ನೈಟ್ ಕ್ಲಬ್ ದುರಂತ: 233 ಮಂದಿ ಸುಟ್ಟು ಕರಕಲು
ಸಾಂತಾ ಮರಿಯಾ (ಬ್ರೆಜಿಲ್) ಜ.28: ನಿನ್ನೆ ವಾರಂತ್ಯದಲ್ಲಿ ಭಾರಿ ಅಗ್ನಿ ಪ್ರಮಾದ ನಡೆದಿದ್ದು, ಕುಖ್ಯಾತ ನೈಟ್ ಕ್ಲಬ್ ಅಗ್ನಿ ದುರಂತಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.
ದಕ್ಷಿಣ ಬ್ರೆಜಿಲ್‌ನ ಸಾಂತಾ ಮರಿಯಾ ಪಟ್ಟಣದಲ್ಲಿ ನೈಟ್ ಕ್ಲಬ್ ನಲ್ಲಿ ಭಾನುವಾರ ಬೆಳಗಿನ ಜಾವ ಈ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 233 ಮಂದಿ ಅಗ್ನಿಗೆ ಆಹುತಿಯಾಗಿದ್ದಾರೆ.

ವಾದ್ಯ ತಂಡ ಬಾಣ ಬಿರುಸುಗಳನ್ನು ಪ್ರದರ್ಶಿಸುವ ವೇಳೆ ಈ ಅವಘಡ ಸಂಭವಿಸಿದೆ. ಬ್ಯಾಂಡ್ ತಂಡದ ಸದಸ್ಯ ನೃತ್ಯದ ಒಂದು ಭಾಗವಾಗಿ ಭಗ್ಗನೆ ಬೆಂಕಿ ಹೊತ್ತಿಸಿದ್ದಾನೆ. ಆ ಬೆಂಕಿ ಸೀಲಿಂಗ್ ಗೆ ತಾಕಿದೆ. ಕ್ಷಣಾರ್ಧದಲ್ಲಿ ಅದು ಎಲ್ಲೆಡೆ ಹರಡಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ದುರಂತ ಸಂಭವಿಸಿದ ಸಾಂತಾ ಮಾರಿಯಾ ಪಟ್ಟಣದಲ್ಲಿರುವ ಕಿಸ್ ನೈಟ್ ಕ್ಲಬ್‌ನಿಂದ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಹಲವರು ಉಸಿರುಗಟ್ಟಿ ಸತ್ತರೆ, ಇನ್ನು ಕೆಲವರು ತುಳಿತಕ್ಕೆ ಸಿಲುಕಿ ಮೃತಪಟ್ಟರು. ಬೆಂಕಿ ಆಕಸ್ಮಿಕ ಸಂಭವಿಸುವ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಮಂದಿ ನೈಟ್ ಕ್ಲಬ್‌ನ ಒಳಗಿದ್ದರು ಎಂದು ರಕ್ಷಣಾ ಕಾರ್ಯ ಕೈಗೊಂಡಿರುವ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ನೈಟ್‌ಕ್ಲಬ್‌ನಲ್ಲಿ ಹೊರ ಹೋಗಲು ಇದ್ದುದು ಒಂದೇ ದಾರಿ. ಒಳಗಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಪಡೆಯವರು ಗೋಡೆಯನ್ನು ಒಡೆದು ಒಳ ಪ್ರವೇಶಿಸಿದರು.












Click it and Unblock the Notifications