೋಧನೆ ಮುಂದುವರೆಸಲಿದೆ. ಬೆಂಗಳೂರು ಕೇಂದ್ರ ಅಪ್ಲಿಕೇಷನ್ ಡೆವಲಪ್ಮೆಂಟ್, ಕಾರ್ಪೊರೇಟ್ ರಿಸರ್ಚ್ ವಿಭಾಗಗಳ ಸೇವೆ ಒದಗಿಸಲಿದೆ.

SABIC ಸಂಸ್ಥೆ ಇನ್ನೋವೇಟಿವ್ ಪ್ಲಾಸ್ಟಿಕ್ ಉತ್ಪಾದನೆಗೆ ಹೆಸರುವಾಸಿಯಾಗಿದೆ.ಸಂಸ್ಥೆಯಿಂದ ತಯಾರಾದ ರೆಸಿನ್ಸ್, ಪಿವಿಸಿ ಹಾಗೂ ಪಾಲಿಸ್ಟರ್ ಇತ್ಯಾದಿ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಇದಲ್ಲದೆ, ರಸಗೊಬ್ಬರ, ರಾಸಾಯನಿಕ ಕ್ಷೇತ್ರದಲ್ಲೂ SABICಗೆ ಒಳ್ಳೆ ಹೆಸರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+